TOP NEWS

Tollywood: ಮದುವೆ ಆಮಿಷ, ಖಾಸಗಿ ವಿಡಿಯೋ ಲೀಕ್ ಬೆದರಿಕೆ: ವಿಶಾಖಪಟ್ಟಣಂನಲ್ಲಿ ರಾಹುಲ್ ಸಿಪ್ಲಿಗಂಜ್ ಸೇರಿ 12 ಜನರ ವಿರುದ್ಧ ಎಫ್‌ಐಆರ್!

Tollywood Police Case Filed Against Singer Rahul Sipligunj and 11 Others for Threats

ವಿಶಾಖಪಟ್ಟಣಂ: ಖ್ಯಾತ ಹಿನ್ನೆಲೆ ಗಾಯಕ ರಾಹುಲ್ ಸಿಪ್ಲಿಗಂಜ್ (Rahul Sipligunj) ಹಾಗೂ ಅವರ ಒಕ್ಕೂಟದ ಇತರ 11 ಜನರ ವಿರುದ್ಧ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಪೊಲೀಸ್ ಪ್ರಕರಣ (Tollywood) ದಾಖಲಾಗಿದೆ. ಸಂತ್ರಸ್ತ ಮಹಿಳೆಯೊಬ್ಬರು ನೀಡಿದ ಗಂಭೀರ ದೂರಿನ ಅನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆ ತೀವ್ರಗೊಂಡಿದೆ.‌

ಮಹಿಳೆಗೆ ಬೆದರಿಕೆ ಹಾಕಿದ ಗಾಯಕ

ಮಹಿಳೆಯ ದೂರಿನ ಪ್ರಕಾರ, ಗಾಯಕ ರಾಹುಲ್ ಸಿಪ್ಲಿಗಂಜ್ ಅವರ ಭಾವ ಮೈದುನನಾದ ಕರ್ಪೂರಪು ರಾಹುಲ್ ರೆಡ್ಡಿ ಎಂಬಾತ ತನಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ. ಅಷ್ಟೇ ಅಲ್ಲದೆ, ನಂತರದ ದಿನಗಳಲ್ಲಿ ಅವಳ ವೈಯಕ್ತಿಕ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷಯದಲ್ಲಿ ತನಗೆ ನ್ಯಾಯ ಸಿಗಬೇಕು ಎಂದು ಕೇಳಿದಾಗ, ಗಾಯಕ ರಾಹುಲ್ ಸಿಪ್ಲಿಗಂಜ್ ಕೂಡ ತನಗೆ ಬೆದರಿಕೆ ಒಡ್ಡಿದ್ದಲ್ಲದೆ, ಬಲವಂತವಾಗಿ ವಿಡಿಯೋ ಹೇಳಿಕೆಗಳನ್ನು ನೀಡುವಂತೆ ಪೀಡಿಸಿದ್ದಾರೆ ಎಂದು ಮಹಿಳೆ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.

12 ಜನರ ವಿರುದ್ದ FIR

ಈ ದೂರಿನ ಬೆನ್ನಲ್ಲೇ ಎಚ್ಚೆತ್ತ ವಿಶಾಖಪಟ್ಟಣಂ ಪೊಲೀಸರು ರಾಹುಲ್ ಸಿಪ್ಲಿಗಂಜ್ ಸೇರಿದಂತೆ ಒಟ್ಟು 12 ಜನರ ವಿರುದ್ಧ ಬೆದರಿಕೆ ಹಾಗೂ ಸೈಬರ್ ಕಿರುಕುಳ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಪೊಲೀಸರು ಸಾಕ್ಷ್ಯಧಾರಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಭೀಕರ ಅವಘಡ: ಬಿಡಿಎ ಅಂಡರ್‌ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ದುರ್ಮರಣ!

