ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ವಿಚಾರಗಳು ಸಹ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಗ್ರಹಗಳ ಸಂಚಾರ ಹೆಚ್ಚು ಪ್ರಾಮುಖ್ಯತೆಯನ್ನ ಪಡೆದುಕೊಂಡಿದೆ. ಈ ಗ್ರಹಗಳ ಸ್ಥಾನ ಪಲ್ಲಟದಿಂದ ನಮ್ಮ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುತ್ತದೆ. ಈ ಗ್ರಹಗಳ ಸಂಚಾರವು ನಮಗೆ ಕಷ್ಟಗಳಿಂದ ಮುಕ್ತಿ ಕೊಡಬಹುದು ಅಥವಾ ಸಂಕಷ್ಟವನ್ನ ಸಹ ಹೆಚ್ಚು ಮಾಡುತ್ತದೆ. ಸದ್ಯದಲ್ಲಿ ನಡೆಯುವ ಗ್ರಹಗಳ ಸ್ಥಾನ ಪಲ್ಲಟ ಮೂರು ರಾಶಿಯವರ ಜೀವನದಲ್ಲಿ ತೊಂದರೆಗಳ ಸರಮಾಲೆಯನ್ನ ಸೃಷ್ಟಿ ಮಾಡಲಿದೆ. ಆ ರಾಶಿಗಳು ಯಾವುವು ಹಾಗೂ ಯಾವ ರೀತಿ ತೊಂದರೆ ಆಗುತ್ತದೆ (Bad Time) ಎಂಬುದು ಇಲ್ಲಿದೆ.
ಈ ರಾಶಿಯವರಿಗೆ ಕಷ್ಟ (Bad Time) ಶುರು
ಮೇಷ ರಾಶಿ: ಈ ಗ್ರಹಗಳ ಸಂಚಾರದ ಕಾರಣದಿಂದ ಕೆಲಸದಲ್ಲಿ ಬಹಳ ಸಮಸ್ಯೆಗಳಾಗುತ್ತದೆ. ಈ ಸಮಯದಲ್ಲಿ ಅದೆಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಸಹ ನಿಮಗೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಈ ಕಾರಣದಿಂದ ಮಾನಸಿಕವಾಗಿ ನಿಮಗೆ ಸಮಸ್ಯೆಗಳಾಗುತ್ತದೆ. ಇದಲ್ಲದೇ, ಇದು ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನೀವು ಹಣವನ್ನ ಗಳಿಸಲು ಪರದಾಡಬೇಕಾಗುತ್ತದೆ, ಹಣ ಬಂದರೂ ಸಹ ಅದು ನಿಮ್ಮ ಕೈನಲ್ಲಿ ಉಳಿಯುವುದಿಲ್ಲ. ಒಟ್ಟಾರೆ ನಿಮಗೆ ತುಂಬಾ ಕಷ್ಟಗಳು ಕಾಡುತ್ತದೆ.
ಕಟಕ ರಾಶಿ: ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಈ ಸಮಯದಲ್ಲಿ ನೀವು ಸರ್ಕಸ್ ಮಾಡಬೇಕಾಗುತ್ತದೆ. ಮಾತಿ ಮೇಲೆ ನಿಗಾ ಇದ್ದರೆ ನಿಮಗೆ ಸಮಸ್ಯೆಗಳು ಕಡಿಮೆ ಆಗುತ್ತದೆ. ನೀವು ಕೆಲವೊಂದು ತೊಂದರೆಗಳನ್ನ ನೀವಾಗಿಯೇ ಮೈಮೇಲೆ ಎಳೆದುಕೊಳ್ಳುತ್ತೀರಿ. ಹಿರಿಯರ ಅಥವಾ ಮೇಲಧಿಕಾರಿಗಳೊಂದಿಗೆ ಜಾಗರೂಕತೆಯಿಂದ ವ್ಯವಹರಿಸಿ. ಈ ಸಮಯದಲ್ಲಿ ಬೇರೆಯವರ ವಿಚಾರದಲ್ಲಿ ತಲೆಹಾಕಬೇಡಿ. ನಿಮ್ಮ ಕೆಲಸ ನೋಡಿಕೊಂಡು ಇರಿ. ಯಾವುದೇ ಹೆಜ್ಜೆ ಇಡಬೇಕಾದರೂ ನೂರು ಬಾರಿ ಯೋಚನೆ ಮಾಡಿ.
ತುಲಾ ರಾಶಿ: ಅನಗತ್ಯ ವಾದ-ವಿವಾದಗಳಿಂದ ದೂರವಿರಿ. ಸಂಗಾತಿ ಜೊತೆ ಸಣ್ಣಪುಟ್ಟ ವಿಷಯಗಳಿಗೆ ಭಿನ್ನಾಭಿಪ್ರಾಯಗಳು ಮೂಡಬಹುದು. ಆಸ್ತಿ ಅಥವಾ ಸಾಲಕ್ಕೆ ಸಂಬಂಧಿತ ವ್ಯವಹಾರಗಳಲ್ಲಿ ಕಾನೂನು ಸಮಸ್ಯೆಯನ್ನ ಅನುಭವಿಸಬೇಕಾಗುತ್ತದೆ. ಕೆಲಸದ ಒತ್ತಡವು ಹೆಚ್ಚಾಗುವ ಸಾಧ್ಯತೆಯಿದೆ. ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಮಾತಿನ ಮೇಲೆ ಹಿಡಿತವಿರಲಿ. ಮುಖ್ಯವಾಗಿ ನಿಮಗೆ ಆರೋಗ್ಯ ಕೈ ಕೊಡುವ ಸಾಧ್ಯತೆ ಇದೆ. ಹಾಗಾಗಿ ಈ ಸಮಯದಲ್ಲಿ ಹೆಚ್ಚಾಗಿ ಆರೋಗ್ಯದ ಬಗ್ಗೆ ಗಮನ ಕೊಡಿ.
