Pulwama Attack: ಪುಲ್ವಾಮಾ ದಾಳಿಗೆ 7 ವರ್ಷ, ಪ್ರಧಾನಿ ಮೋದಿ-ಅಮಿತ್ ಶಾ ಭಾವುಕ ನಮನ

pulwama attack 7 years to black day

ನವದೆಹಲಿ: ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ (Pulwama Attack) ದೇಶದ 40 ಮಂದಿ ಅರೆಸೇನಾ ಪಡೆ ಯೋಧರು ಹುತಾತ್ಮರಾಗಿದ್ದರು. ಇಂದು ಆ ಕರಾಳ ಘಟನೆಗೆ ಏಳು ವರ್ಷವಾಗಿದೆ.

ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ

 ರಾಷ್ಟ್ರವು ಆ ವೀರ ಯೋಧರ ಶೌರ್ಯ ಮತ್ತು ಬಲಿದಾನಕ್ಕೆ ಭಾವಪೂರ್ಣ ನಮನ ಸಲ್ಲಿಸುತ್ತಿದೆ. ಏಳು ವರ್ಷದ ಹಿಂದೆ ಯೋಧರನ್ನು ಹೊತ್ತೊಯ್ಯುತ್ತಿದ್ದ 78 ವಾಹನಗಳ ಬೆಂಗಾವಲು ಪಡೆಯ ಮೇಲೆ ಸ್ಫೋಟಕಗಳನ್ನು ತುಂಬಿದ್ದ ಕಾರೊಂದು ಡಿಕ್ಕಿ ಹೊಡೆದಿತ್ತು. ಈ ಭೀಕರ ಸ್ಫೋಟದಲ್ಲಿ ದೇಶದ ವಿವಿಧ ರಾಜ್ಯಗಳ 40 ಯೋಧರು ವೀರ ಮರಣವನ್ನಪ್ಪಿದ್ದರು.

ಎಂದೆಂದಿಗೂ ತ್ಯಾಗ ಅಮರ

ಈ ಘಟನೆಯು ಇಡೀ ದೇಶವನ್ನೇ ದಿಗ್ಭ್ರಮೆಗೊಳಿಸಿತ್ತು ಮತ್ತು ದೇಶಾದ್ಯಂತ ಆಕ್ರೋಶದ ಅಲೆ ಎಬ್ಬಿಸಿತ್ತು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಈ ವೀರರ ಸೇವೆ ಮತ್ತು ತ್ಯಾಗವನ್ನು ಭಾರತವು ಎಂದಿಗೂ ಮರೆಯುವುದಿಲ್ಲ. ಅವರ ಬಲಿದಾನವು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶಪ್ರೇಮದ ಕಿಚ್ಚನ್ನು ಸದಾ ಜಾಗೃತವಾಗಿರಿಸುತ್ತದೆ.  ಇಂದು ದೇಶದಾದ್ಯಂತ ವಿವಿಧ ಸ್ಮಾರಕಗಳ ಬಳಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಲಾಗುತ್ತಿದೆ. ಅವರ ಕುಟುಂಬಗಳ ತ್ಯಾಗಕ್ಕೆ ದೇಶವು ಸದಾ ಚಿರಋಣಿಯಾಗಿದೆ.

ಇದನ್ನೂ ಓದಿ: 80 ಕೋಟಿ ಜನರಿಗೆ ಅಗತ್ಯ ವೃತ್ತಿಪರ ತರಬೇತಿ: ಧರ್ಮೇಂದ್ರ ಪ್ರಧಾನ್‌

Leave a Reply

Your email address will not be published. Required fields are marked *