ಮುಂಬೈ: ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ‘ನೀಟ್’ ಪರೀಕ್ಷಾ ಹಗರಣ ಹಾಗೂ ನಿರುದ್ಯೋಗದ ವಿರುದ್ಧ ವಿದ್ಯಾರ್ಥಿ ಹೋರಾಟದ ಮುಂಚೂಣಿಯಲ್ಲಿ ನಿಂತಿರುವ ಸಿಜೆಪಿ (CJP) ಮುಖ್ಯಸ್ಥ ಅಭಿಜೀತ್ ದಿಪ್ಕೆ ಅವರನ್ನು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಆಕಾಶಕ್ಕೆ ಎತ್ತಿ ಮುಡಿಸಿದ್ದಾರೆ. ಯುವ ಜನರನ್ನು ಒಗ್ಗೂಡಿಸಿ ಬೃಹತ್ ಚಳವಳಿ ನಡೆಸಿದ ದಿಪ್ಕೆ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಠಾಕ್ರೆ, ಅವರನ್ನು ಸಾಕ್ಷಾತ್ “ಭಗವಾನ್ ವಿಷ್ಣುವಿನ ಅವತಾರ” ಎಂದು ಬಣ್ಣಿಸಿದ್ದಾರೆ. ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ಈ ಯುವ ಆಂದೋಲನದ ಸಂಪೂರ್ಣ ಯಶಸ್ಸಿನ ಕ್ರೆಡಿಟ್ ಅನ್ನು ಅವರು ಅಭಿಜೀತ್ ಹೆಗಲಿಗೆ ಹೊರಿಸಿದ್ದಾರೆ.
ಉದ್ಧವ್ ಹೇಳಿಕೆಗೆ ನೆಟ್ಟಿಗರ ವ್ಯಂಗ್ಯ
ಆದರೆ, ಉದ್ಧವ್ ಠಾಕ್ರೆ ಅವರ ಈ ಧಾರ್ಮಿಕ ಹೋಲಿಕೆಯ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಠಾಕ್ರೆ ಬೆಂಬಲಿಗರು ಈ ಶ್ಲಾಘನೆಯನ್ನು ಬರಮಾಡಿಕೊಂಡಿದ್ದರೂ, ಬಿಜೆಪಿ ನಾಯಕರು ಮತ್ತು ವಿರೋಧಿಗಳು ಇದರ ವಿರುದ್ಧ ತೀವ್ರ ವ್ಯಂಗ್ಯವಾಡಿದ್ದಾರೆ. ಹಿಂದೂ ಧರ್ಮದ ಆರಾಧ್ಯ ದೈವಗಳಾದ ಭಗವಾನ್ ಶ್ರೀರಾಮ ಮತ್ತು ತಾಯಿ ಸೀತೆಯ ಬಗ್ಗೆ ಈ ಹಿಂದೆ ಅವಹೇಳನಕಾರಿ ನಿಂದನೆಗಳನ್ನು ಮಾಡಿದ್ದ ವ್ಯಕ್ತಿಯನ್ನು ‘ವಿಷ್ಣುವಿನ ಅವತಾರ’ ಎಂದು ಕರೆದಿರುವ ‘ಉದ್ಧವ್ ಭೌ’ ನಿಲುವನ್ನು ವಿರೋಧಿಗಳು ಕಟುವಾಗಿ ಪ್ರಶ್ನಿಸುತ್ತಿದ್ದಾರೆ.
Abhijit Dipke is a Vishnu Avatar as per Uddhav Thackeray
— The Jaipur Dialogues (@JaipurDialogues) July 28, 2026
So this Vishnu Avatar was ok with the abuses Hurled to Hindus and Maa Sita, Shei Ram?
Waah Uddhav Bhau! pic.twitter.com/mj52EIQgOm
ಸಾಮಾಜಿಕ ಜಾಲತಾಣಗಳಲ್ಲೂ ಈ ವಿಚಾರವಾಗಿ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಸನಾತನ ಧರ್ಮ ಹಾಗೂ ಹಿಂದೂ ದೇವತೆಗಳನ್ನು ಅವಮಾನಿಸುವವರನ್ನು ಭಗವಂತನ ಅವತಾರ ಎಂದು ಒಪ್ಪಲು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನೀಟ್ ಪರೀಕ್ಷಾ ಅಕ್ರಮದ ವಿರುದ್ಧದ ವಿದ್ಯಾರ್ಥಿ ಹೋರಾಟದ ಯಶಸ್ಸಿನ ನಡುವೆಯೇ ಮೂಡಿಬಂದಿರುವ ಉದ್ಧವ್ ಠಾಕ್ರೆ ಅವರ ಈ ವಿವಾದಾತ್ಮಕ ಹೇಳಿಕೆ, ಇದೀಗ ಇಂಟರ್ನೆಟ್ನಲ್ಲಿ ತೀವ್ರ ಪರ-ವಿರೋಧದ ಜಟಾಪಟಿಗೆ ಕಾರಣವಾಗಿದೆ.
ಇದನ್ನೂ ಓದಿ: ಪಿಎಂ ಮೋದಿ ಪೋಸ್ಟ್ ಡಿಲೀಟ್ ಹಿನ್ನೆಲೆ: ಮೆಟಾ ಸಂಸ್ಥೆಗೆ ಕೇಂದ್ರ ಸರ್ಕಾರ ತುರ್ತು ಸಮನ್ಸ್!
