ಬೆಂಗಳೂರು: ಮುಖದ ಸೌಂದರ್ಯವನ್ನು ದೀರ್ಘಕಾಲ ಕಾಪಾಡಿಕೊಳ್ಳಲು ಹಾಗೂ ಮೈಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಇಂದಿನ ದಿನಗಳಲ್ಲಿ ಜನರು ಮಾರುಕಟ್ಟೆಯಲ್ಲಿ ಸಿಗುವ ನಾನಾ (Skin Care) ರೀತಿಯ ರಾಸಾಯನಿಕಯುಕ್ತ ಸೌಂದರ್ಯವರ್ಧಕ ಉತ್ಪನ್ನಗಳನ್ನು (Beauty Products) ಮುಖಕ್ಕೆ ಬಳಸುವುದು ಸಾಮಾನ್ಯವಾಗಿದೆ. ಆದರೆ ಎಷ್ಟೇ ದುಬಾರಿ ಕ್ರೀಮ್ಗಳು ಹಾಗೂ ಪ್ರಾಡಕ್ಟ್ಗಳನ್ನು ಬಳಸಿದರೂ ಕೆಲವರ ಮುಖದಲ್ಲಿ ಮಾತ್ರ ಜಿಡ್ಡಿನಾಂಶ ಅತಿಯಾಗಿರುವುದು, ಕಪ್ಪು ಕಲೆಗಳು (Dark Spots) ಮತ್ತು ಕೆಂಪು ಮೊಡವೆಗಳ ಸಮಸ್ಯೆ (Acne) ನಿರಂತರವಾಗಿ ಕಾಡುತ್ತಲೇ ಇರುತ್ತದೆ. ಇಂತಹ ಚರ್ಮದ ಸಮಸ್ಯೆಗಳಿಂದಾಗಿ ಮುಖದ ನೈಸರ್ಗಿಕ ಕಾಂತಿ ಮತ್ತು ಕಳೆ ಕ್ರಮೇಣ ಕುಂದುವುದರಲ್ಲಿ ಯಾವುದೇ ಸಂದೇಹವಿಲ್ಲ.
ಹಾಗಾದರೆ, ಯಾವುದೇ ರಾಸಾಯನಿಕಗಳಿಲ್ಲದೆ, ಮನೆಯಲ್ಲೇ ಅಡಿಗೆಗೆ ಬಳಸುವ ಸರಳ ಪದಾರ್ಥಗಳ ಮೂಲಕ ತ್ವಚೆಯ ಆರೈಕೆ ಮಾಡಿಕೊಳ್ಳುವುದು ಸಾಧ್ಯವಿಲ್ಲವೇ? ಖಂಡಿತ ಸಾಧ್ಯ! ನಾವು ಪ್ರತಿದಿನ ಊಟಕ್ಕೆ ಚಪಾತಿ ಹಾಗೂ ರೊಟ್ಟಿ ಮಾಡಲು ಬಳಸುವ ಸಾಮಾನ್ಯ ಗೋಧಿ ಹಿಟ್ಟನ್ನು ಕೇವಲ ಆರೋಗ್ಯಕರ ಆಹಾರಕ್ಕೆ ಮಾತ್ರವಲ್ಲದೆ, ಅತ್ಯುತ್ತಮ ತ್ವಚೆಯ ಆರೈಕೆಗೂ (Skincare) ಬಳಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ಜನಪ್ರಿಯ ಬ್ಯೂಟಿ ಕಂಟೆಂಟ್ ಕ್ರಿಯೇಟರ್ ಪ್ರಭ್ಜೋತ್ ಕೌರ್ ಅವರು ಹಂಚಿಕೊಂಡಿರುವ ವಿಡಿಯೋದ ಪ್ರಕಾರ, ಗೋಧಿ ಹಿಟ್ಟಿನಿಂದ ತಯಾರಿಸುವ ವಿವಿಧ ಫೇಸ್ ಪ್ಯಾಕ್ಗಳು ಮುಖದಲ್ಲಿರುವ ಹೆಚ್ಚುವರಿ ಎಣ್ಣೆಯಂಶವನ್ನು ನಿಯಂತ್ರಿಸಿ, ತ್ವಚೆಯನ್ನು ಸ್ವಚ್ಛವಾಗಿ ಹಾಗೂ ತಾಜಾವಾಗಿಡಲು ಅತ್ಯಂತ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಹಾಗಾದರೆ ಗೋಧಿ ಹಿಟ್ಟನ್ನು ಬಳಸಿ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಸರಳ ವಿಧಾನಗಳು ಇಲ್ಲಿವೆ ನೋಡಿ.
