TOP NEWS

Big News: ರಾಜ್ಯಾದ್ಯಂತ ಗುಟ್ಕಾ, ಪಾನ್ ಮಸಾಲಾ ಮಾರಾಟಕ್ಕೆ ಬ್ರೇಕ್

Big news Karnataka Bans Production Sale of Tobacco and Nicotine Mixed Pan Masala

ಬೆಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಕರ್ನಾಟಕ ಸರ್ಕಾರ, ಬುಧವಾರದಂದು ಮಹತ್ವದ (Big News) ತೀರ್ಮಾನವೊಂದನ್ನು ಪ್ರಕಟಿಸಿದೆ. ತಂಬಾಕು ಹಾಗೂ ನಿಕೋಟಿನ್ ಅಂಶಗಳನ್ನು ಒಳಗೊಂಡಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ಬಳಕೆಯ ಮೇಲೆ ಮುಂದಿನ ಒಂದು ವರ್ಷದ ಅವಧಿಗೆ ಸಂಪೂರ್ಣ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಹೊಸ ನಿಯಮದ ಪ್ರಕಾರ, ನಿಕೋಟಿನ್ ಮತ್ತು ತಂಬಾಕು ಮಿಶ್ರಿತ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಹಾಗೂ ಮಾರಾಟವನ್ನು ರಾಜ್ಯಾದ್ಯಂತ ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ಆಹಾರ ಸುರಕ್ಷತಾ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಬಿಡಿ ತಂಬಾಕು ಪ್ಯಾಕೆಟ್‌ಗಳಿಗೂ ಅನ್ವಯ ಕೇವಲ ಸಿದ್ಧಪಡಿಸಿದ ಪಾನ್ ಮಸಾಲಾ ಮಾತ್ರವಲ್ಲದೆ, ಗ್ರಾಹಕರು ಸುಲಭವಾಗಿ ಮಿಶ್ರಣ ಮಾಡಿ ಬಳಸಲು ಅನುಕೂಲವಾಗುವಂತೆ ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಲಾಗುವ ಬಿಡಿ ತಂಬಾಕು ಉತ್ಪನ್ನಗಳಿಗೂ ಈ ನಿಷೇಧದ ನಿಯಮಗಳು ಅನ್ವಯಿಸಲಿವೆ ಎಂದು ಸರ್ಕಾರ ತಿಳಿಸಿದೆ.

ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ಸರ್ಕಾರದ ಈ ಕ್ರಾಂತಿಕಾರಿ ನಿರ್ಧಾರದಿಂದಾಗಿ ಇಂತಹ ಮಾರಕ ಉತ್ಪನ್ನಗಳ ಉತ್ಪಾದನೆ ಹಾಗೂ ಸಪ್ಲೈ ಚೈನ್‌ಗೆ ಒಂದು ವರ್ಷದ ಮಟ್ಟಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ. ಒಂದು ವೇಳೆ ಸರ್ಕಾರದ ಈ ಆದೇಶವನ್ನು ಮೀರಿ ಕಾನೂನು ಬಾಹಿರವಾಗಿ ವ್ಯವಹಾರ ನಡೆಸುವ ತಯಾರಕರು, ಹೋಲ್‌ಸೇಲರ್‌ಗಳು ಹಾಗೂ ಚಿಲ್ಲರೆ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಮತ್ತು ವ್ಯಾಪಕ ತಪಾಸಣೆ ನಡೆಸಲು ಅಧಿಕಾರಿಗಳ ತಂಡ ಸಜ್ಜಾಗಿದೆ. ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುವ ತಂಬಾಕು ಹಾಗೂ ನಿಕೋಟಿನ್ ಹಾವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಈ ಕಠಿಣ ಹೆಜ್ಜೆ ಇಟ್ಟಿದೆ.

ಇದನ್ನೂ ಓದಿ: ಪೌರಕಾರ್ಮಿಕರಿಗೆ ಜಿಬಿಎ ಸಿಹಿಸುದ್ದಿ: ಮೂರು ವರ್ಷಗಳ ಬಳಿಕ ಸಿಗಲಿದೆ ಬೋನಸ್ ಭಾಗ್ಯ!

Leave a Reply

Your email address will not be published. Required fields are marked *