ಬೆಂಗಳೂರು: ಇಲ್ಲಿನ ಉದ್ಯಮಿಯೊಬ್ಬರು ತಮಗಿರುವ ‘ನನ್ನ ಕಂಪನಿ, ನನ್ನದೇ ನಿಯಮ’ ಎಂಬ (Bengaluru) ನಿಲುವಿನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಎ1 ಸ್ಪೋರ್ಟ್ಸ್ ವರ್ಲ್ಡ್ ಸಂಸ್ಥೆಯ ಸಂಸ್ಥಾಪಕರಾದ ಕಾರ್ತಿಕ್ ಎಸ್.ಜಿ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳ ಪುರುಷ ಅಭ್ಯರ್ಥಿಗಳನ್ನು ತಮ್ಮ ಸಂಸ್ಥೆಗೆ ಉದ್ಯೋಗಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪ್ರಕಟಿಸುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದ ಪೋಸ್ಟ್
ದೀರ್ಘ ಚರ್ಚೆ ಮತ್ತು ಜಗಳದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ ಕಾರ್ತಿಕ್, ‘ಈ ನಿರ್ಧಾರಕ್ಕಾಗಿ ಕ್ಷಮೆ ಇರಲಿ. ಆದರೆ ಉತ್ತರ ಭಾರತದ ಈ ನಾಲ್ಕು ರಾಜ್ಯಗಳ ಪುರುಷ ಅಭ್ಯರ್ಥಿಗಳಿಗೆ ಇನ್ಮುಂದೆ ನಮ್ಮ ಕಂಪನಿಯಲ್ಲಿ ಉದ್ಯೋಗ ನೀಡುವುದಿಲ್ಲ’ ಎಂದು ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ. ಇದೇ ವೇಳೆ ತಮ್ಮ ಸಂಸ್ಥೆಯಲ್ಲಿ ಈಗಾಗಲೇ ರಾಜಸ್ಥಾನ ಮೂಲದ ಮಹಿಳೆಯೊಬ್ಬರು ಕಾರ್ಯನಿರ್ವಹಿಸುತ್ತಿದ್ದು, ಅವರು ಕೂಡ ಈ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗತೊಡಗಿದವು.
Im sorry for this… But today we have made it very clear after lengthy discussion and quarrel… We will not hire any male candidates in our company who come from these 4 states in north india… 1. Uttar Pradesh. 2. Rajasthan. 3. Bihar. 4. Madhya Pradesh. We do have 1 Rajasthani already working for us. She has 100% supposed this.
— Karthik SG (@kkarthikkgs) September 22, 2026
ಕಾರ್ತಿಕ್ ಅವರ ಈ ಕ್ರಮವನ್ನು ಹಲವು ಬಳಕೆದಾರರು ತೀವ್ರವಾಗಿ ಖಂಡಿಸಿದ್ದಾರೆ. ವ್ಯಕ್ತಿಗಳ ರಾಜ್ಯ ಅಥವಾ ಹಿನ್ನೆಲೆಯನ್ನು ಆಧರಿಸಿ ತಾರತಮ್ಯ ಮಾಡುವುದು ಅತ್ಯಂತ ಅಜ್ಞಾನದ ಮತ್ತು ಸ್ವಪಕ್ಷಪಾತದ ನಡವಳಿಕೆ. ಒಬ್ಬ ಉದ್ಯೋಗಿಯನ್ನು ಆತನ ಅರ್ಹತೆ ಮತ್ತು ನಡವಳಿಕೆಯ ಆಧಾರದ ಮೇಲೆ ಅಳೆಯಬೇಕೇ ಹೊರತು ಆತ ಬರುವ ರಾಜ್ಯದ ಮೇಲಲ್ಲ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕ್, ‘ನನ್ನ ಕಂಪನಿ, ನನ್ನದೇ ನಿಯಮ. ನೀವು ನಿಮ್ಮ ಸ್ವಂತ ಕಂಪನಿ ತೆರೆದಾಗ ನಿಮ್ಮ ನಿಯಮಗಳನ್ನು ರೂಪಿಸಿಕೊಳ್ಳಿ. ಕಂಪನಿಯನ್ನು ಹೇಗೆ ನಡೆಸಬೇಕೆಂದು ನನಗೆ ಯಾರೂ ಜ್ಞಾನ ಬೋಧನೆ ಮಾಡುವುದು ಬೇಡ’ ಎಂದು ಖಾರವಾಗಿ ಉತ್ತರಿಸಿದ್ದಾರೆ.
