Droupadi Murmu: ಬ್ಲ್ಯಾಕ್‌ ಸಾವನ್‌ ಶೃಂಗಸಭೆಯಲ್ಲಿ ಭಾಗವಹಿಸಿದ ದ್ರೌಪದಿ ಮುರ್ಮು

Droupadi Murmu visits BLACK SWAN summit

ಭುವನೇಶ್ವರ:  ಒಡಿಶಾ ಸರ್ಕಾರ ಭುವನೇಶ್ವರದಲ್ಲಿಂದು ಆಯೋಜಿಸಿದ್ದ 2026ರ BLACK SWAN ಶೃಂಗಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಪಾಲ್ಗೊಂಡಿದ್ದಾರೆ.

ತಂತ್ರಜ್ಞಾನ ತುಂಬಾ ಅಗತ್ಯ

ತಂತ್ರಜ್ಞಾನ ಇಂದು ಸಾಮಾಜಿಕ ನ್ಯಾಯದ ಆಧಾರವಾಗಿ ಬೆಳವಣಿಗೆ ಹೊಂದಿದೆ. ತ್ವರಿತಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನದಿಂದಾಗಿ ನಾವೀನ್ಯತೆ ವಲಯಕ್ಕೆ ವೇಗ ದೊರೆತಿದೆ. ಸಮಾಜದ ಹಿತಾಸಕ್ತಿಯನ್ನು ರಕ್ಷಿಸಲು ತಂತ್ರಜ್ಞಾನ ಅಗತ್ಯವಾಗಿದ್ದು, ಭಾರತ ಸರ್ಕಾರ ತಂತ್ರಜ್ಞಾನ ವಲಯಕ್ಕೆ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.

ಸರ್ಕಾರ ಡಿಜಿಟಲೀಕರಣಕ್ಕೆ ಆದ್ಯತೆ ನೀಡುತ್ತಿರುವ ಪರಿಣಾಮವಾಗಿ ಅನೇಕ ಆಯಾಮಗಳಲ್ಲಿ ಜನಜೀವನ ಸುಗಮಗೊಂಡಿದೆ. ಫಿನ್ ಟೆಕ್ ಗಳು ಜನರ ಜೀವನದ ಆಧಾರವಾಗಿವೆ. ಈ ಹಿನ್ನೆಲೆಯಲ್ಲಿ ಸೈಬರ್ ಭದ್ರತೆಯಂತಹ ಅಪಾಯಗಳನ್ನು ಎದುರಿಸಲು ಮತ್ತು  ಸೈಬರ್ ಅಪರಾಧಗಳ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.

ಸರ್ಕಾರದ ನೀತಿಯಿಂದ ಆರ್ಥಿಕ ಪ್ರಗತಿ

 ಭಾರತ ಅತಿವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಗಿದ್ದು, ಸದ್ಯದಲ್ಲೇ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಳ್ಳಲಿದೆ. ಸರ್ಕಾರದ ನೀತಿಗಳು, ಡಿಜಿಟಲ್ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ತಂದ ಸುಧಾರಣಾ ಕ್ರಮಗಳು ಪ್ರಗತಿಗೆ ಮುನ್ನುಡಿ ಬರೆದಿವೆ. 2047ರ ವಿಕಸಿತ ಭಾರತದ ಸಂಕಲ್ಪವನ್ನು ಸಾಧಿಸಲು ಎಲ್ಲರನ್ನೂ ಒಳಗೊಳ್ಳುವ, ನ್ಯಾಯಯುತ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಪ್ರವಾಸದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ

Leave a Reply

Your email address will not be published. Required fields are marked *