Sandeep

Even Leftover Food Tastes Like Wedding Meal Ex India Star ramesh On Shreyas Iyers First Win

Shreyas Iyer: ‘ಹಸಿದಾಗ ಹಳಸಿದ ಅನ್ನವೂ ಮದುವೆ ಊಟದಂತೆ’: ಶ್ರೇಯಸ್ ಅಯ್ಯರ್ ಗೆಲುವಿಗೆ ಮಾಜಿ ಕ್ರಿಕೆಟಿಗ ರಮೇಶ್ ಹಾಸ್ಯಮಯ ಪ್ರತಿಕ್ರಿಯೆ

ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಭಾರತ ತಂಡಕ್ಕೆ ಕೊನೆಗೂ ಜಿಂಬಾಬ್ವೆ ವಿರುದ್ಧ ಜಯ ಸಿಕ್ಕಿದೆ. ಸೂರ್ಯಕುಮಾರ್ ಯಾದವ್ ಅವರಿಂದ ನಾಯಕತ್ವ ವಹಿಸಿಕೊಂಡ ನಂತರ ಸತತ ಆರು ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದ್ದ ಶ್ರೇಯಸ್ ಅಯ್ಯರ್, (Shreyas Iyer) ಟಿ20 ನಾಯಕನಾಗಿ ತಮ್ಮ ಮೊದಲ ಗೆಲುವಿನ ಸಿಹಿ ಉಂಡಿದ್ದಾರೆ. ಹರಾರೆಯಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20ಯಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೋಲಿನ ಸರಣಿಗೆ ತೆರೆ ಎಳೆದಿದೆ. ಹಸಿದ…

Read More
CM Joseph Vijay Push for Cauvery Talks Sparks Political Storm in Tamil Nadu

Cauvery: ಕಾವೇರಿ ಸಂಧಾನಕ್ಕೆ ಮುಂದಾದ ಸಿಎಂ ಜೋಸೆಫ್ ವಿಜಯ್; ತಮಿಳುನಾಡಿನಲ್ಲಿ ಎದ್ದ ರಾಜಕೀಯ ಬಿರುಗಾಳಿ!

ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ದಶಕಗಳ ಬಳಿಕ ಮಹತ್ವದ (Cauvery) ರಾಜತಾಂತ್ರಿಕ ಬೆಳವಣಿಗೆಯೊಂದು ಆರಂಭವಾಗಿದ್ದು, ಇದು ತಮಿಳುನಾಡು ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಆಗಸ್ಟ್ 3 ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಕಾವೇರಿ ವಿಚಾರವಾಗಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕಳೆದ 16 ವರ್ಷಗಳಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಆದರೆ,…

Read More
Major Relief Govt Moves to Increase BPL Card Annual Income Ceiling to 3 Lakh KH Muniyappa

KH Muniyappa: ಗೋದಾಮುಗಳಿಗೆ ಸಿಸಿ ಕ್ಯಾಮರಾ ಹಾಗೂ ಪಡಿತರ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕ್ರಮ‌

ಬೆಂಗಳೂರು: ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವರಾದ ಕೆಹೆಚ್. ಮುನಿಯಪ್ಪ(KH Muniyappa) ಹಾಗೂ ಗ್ಯಾರಂಟಿ ಯೋಜನೆಗಳ‌ ಅನುಷ್ಠನಾ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ರವರ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು ರಾಜ್ಯವನ್ನ ಹಸಿವು ಮುಕ್ತ ಮಾಡಿದೆ ಈ ಸಭೆಯ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಆಹಾರ ಇಲಾಖೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು ಅನ್ನಬಾಗ್ಯ ಯೋಜನೆಯ ಮೂಲಕ ರಾಜ್ಯ ಸುಮಾರು 4.42ಕೋಟಿ ಫಲಾನುಭವಿಗಳಿಗೆ 10ಕೆಜಿ…

Read More
Supreme Court Sounds Alarm Over Vanishing Joint Families Issues Stern Warning to Parents Replacing Parenting with Gadgets

Supreme Court: ಅವಿಭಕ್ತ ಕುಟುಂಬಗಳ ಕಣ್ಮರೆಗೆ ಸುಪ್ರೀಂ ಕಳವಳ: ಮಕ್ಕಳ ಕೈಗೆ ಗ್ಯಾಜೆಟ್ ಇಡುವ ಪೋಷಕರಿಗೆ ಕೋರ್ಟ್ ಗಂಭೀರ ಎಚ್ಚರಿಕೆ

ನವದೆಹಲಿ: ಭಾರತದ ಸಾಂಪ್ರದಾಯಿಕ ಅವಿಭಕ್ತ ಕುಟುಂಬ ವ್ಯವಸ್ಥೆಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಕಳವಳ ವ್ಯಕ್ತಪಡಿಸಿದೆ. ಜಂಟಿ ಕುಟುಂಬಗಳ ಕಣ್ಮರೆ ಮತ್ತು ಮಕ್ಕಳ ಪಾಲನೆಗಾಗಿ ಪೋಷಕರು ಗ್ಯಾಜೆಟ್‌ಗಳ ಮೇಲೆ ಅತಿಯಾಗಿ ಅವಲಂಬಿತವಾಗುತ್ತಿರುವುದು ಭವಿಷ್ಯದಲ್ಲಿ ತೀವ್ರ ಸಾಮಾಜಿಕ ಪರಿಣಾಮಗಳನ್ನು ಬೀರಬಹುದು ಎಂದು ಗಂಭೀರ ಎಚ್ಚರಿಕೆ ನೀಡಿದೆ. ಹನಿಮೂನ್ ವೇಳೆಯಲ್ಲಿ ಪತಿಯ ಕೊಲೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಸೋನಂ ರಘುವಂಶಿ ಎಂಬಾಕೆಯ ಹೈಪ್ರೊಫೈಲ್ ‘ರಾಜಾ ರಘುವಂಶಿ ಹತ್ಯೆ ಪ್ರಕರಣ’ದ ಮೇಲ್ಮನವಿ ವಿಚಾರಣೆ ನಡೆಸುವ…

