TOP NEWS

Evening Snacks: ಬೀಟ್ರೂಟ್‌-ಬದನೆಕಾಯಿ ಚಿಪ್ಸ್‌ ತಿಂದಿದ್ದೀರಾ? ಇಲ್ಲಿದೆ ರೆಸಿಪಿ

Evening Snacks Brinjal and Beetroot Chips Recipe

ದೊಡ್ಡವರಿಂದ ಹಿಡಿದು ಚಿಕ್ಕವರ ವರೆಗೂ ಇಷ್ಟವಾಗುವ ಪದಾರ್ಥ ಎಂದರೆ ಅದು ಚಿಪ್ಸ್.‌ ಆದರೆ ಅಂಗಡಿಯಲ್ಲಿ ಸಿಗುವ ಚಿಪ್ಸ್‌ ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಮಕ್ಕಳಿಗೆ ಅದನ್ನ ಕೊಡಲು ಬಹಳ ಭಯ ಆಗುತ್ತದೆ. ಆದರೆ ಮನೆಯಲ್ಲಿ ಕೂಡ ವೆರೈಟಿ  ಚಿಪ್ಸ್‌ ಮಾಡಬಹುದು. ಅನೇಕ ಜನರು ಬರೀ ಬಾಳೆಕಾಯಿ ಚಿಪ್ಸ್‌ ಮಾತ್ರ ಮಾಡುತ್ತಾರೆ. ಆದರೆ ಬೇರೆ ತರಕಾರಿಗಳಿಂದ ಸಹ ಚಿಪ್ಸ್‌ ಮಾಡಬಹುದು. ಹೌದು, ಮನೆಯಲ್ಲಿ ಬದನೆಕಾಯಿ ಹಾಗೂ ಬೀಟ್ರೂಟ್‌ ಚಿಪ್ಸ್‌ ಮಾಡಬಹುದು. ಇದನ್ನ ಮಾಡೋಕೆ ಜಾಸ್ತಿ ಸಮಯನೂ ಬೇಡ ಹಾಗೂ ವಸ್ತುಗಳು ಕೂಡ ಬೇಡ. ಹಾಗಾದ್ರೆ ಬದನೆಕಾಯಿ ಹಾಗೂ ಬೀಟ್ರೂಟ್‌ ಚಿಪ್ಸ್‌ (Evening Snacks) ಮಾಡುವುದು ಹೇಗೆ? ಇಲ್ಲಿದೆ ರೆಸಿಪಿ

ಬದನೆಕಾಯಿ ಮತ್ತು ಬೀಟ್ರೂಟ್ ಚಿಪ್ಸ್ ಮಾಡಲು ಬೇಕಾಗುವ ಪದಾರ್ಥಗಳು

250 ಗ್ರಾಂ ಬದನೆಕಾಯಿ

250 ಗ್ರಾಂ ಬೀಟ್ರೂಟ್

ಉಪ್ಪು – ರುಚಿಗೆ ತಕ್ಕಷ್ಟು

ನಿಮ್ಮ ರುಚಿಗೆ ತಕ್ಕಂತೆ 1/2 ಟೀಸ್ಪೂನ್ ಮಸಾಲೆಗಳು

ಆಲಿವ್ ಎಣ್ಣೆ

Evening Snacks Brinjal and Beetroot Chips Recipe

ಬದನೆಕಾಯಿ ಮತ್ತು ಬೀಟ್ರೂಟ್ ಚಿಪ್ಸ್ ಮಾಡುವ ಸುಲಭ ವಿಧಾನ ಹೀಗಿದೆ

ಮೊದಲು ಬದನೆಕಾಯಿ ಮತ್ತು ಬೀಟ್ರೂಟ್ ಅನ್ನು ತೊಳೆದು ಅಡಿಗೆ ಟವಲ್ ನಿಂದ ಸಂಪೂರ್ಣವಾಗಿ ಒಣಗಿಸಿ. ಒಣಗಿದ ತರಕಾರಿಗಳನ್ನು ಚಿಪ್ಸ್‌ನಂತೆ ತೆಳುವಾದ ಹೋಳುಗಳಾಗಿ ಕತ್ತರಿಸಿ. ನೀವು ಇದಕ್ಕೆ ನಿಮಗೆ ಬೇಕಾದ ಆಕಾರವನ್ನ ಕೊಡಬಹುದು.  ನಂತರ ಅವುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ, ಸ್ವಲ್ಪ ಆಲಿವ್ ಎಣ್ಣೆಯನ್ನು ಸಿಂಪಡಿಸಿ ಮತ್ತು ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ನೀವು ಇದಕ್ಕೆ ಬೇಕಾದ ಮಸಾಲೆಗಳನ್ನ ಹಾಗೂ ಉಪ್ಪನ್ನ ಹಾಕಿ ಮಿಶ್ರಣ ಮಾಡಿ. ನಿಮಗೆ ಯಾವ ರೀತಿ ಟೇಸ್ಟ್‌ ಬೇಕೋ ಆ ರೀತಿ ಮಾಡಬಹುದು. ಅಥವಾ ಬರೀ ಉಪ್ಪು ಹಾಗೂ ಖಾರದ ಪುಡಿಯನ್ನ ಸಹ ಮಿಕ್ಸ್‌ ಮಾಡಬಹುದು. ಈಗ ಬೇಕಿಂಗ್ ಟ್ರೇ ತೆಗೆದುಕೊಳ್ಳಿ. ಅದಕ್ಕೆ ಬೇಕಿಂಗ್‌ ಶೀಟ್‌ ಹಾಕಿ. ಅದರ ಮೇಲೆ ಈ ಬೀಟ್ರೂಟ್‌ ಹಾಗೂ ಬದನೆಕಾಯಿ ಪೀಸ್‌ಗಳನ್ನ ಹಾಕಿ. ನೀವು ಶಾಈಟ್‌ ಮೇಲೆ ಹಾಕಿದ ನಂತರ ಕೂಡ ಮಸಾಲೆಗಳನ್ನ ಹಾಕಬಹುದು.  ಈಗ ಏರ್‌ ಫ್ರೈಯರ್‌ನಲ್ಲಿ 120*C ನಲ್ಲಿ 60 ರಿಂದ 70 ನಿಮಿಷಗಳ ಕಾಲ ಬೇಯಿಸಿ̤. ನೀವು ಬೇಕಾದರೆ ಇದನ್ನ ಎಣ್ಣೆಯಲ್ಲಿ ಫ್ರೈ ಮಾಡಬಹುದು. ಆದರೆ ಎಲ್ಲವೂ ಆರೋಗ್ಯಕರವಾಗಿ ಮಾಡಬೇಕು ಎಂದರೆ ಏರ್‌ ಫ್ರೈಯರ್‌ ಬಳಕೆ ಮಾಡಿ.

ಇದನ್ನೂ ಓದಿ: ದಿನಕ್ಕೊಂದು ಬಾಳೆಹಣ್ಣು ತಿನ್ನಿ, ನೂರಾರು ಲಾಭ ಪಡೆಯಿರಿ

Leave a Reply

Your email address will not be published. Required fields are marked *