Big News: ಬೊಲಿವಿಯಾ ಸೇನಾ ಬ್ಯಾರಾಕ್ಸ್‌ನಲ್ಲಿ ಭೀಕರ ಸರಣಿ ಸ್ಪೋಟ: ಇಬ್ಬರು ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ!
ಲಾ ಪಾಝ್: ದಕ್ಷಿಣ ಅಮೆರಿಕದ ಬೊಲಿವಿಯಾ ದೇಶದ ಸೇನಾ ಬ್ಯಾರಾಕ್ಸ್ ಒಂದರಲ್ಲಿ ಸಂಭವಿಸಿದ ಸರಣಿ ಸ್ಪೋಟದಲ್ಲಿ ಕನಿಷ್ಠ ಇಬ್ಬರು ಸಜೀವವಾಗಿ ದಹನಗೊಂಡಿದ್ದು, 50ಕ್ಕೂ ಹೆಚ್ಚು ಜನರು ತೀವ್ರವಾಗಿ (Big News) ಗಾಯಗೊಂಡಿದ್ದಾರೆ. ಬೊಲಿವಿಯಾದ ಆಡಳಿತಾತ್ಮಕ ರಾಜಧಾನಿ ಲಾ ಪಾಝ್‌ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ನಗರ ವಿಯಾಚಾದಲ್ಲಿರುವ ಸೇನಾ ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮಧ್ಯಾಹ್ನ ಸುಮಾರು 2:30ರ ಸುಮಾರಿಗೆ ಸಂಭವಿಸಿದ ಭೀಕರ ಸ್ಪೋಟ ಶುಕ್ರವಾರ ಮಧ್ಯಾಹ್ನ ಸುಮಾರು 2:30ರ…