1. ಗೋಧಿ ಹಿಟ್ಟು ಮತ್ತು ಹಾಲಿನ ಫೇಸ್ ಪ್ಯಾಕ್: ಎಣ್ಣೆಯಂಶ ನಿಯಂತ್ರಣಕ್ಕೆ ರಾಮಬಾಣ
ಮುಖದಲ್ಲಿ ಅತಿಯಾದ ಎಣ್ಣೆಯಂಶ (Oily Skin) ಇದ್ದು, ಜಿಡ್ಡಿನಿಂದ ಬೇಸತ್ತಿರುವವರಿಗೆ ಈ ಫೇಸ್ ಪ್ಯಾಕ್ ಅತ್ಯುತ್ತಮ ಪರಿಹಾರ ನೀಡಲಿದೆ.
- ತಯಾರಿಸುವ ವಿಧಾನ: ಎರಡು ಚಮಚ ಶುದ್ಧ ಗೋಧಿ ಹಿಟ್ಟಿಗೆ ಸಮಪ್ರಮಾಣದಲ್ಲಿ ಅಂದರೆ ಎರಡು ಚಮಚ ಹಸಿ ಅಥವಾ ಕಾಯಿಸಿದ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಯಾವುದೇ ಗಂಟುಗಳಿಲ್ಲದಂತೆ ನುಣ್ಣನೆಯ ಪೇಸ್ಟ್ ತಯಾರಿಸಿಕೊಳ್ಳಿ.
- ಬಳಸುವಿಕೆ: ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ವೃತ್ತಾಕಾರದಲ್ಲಿ ನಿಧಾನವಾಗಿ ಹಚ್ಚಿಕೊಳ್ಳಿ. ಸರಿಸುಮಾರು 15 ರಿಂದ 20 ನಿಮಿಷಗಳ ಕಾಲ ಪ್ಯಾಕ್ ಒಣಗಲು ಬಿಡಿ. ನಂತರ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈ ನೈಸರ್ಗಿಕ ಪ್ಯಾಕ್ ಮುಖದಲ್ಲಿ ಜ್ರವಿಸುವ ಹೆಚ್ಚುವರಿ ಎಣ್ಣೆಯಂಶವನ್ನು ಕಡಿಮೆ ಮಾಡಿ ತ್ವಚೆಯನ್ನು ಕಾಂತಿಯುತವಾಗಿಸಲು ನೆರವಾಗುತ್ತದೆ.
2. ಗೋಧಿ ಹಿಟ್ಟು (Skin Care) ಮತ್ತು ರೋಸ್ ವಾಟರ್: ತ್ವಚೆಗೆ ತಕ್ಷಣದ ತಾಜಾತನ
ಸುಸ್ತು ಹಾಗೂ ಧೂಲಿನಿಂದ ಮಂಕಾಗಿರುವ ಮುಖಕ್ಕೆ ತಕ್ಷಣದ ಕಾಂತಿ ಮತ್ತು ತಾಜಾತನವನ್ನು ಮರಳಿಸಲು ಈ ವಿಧಾನ ಬಹಳ ಉಪಯೋಗಿಯಾಗಿದೆ.
- ತಯಾರಿಸುವ ವಿಧಾನ: ಎರಡು ಚಮಚ ಗೋಧಿ ಹಿಟ್ಟಿಗೆ ಅಗತ್ಯವಿರುವಷ್ಟು ಗುಲಾಬಿ ನೀರನ್ನು (Rose Water) ಹನಿ ಹನಿಯಾಗಿ ಸೇರಿಸಿ ನುಣ್ಣನೆಯ ಪೇಸ್ಟ್ ಮಾಡಿಕೊಳ್ಳಿ.
- ಬಳಸುವಿಕೆ: ಈ ಪೇಸ್ಟ್ ಅನ್ನು ಮುಖದಾದ್ಯಂತ ಸಮವಾಗಿ ಹಚ್ಚಿ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ತಣ್ಣನೆಯ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ಈ ಸರಳ ವಿಧಾನವು ತ್ವಚೆಗೆ ತಕ್ಷಣದ ತಂಪಾದ ಅನುಭವ ಹಾಗೂ ನೈಸರ್ಗಿಕ ತಾಜಾತನವನ್ನು ನೀಡುತ್ತದೆ.
3. ಗೋಧಿ ಹಿಟ್ಟು, ಮೊಸರು ಮತ್ತು ಜೇನುತುಪ್ಪದ ಪೋಷಕಾಂಶದ ಪ್ಯಾಕ್
ತ್ವಚೆಯ ಒಣಗಿದ ಜಾಗಗಳಿಗೆ ತೇವಾಂಶವನ್ನು ಒದಗಿಸಲು ಮತ್ತು ನಯವಾದ ಮೃದುತ್ವವನ್ನು ಕಾಪಾಡಿಕೊಳ್ಳಲು ಈ ಮೂರು ಪದಾರ್ಥಗಳ ಕಾಂಬಿನೇಷನ್ ಅತ್ಯುತ್ತಮವಾಗಿದೆ.