ಕೆಲವರು ಇವರ ಈ ನಿಲುವನ್ನು ಬೆಂಬಲಿಸಿದರೆ, ಇನ್ನು ಕೆಲವರು ಅಪರಾಧ ಅಂಕಿಅಂಶಗಳನ್ನು ಉಲ್ಲೇಖಿಸಿ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಎಲ್ಲ ರಾಜ್ಯಗಳಲ್ಲೂ ನಡೆಯುತ್ತವೆ. ಈ ರೀತಿಯ ತರ್ಕವನ್ನು ಅನ್ವಯಿಸುವುದಾದರೆ ವಿದೇಶಗಳಿಂದಷ್ಟೇ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಕಾರಣ ಬಹಿರಂಗಪಡಿಸಿದ ಸಿಇಓ
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ಕಾರ್ತಿಕ್ ಈ ನಿರ್ಧಾರಕ್ಕೆ ಕಾರಣವಾದ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಈ ನಾಲ್ಕು ರಾಜ್ಯಗಳ ಪೈಕಿ ಒಂದಕ್ಕೆ ಸೇರಿದ ಉದ್ಯೋಗಿಯೊಬ್ಬ ಮಹಿಳಾ ಸಿಬ್ಬಂದಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಎರಡು ಬಾರಿ ಎಚ್ಚರಿಕೆ ನೀಡಿದರೂ ಆತನ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಆತ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿ ಬಲವಂತ ಮಾಡಲು ಯತ್ನಿಸಿದ್ದರಿಂದ ಆತನನ್ನು ಕೆಲಸದಿಂದ ವಜಾಗೊಳಿಸಲಾಯಿತು. ತಮ್ಮ ಸಂಸ್ಥೆಯಲ್ಲಿ ಸಣ್ಣ ವಯಸ್ಸಿನ ಮಕ್ಕಳು ಮತ್ತು ಮಹಿಳೆಯರು ಕೆಲಸ ಮಾಡುತ್ತಿದ್ದು, ಇಂತಹ ವಿಕೃತ ಮನಸ್ಥಿತಿಯ ಜನರಿಗೆ ಅವಕಾಶ ನೀಡುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.
Let me get this right again… This mess started 2 weeks ago when an employee from one of the aforementioned mentioned state was fired, despite giving him warning 2wice he was still abusive to female employees, and he was forcing himself on one of them… We work with quite young kids… Do you think men with these ideology and mindset even deserve opportunity? Now after my yesterday’s post and replys, heres what ive noticed 1. We indian have become highly insecure and egoistic. Not ready to accept the probelms within. Instead either abuse or show whataboutery – look, look there they also did this, or look your ppl also did. Is this what out indian culture and society come to that we have stopped developing ourselves. This is the same mind set the man at the top works like, never ready to take blame for his actions, nor ready to accept any short coming. Sociologist (a subject which i love the most) say a human society grows faster, when they accept short comings and correct it. – I belive we indian have stopped now. 2. Now not pinpointing but have to put this out – why almost 85-90% every reply is coming from Bihar 3. We belive in equal opportunity , be it Gender, religion, caste or creed We have a total of 32 employees working of which 14 are female; 20 of which come from other states of which 12 from non south states; we have ppl from all religious faith be it hindu, muslim, Christian, Sikh or Buddhism. 4. All i want to is show a mirror to people who dont value human lives nor respect woman or children 5. Stop giving me gyan of my state, yes we know there are problems also, no place is white as a paper. But here we accept it and try to correct it. Offenders are behind bars. Now I rest… thank you
— Karthik SG (@kkarthikkgs) September 23, 2026
ತಮ್ಮ ಸಂಸ್ಥೆಯಲ್ಲಿ ಪ್ರಸ್ತುತ ೩೨ ಉದ್ಯೋಗಿಗಳಿದ್ದು, ಅವರಲ್ಲಿ ೧೪ ಮಹಿಳೆಯರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಒಟ್ಟು ಸಿಬ್ಬಂದಿಯಲ್ಲಿ ೨೦ ಜನರು ಹೊರರಾಜ್ಯದವರಾಗಿದ್ದು, ಅದರಲ್ಲಿ ೧೨ ಜನರು ದಕ್ಷಿಣ ಭಾರತವಲ್ಲದ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ಸಮಯದಲ್ಲಿ ಬಿಹಾರದ ಜಮೂಯಿಯಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಯ ಜೊತೆಯಲ್ಲಿದ್ದ ಯುವಕನಿಗೆ ಗುಂಪೊಂದು ಕಿರುಕುಳ ನೀಡಿದ ವಿಡಿಯೋ ವೈರಲ್ ಆಗಿ, ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿತ್ತು. ಈ ಪ್ರಕರಣದ ಮುಖ್ಯ ಆರೋಪಿ ನಂದನ್ ಯಾದವ್ ಎಂಬಾತನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಬಂಧಿಸಿದ್ದರು. ದೇಶಾದ್ಯಂತ ಮಹಿಳಾ ಸುರಕ್ಷತೆಯ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಈ ಉದ್ಯಮಿಯ ಸಾಲಿಕ ನಿರ್ಧಾರವು ಜಾಲತಾಣಗಳಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: ವಿಐಪಿ ರೂಮ್‌ನಲ್ಲಿ ತಿಗಣೆ ಕಾಟ: ರೈಲ್ವೇ ಉನ್ನತಾಧಿಕಾರಿಗೆ ಶಾಕ್ ನೀಡಿದ ಕೋರ್ಟ್ ನೋಟಿಸ್!