ಬೆಂಗಳೂರು: ರಾಜಧಾನಿಯ (Bengaluru) ಡಾ. ರಾಜ್‌ಕುಮಾರ್ ಸ್ಮಾರಕದ ಬಳಿ ನಡೆಯುತ್ತಿದ್ದ ಬಿಡಿಎ (BDA) ಅಂಡರ್‌ಪಾಸ್ (Tragedy) ಕಾಮಗಾರಿ ವೇಳೆ ಭೀಕರ ದುರಂತ ಸಂಭವಿಸಿದೆ. ಏಕಾಏಕಿ ಮಣ್ಣು ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಎಫ್‌ಟಿಐ (FTI) ಸರ್ಕಲ್ ಬಳಿ ಈ ಘಟನೆ ನಡೆದಿದೆ.

ಘಟನೆಯ ವಿವರ: ಎಫ್‌ಟಿಐ ಸರ್ಕಲ್ ಬಳಿ ಬಿಡಿಎ ವತಿಯಿಂದ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಸುಮಾರು 20 ಅಡಿಯಷ್ಟು ಆಳದ ಬೃಹತ್ ಗುಂಡಿ ತೋಡಲಾಗಿತ್ತು. ಆರ್​ಸಿಸಿ (RCC) ಅಳವಡಿಸಲು ಗುಂಡಿಯೊಳಗೆ ಸಂಗ್ರಹವಾಗಿದ್ದ ನೀರನ್ನು ಹೊರಹಾಕುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ವೇಳೆ ಸ್ಥಳದಲ್ಲಿ ಐದು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಣ್ಣು ಜರುಗುತ್ತಿರುವುದನ್ನು ಗಮನಿಸಿದ ಮೂವರು ಕಾರ್ಮಿಕರು ತಕ್ಷಣವೇ ಓಡಿ ಬಚಾವಾಗಿದ್ದಾರೆ. ಆದರೆ, ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.

ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದರಾದರೂ ಇಬ್ಬರು ಕಾರ್ಮಿಕರನ್ನು ಬದುಕಿಸಲು ಸಾಧ್ಯವಾಗಿಲ್ಲ. ಮಣ್ಣಿನಡಿ ಹೂತುಹೋಗಿದ್ದ ಪರಿಮಳ್ (31) ಎಂಬ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಕಾರ್ಮಿಕ ಸೋನಾರಾಮ್ (26) ಎಂಬಾತನನ್ನು ತೀವ್ರ ಆಟಾಟೋಪದ ನಂತರ ಹೊರತೆಗೆದು ಕಣ್ವ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಸದಾನಂದ್, ಸುನೀಲ್ ಹಾಗೂ ಇಮ್ತಿಯಾಯಾಜ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ತನಿಖೆಗೆ ಬಿಡಿಎ ಆಯುಕ್ತರ ಆದೇಶ: ದುರಂತದ ಕುರಿತು ಪ್ರತಿಕ್ರಿಯಿಸಿರುವ ಬಿಡಿಎ ಆಯುಕ್ತ ಕ್ಯಾಪ್ಟನ್ ಮಣಿವಣ್ಣನ್, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ. ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ನೆರವು ನೀಡಲು ಸೂಚಿಸಲಾಗಿದೆ. ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರರು ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಮುಂದಿನ 24 ಗಂಟೆಗಳ ಒಳಗೆ ಸೂಕ್ತ ಪರಿಹಾರ ಧನ ವಿತರಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಜೊತೆಗೆ ಈ ಇಡೀ ಅವಘಡದ ಕುರಿತು ತಕ್ಷಣವೇ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಭೀಕರ ದುರಂತ: ಪತ್ನಿ ಮೇಲಿನ ಅನುಮಾನಕ್ಕೆ ಮನೆಯಲ್ಲೇ ಜಿಲೆಟಿನ್ ಬ್ಲಾಸ್ಟ್; ತಂದೆ, ಮಗಳು ಸಾವು!

Leave a Reply

Your email address will not be published. Required fields are marked *