Read More
Bengaluru Shocker Men Chase Water Tanker for 4 km Smash Windows and Brutally Attack Driver

Bengaluru: ಸಿಲಿಕಾನ್ ಸಿಟಿಯಲ್ಲಿ ರೋಡ್ ರೇಜ್ ಕಿಚ್ಚು; ಚಾಲಕನ ತಲೆ ಒಡೆದ ಕಿಡಿಗೇಡಿಗಳು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ದಿನದಿಂದ ದಿನಕ್ಕೆ ವಾಹನ ಸವಾರರ ಆಕ್ರೋಶ ತಡೆರಹಿತವಾಗುತ್ತಿದ್ದು, ಕ್ಷುಲ್ಲಕ ಕಾರಣಗಳಿಗೆ ಜೀವಕ್ಕೆ ಕುತ್ತು ತರುವ ರೋಡ್ ರೇಜ್ ಪ್ರಕರಣಗಳು ಮಿತಿ ಮೀರುತ್ತಿವೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ, ರಾಜಧಾನಿಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ನೀರಿನ ಟ್ಯಾಂಕರ್ ಚಾಲಕನನ್ನು ಬರೋಬ್ಬರಿ ನಾಲ್ಕು ಕಿಲೋಮೀಟರ್‌ಗೂ ಹೆಚ್ಚು ದೂರ ಬೈಕ್‌ಗಳಲ್ಲಿ ಬೆನ್ನಟ್ಟಿದ ಪುಂಡರ ಗುಂಪೊಂದು, ಕಲ್ಲು ತೂರಾಟ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಭೀಕರ…

Read More
Crime BMTC Passengers Targeted in Bengaluru Two Members of Notorious Vomit Gang Arrested

Crime: ಬೆಂಗಳೂರಲ್ಲಿ ಬಿಎಂಟಿಸಿ ಪ್ರಯಾಣಿಕರೇ ಟಾರ್ಗೆಟ್: ‘ವಾಂತಿ ಗ್ಯಾಂಗ್’ ಇಬ್ಬರು ಕಳ್ಳರು ಪೊಲೀಸರ ವಶಕ್ಕೆ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಗ್ಧ (Crime) ಸಾರ್ವಜನಿಕರನ್ನು ವಂಚಿಸಿ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಲು ಖದೀಮರು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ವಿಶೇಷವಾಗಿ ಬಿಎಂಟಿಸಿ ಬಸ್ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕೈಚಳಕ ತೋರುತ್ತಿರುವ ‘ವಾಂತಿ ಗ್ಯಾಂಗ್’ ಮತ್ತು ಮಧ್ಯರಾತ್ರಿ ವಸತಿ ಪ್ರದೇಶಗಳಲ್ಲಿ ದರೋಡೆಗೆ ಇಳಿಯುತ್ತಿರುವ ‘ಮುಸುಕುಧಾರಿ ಕಳ್ಳರ’ ಹಾವಳಿ ನಗರದಲ್ಲಿ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ದಂದೆಗಳ ವಿರುದ್ಧ ಅಲರ್ಟ್ ಆಗಿರುವ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಕಟಕಟೆಗೆ ತಳ್ಳಿದ್ದಾರೆ. ಏನಿದು ‘ವಾಂತಿ ಗ್ಯಾಂಗ್’ ತಂತ್ರ?:…

Read More
Pandemonium in Upper House Bill Introduced Amid Ruckus Rajya Sabha Adjourned Till Monday

Rajya Sabha: ರಾಜ್ಯಸಭೆಯಲ್ಲಿ ನೀಟ್ ಅಸ್ತ್ರ, ಬಿರುಗಾಳಿ ಎಬ್ಬಿಸಿದ ವಿಪಕ್ಷಗಳು: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಖರ್ಗೆ ಬಿಗಿಪಟ್ಟು

ನವದೆಹಲಿ: ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ‘ರಾಷ್ಟ್ರಗೌರವಕ್ಕೆ ಅಪಮಾನ ತಡೆ ತಿದ್ದುಪಡಿ ಮಸೂದೆ-2026’ ಮಂಡನೆಯನ್ನು ವಿರೋಧಿಸಿ ವಿರೋಧ ಪಕ್ಷಗಳು ಸದನದ ಬಾವಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದರಿಂದ, ಸಂಸತ್ತಿನ ಮುಂಗಾರು ಅಧಿವೇಶನದ ಶುಕ್ರವಾರದ ರಾಜ್ಯಸಭಾ (Rajya Sabha) ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ. ಸೋಮವಾರ ಆರಂಭವಾದ ಮುಂಗಾರು ಅಧಿವೇಶನದ ಮೊದಲ ದಿನದಿಂದಲೂ ವಿರೋಧ ಪಕ್ಷಗಳ ಸರಣಿ ಆಕ್ರೋಶ ಮತ್ತು ಗದ್ದಲದಿಂದಾಗಿ ಮೇಲ್ಮನೆಯಲ್ಲಿ ಯಾವುದೇ ಮಹತ್ವದ ಕಲಾಪಗಳು ನಡೆಯದಂತಾಗಿದೆ. ಎರಡು ಬಾರಿ ಮುಂದೂಡಲ್ಪಟ್ಟ ಕಲಾಪ ಶುಕ್ರವಾರ ಬೆಳಗ್ಗೆಯಿಂದಲೇ ಎರಡು…

Read More