- ತಯಾರಿಸುವ ವಿಧಾನ: ಎರಡು ಚಮಚ ಗೋಧಿ ಹಿಟ್ಟಿಗೆ ಸ್ವಲ್ಪ ತಾಜಾ ಮೊಸರು ಹಾಗೂ ಒಂದು ಚಮಚ ಶುದ್ಧ ಜೇನುತುಪ್ಪವನ್ನು (Honey) ಸೇರಿಸಿ ಚೆನ್ನಾಗಿ ಕಲಸಿರಿ.
- ಬಳಸುವಿಕೆ: ಸಿದ್ಧಪಡಿಸಿದ ಈ ಮಿಶ್ರಣವನ್ನು ಮುಖಕ್ಕೆ ದಪ್ಪನಾಗಿ ಲೇಪಿಸಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಒಣಗಲು ಬಿಡಿ. ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಮೊಸರಿನಲ್ಲಿರುವ ಪೋಷಕಾಂಶಗಳು ಹಾಗೂ ಜೇನುತುಪ್ಪದ ತೇವಾಂಶವು ತ್ವಚೆಯ ಆಳಕ್ಕೆ ಇಳಿದು ಮೃದುತ್ವವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
ಫೇಸ್ಪ್ಯಾಕ್ಗಳನ್ನು ಬಳಸುವಾಗ ಕಡ್ಡಾಯವಾಗಿ ಗಮನಿಸಬೇಕಾದ ಪ್ರಮುಖ ಎಚ್ಚರಿಕೆಗಳು:
ಮನೆಯಲ್ಲೇ ತಯಾರಿಸುವ ನೈಸರ್ಗಿಕ ಉತ್ಪನ್ನಗಳಾದರೂ, ಮುಖದ ಸೂಕ್ಷ್ಮ ತ್ವಚೆಗೆ ಅಳವಡಿಸಿಕೊಳ್ಳುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಂತ ಅಗತ್ಯವಾಗಿದೆ:
ಒಂದು ವೇಳೆ ಮೊಡವೆಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ ಅಥವಾ ಮುಖದಲ್ಲಿ ತೀವ್ರವಾದ ನೋವು ಮತ್ತು ಊತ ಕಾಣಿಸಿಕೊಂಡರೆ ಯಾವುದೇ ಮನೆಮದ್ದುಗಳನ್ನು ಮಾಡದೆ ತಕ್ಷಣವೇ ಅನುಭವಿ ಚರ್ಮರೋಗ ತಜ್ಞರನ್ನು (Dermatologist) ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
ಯಾವುದೇ ಹೊಸ ಫೇಸ್ ಪ್ಯಾಕ್ ಅನ್ನು ನೇರವಾಗಿ ಮುಖಕ್ಕೆ ಹಚ್ಚುವ ಮೊದಲು, ಕೈಯ ಒಳಭಾಗದಲ್ಲಿ (Patch Test) ಸ್ವಲ್ಪ ಹಚ್ಚಿ ಅಲರ್ಜಿ ಆಗುತ್ತದೆಯೇ ಎಂದು ಪರೀಕ್ಷಿಸಿಕೊಳ್ಳಿ.
ನಿಮ್ಮ ಮುಖದಲ್ಲಿ ಈಗಾಗಲೇ ಯಾವುದೇ ರೀತಿಯ ಆಳವಾದ ಗಾಯಗಳು, ಕಡಿತಗಳು ಅಥವಾ ತೀವ್ರವಾದ ಉರಿಯೂತದ ಸಮಸ್ಯೆಗಳಿದ್ದರೆ ಯಾವುದೇ ಫೇಸ್ ಪ್ಯಾಕ್ಗಳನ್ನು ಬಳಸಬೇಡಿ.
ಮುಖದ ಮೇಲಿನ ಮೊಡವೆಗಳನ್ನು ಯಾವುದೇ ಕಾರಣಕ್ಕೂ ಕೈಯಿಂದ ಒತ್ತುವುದು ಅಥವಾ ಉಗುರಿನಿಂದ ಕೆರೆಯುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಿ. ಇದು ಕಲೆಗಳು ಶಾಶ್ವತವಾಗಿ ಉಳಿಯಲು ಕಾರಣವಾಗಬಹುದು.
ನಿಮ್ಮ ಮುಖವನ್ನು ದಿನಕ್ಕೆರಡು ಬಾರಿ ಸೌಮ್ಯವಾದ (Mild Cleanser) ಕ್ಲೆನ್ಸರ್ ಬಳಸಿ ಮಾತ್ರ ಸ್ವಚ್ಛವಾಗಿಟ್ಟುಕೊಳ್ಳಿ.
ಇದನ್ನೂ ಓದಿ: ಲಿವರ್ ಹಾನಿಯಾದರೆ ದೇಹದಲ್ಲಿ ಈ ಅಪಾಯಕಾರಿ ಲಕ್ಷಣಗಳು ಕಾಣಿಸುತ್ತೆ: ಎಚ್ಚರ ತಪ್ಪಿದರೆ ಪ್ರಾಣಕ್ಕೆ ಆಪತ್ತು!
