TOP NEWS

Big News: ಬೊಲಿವಿಯಾ ಸೇನಾ ಬ್ಯಾರಾಕ್ಸ್‌ನಲ್ಲಿ ಭೀಕರ ಸರಣಿ ಸ್ಪೋಟ: ಇಬ್ಬರು ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ!

Big news Massive Explosion Hits Bolivia Military Base Pyrotechnic Storehouse Engulfed in Flames

ಲಾ ಪಾಝ್: ದಕ್ಷಿಣ ಅಮೆರಿಕದ ಬೊಲಿವಿಯಾ ದೇಶದ ಸೇನಾ ಬ್ಯಾರಾಕ್ಸ್ ಒಂದರಲ್ಲಿ ಸಂಭವಿಸಿದ ಸರಣಿ ಸ್ಪೋಟದಲ್ಲಿ ಕನಿಷ್ಠ ಇಬ್ಬರು ಸಜೀವವಾಗಿ ದಹನಗೊಂಡಿದ್ದು, 50ಕ್ಕೂ ಹೆಚ್ಚು ಜನರು ತೀವ್ರವಾಗಿ (Big News) ಗಾಯಗೊಂಡಿದ್ದಾರೆ. ಬೊಲಿವಿಯಾದ ಆಡಳಿತಾತ್ಮಕ ರಾಜಧಾನಿ ಲಾ ಪಾಝ್‌ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ನಗರ ವಿಯಾಚಾದಲ್ಲಿರುವ ಸೇನಾ ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಮಧ್ಯಾಹ್ನ ಸುಮಾರು 2:30ರ ಸುಮಾರಿಗೆ ಸಂಭವಿಸಿದ ಭೀಕರ ಸ್ಪೋಟ

ಶುಕ್ರವಾರ ಮಧ್ಯಾಹ್ನ ಸುಮಾರು 2:30ರ ಸುಮಾರಿಗೆ ಈ ಭೀಕರ ಸ್ಪೋಟ ಸಂಭವಿಸಿದೆ. ಸೇನಾ ನೆಲೆಯ ಆವರಣದಲ್ಲಿ ಪಟಾಕಿ ಹಾಗೂ ಇತರ ಪಟಾಕಿ ತಯಾರಿಕಾ ಸ್ಪೋಟಕ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದ್ದ ಉಗ್ರಾಣದಲ್ಲಿ ಪ್ರಥಮವಾಗಿ ಸ್ಪೋಟ ಸಂಭವಿಸಿ, ನಂತರ ಮತ್ತೊಂದು ಸ್ಪೋಟ ಉಂಟಾಗಿದೆ. ಸ್ಪೋಟದ ರಭಸಕ್ಕೆ ಸೇನಾ ನೆಲೆಯ ಸುತ್ತಮುತ್ತಲಿನ ಹಲವಾರು ಮನೆಗಳ ಕಿಟಕಿ ಗಾಜುಗಳು ನುಚ್ಚುನೂರಾಗಿದ್ದು, ಇಡೀ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ದುರಂತದ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಬೊಲಿವಿಯಾ ರಕ್ಷಣಾ ಸಚಿವ ಎರ್ನೆಸ್ಟೋ ಜಸ್ಟಿನಿಯಾನೋ, ಗಾಯಗೊಂಡವರಲ್ಲಿ 52 ಜನರು ನಾಗರಿಕರು ಹಾಗೂ ಉಳಿದವರು ಸೇನಾ ಸಿಬ್ಬಂದಿ ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ಸದ್ಯ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆಯಾದರೂ, ಕನಿಷ್ಠ 14 ಜನರು ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ನಾಪತ್ತೆಯಾದವರ ಸಂಖ್ಯೆಯನ್ನು ಗಮನಿಸಿದರೆ ಸಾವಿನ ಸಂಖ್ಯೆ 10ರಿಂದ 15ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಯಾಚಾ ನಗರದ ಆರೋಗ್ಯ ನಿರ್ದೇಶಕಿ ರಿಟಾ ನೆಬ್ರಸ್ಕಾ ಕಳವಳ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರ ಪೈಕಿ 14 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜಧಾನಿ ಲಾ ಪಾಝ್‌ನ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಅವರಲ್ಲಿ ಶೇ.30ಕ್ಕಿಂತ ಹೆಚ್ಚು ಸುಟ್ಟ ಗಾಯಗಳಿಂದ ಬಳಲುತ್ತಿರುವ ಬಾಲಕಿಯೊಬ್ಬಳ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ.

ಸ್ಪೋಟಕ್ಕೆ ನಿಖರವಾದ ಕಾರಣ ಪತ್ತೆಯಾಗಿಲ್ಲ

ಸ್ಥಳದಲ್ಲಿ ಮತ್ತೊಂದು ಸ್ಪೋಟ ಸಂಭವಿಸುವ ಅಪಾಯವಿರುವುದಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಸ್ಪೋಟ ಸಂಭವಿಸಿದ ಸ್ಥಳದಲ್ಲಿ ಇನ್ನೂ ತೀವ್ರ ಶಾಖ ಮತ್ತು ಶಾಖದ ಸೆಲೆ ಜೀವಂತವಾಗಿದ್ದು, ಸಾರ್ವಜನಿಕರು ಕನಿಷ್ಠ 150 ಮೀಟರ್ ದೂರದಲ್ಲಿರಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಸದ್ಯ ಘಟನಾ ಸ್ಥಳದಲ್ಲಿ ರಕ್ಷಣಾ ಪಡೆಗಳು, ವೈದ್ಯಕೀಯ ತಂಡಗಳು ಹಾಗೂ ಆಂಬುಲೆನ್ಸ್‌ಗಳು ಬೀಡುಬಿಟ್ಟಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮತ್ತು ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗಿದೆ. ಇಷ್ಟೆಲ್ಲಾ ಹಾನಿಗೆ ಕಾರಣವಾದ ಸ್ಪೋಟಕ್ಕೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿದುಬಂದಿಲ್ಲ.

ಇದನ್ನೂ ಓದಿ: ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡಿ: ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಪ್ರಧಾನಿ ಮೋದಿ ಕರೆ

Leave a Reply

Your email address will not be published. Required fields are marked *