Toxic: ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಮುಂಜಾನೆ ಶೋಗಳ ಅಬ್ಬರ: ಯಶ್ ಚಿತ್ರದ ರಿಲೀಸ್ ಪ್ಲಾನ್ ಇಲ್ಲಿದೆ!
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿರುವ ‘ಟಾಕ್ಸಿಕ್’ (Toxic) ಸಿನಿಮಾ ಕರ್ನಾಟಕದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರದ ಮೊದಲ ದಿನದ ಪ್ರದರ್ಶನಗಳ ಕುರಿತು ಚಿತ್ರ ನಿರ್ಮಾಣ ಸಂಸ್ಥೆಯು ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ರೋಮಾಂಚನವನ್ನು ಹೆಚ್ಚಿಸಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ದಿನ ದಾಖಲೆ ಸಂಖ್ಯೆಯ ಮುಂಜಾನೆಯ ಶೋಗಳನ್ನು (Early Morning Shows) ಆಯೋಜಿಸಲು ಚಿತ್ರತಂಡ ಬೃಹತ್ ಪ್ಲಾನ್ ಮಾಡಿಕೊಂಡಿದೆ. ರಾಜ್ಯದ…
