Bhojshala: ಹೈಕೋರ್ಟ್ ಮಹತ್ವದ ಆದೇಶ: ಭೋಜಶಾಲಾ ಮಂದಿರಕ್ಕೆ ವಾಗ್ದೇವಿ ವಿಗ್ರಹ ಮರಳುವ ಕಾಲ ಹತ್ತಿರ?
ಮಧ್ಯಪ್ರದೇಶ: ಇಲ್ಲಿನ ಹೈಕೋರ್ಟ್‌ನ ಇಂದೋರ್ ಪೀಠವು ಧಾರ ಜಿಲ್ಲೆಯ ವಿವಾದಿತ ಭೋಜಶಾಲಾ (Bhojshala) ಪ್ರಕರಣದಲ್ಲಿ ಇಂದು ಅತ್ಯಂತ ಮಹತ್ವದ ತೀರ್ಪು ಪ್ರಕಟಿಸಿದೆ. ಭೋಜಶಾಲಾ ಸಂಕೀರ್ಣವು ಮೂಲತಃ ಮಂದಿರವೇ ಎಂದು ಘೋಷಿಸಿರುವ ನ್ಯಾಯಾಲಯವು, ಈ ಐತಿಹಾಸಿಕ ವಿವಾದಕ್ಕೆ ದೊಡ್ಡ ತಿರುವು ನೀಡಿದೆ. ಪರಮಾರ ರಾಜವಂಶದ ರಾಜ ಭೋಜ ಅವರು ಸ್ಥಾಪಿಸಿದ ಈ ಸ್ಥಳವು ಸಂಸ್ಕೃತ ಅಧ್ಯಯನದ ಪ್ರಮುಖ ಕೇಂದ್ರವಾಗಿತ್ತು ಎಂಬ ಅಂಶವನ್ನು ಹೈಕೋರ್ಟ್ ಸ್ಪಷ್ಟವಾಗಿ ಮನ್ನಿಸಿದೆ. ನ್ಯಾಯಾಪೀಠ ಹೇಳಿದ್ದೇನು? ಭಾರತೀಯ ಪುರಾತತ್ವ ಇಲಾಖೆ (ASI) ಸಲ್ಲಿಸಿದ್ದ ವೈಜ್ಞಾನಿಕ ಸಮೀಕ್ಷೆಯ…
