BK Hariprasad: ಅಯೋಧ್ಯೆಯಲ್ಲಿ ಇನ್ಮುಂದೆ ‘ಹುಂಡಿ ಕಳ್ಳರಿದ್ದಾರೆ ಎಚ್ಚರಿಕೆ’ ಬೋರ್ಡ್ ಹಾಕಬೇಕು: ರಾಮಮಂದಿರ ಹಗರಣಕ್ಕೆ ಬಿ.ಕೆ. ಹರಿಪ್ರಸಾದ್ ಲೇವಡಿ
ಬೆಂಗಳೂರು: ಅಯೋಧ್ಯೆ ರಾಮಮಂದಿರದ ಕಾಣಿಕೆ ಹಣ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಬಿಜೆಪಿ ಹಾಗೂ ಮಂದಿರದ ಟ್ರಸ್ಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಾಮಾನ್ಯವಾಗಿ ನಾವು ದೇವಸ್ಥಾನಗಳಿಗೆ ಹೋದಾಗ ‘ಚಪ್ಪಲಿ ಕಳ್ಳರಿದ್ದಾರೆ ಎಚ್ಚರಿಕೆ’ ಎಂಬ ಬೋರ್ಡ್‌ಗಳನ್ನು ನೋಡಿರುತ್ತೇವೆ. ಆದರೆ ಅಯೋಧ್ಯೆಯ ಲೂಟಿಯನ್ನು ಗಮನಿಸಿದರೆ, ಇನ್ಮುಂದೆ ಅಲ್ಲಿ ‘ಹುಂಡಿ ಕಳ್ಳರಿದ್ದಾರೆ ಎಚ್ಚರಿಕೆ’ ಎಂದು ಬೋರ್ಡ್ ಹಾಕಬೇಕಾದ ದುಸ್ಥಿತಿ ಬಂದಿದೆ” ಎಂದು ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದಾರೆ. ಅಧಿಕಾರಕ್ಕೆ…
