ಮುಂಬೈ: ಬಾಲಿವುಡ್ (Bollywood) ನಟ ಶಾಹಿದ್ ಕಪೂರ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಹೊಸ ಸಿನಿಮಾಗಾಗಿ ಒಂದಾಗುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ. ಸದ್ಯ ಈ ಜೋಡಿ ಕಾಕ್ಟೇಲ್ 2 ಸಿನಿಮಾದ ಶೂಟಿಂಗ್ ಮಾಡುತ್ತಿದ್ದು, ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ರೋಮ್ಕಾಮ್ ಸಿನಿಮಾ ಈ ಕಾಕ್ಟೇಲ್ 2
ಇನ್ನು ಮಾಹಿತಿಗಳ ಪ್ರಕಾರ, ಈ ಜೋಡಿ, ಬಧಾಯಿ ಹೋ ಮತ್ತು ಮೈದಾನ್ ಖ್ಯಾತಿಯ ನಿರ್ದೇಶಕ ಅಮಿತ್ ರವೀಂದ್ರನಾಥ್ ಶರ್ಮಾ ಅವರೊಂದಿಗೆ ಈ ಕಾಕ್ಟೇಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಒಂದು ರೋಮ್ಕಾಮ್ ಎನ್ನಲಾಗಿದೆ. ಇನ್ನು ಈ ಸಿನಿಮಾ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವಿನ ವೃತ್ತಿಪರ ಸಂಬಂಧ ಬಹಳ ಅದ್ಭುತವಾಗಿ ಬೆಸೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮತ್ತೊಂದು ಸಿನಿಮಾ ಮಾಡಲು ಸಹ ಈ ಜೋಡಿ ತಕ್ಷಣವೇ ಒಪ್ಪಿಕೊಂಡಿದೆ ಎನ್ನಲಾಗಿದೆ.
ಹೊಸ ಸಿನಿಮಾ ನಿರ್ಮಾಣ ಮಾಡಲಿದೆ ಜಿಯೋ ಸ್ಟುಡಿಯೋಸ್
ಇನ್ನು ಮುಂಬರುವ ಹೆಸರಿಡದ ಚಿತ್ರವನ್ನು ಸುನೀರ್ ಖೇಟರ್ಪಾಲ್ ಅವರು ದಿ ವರ್ಮಿಲಿಯನ್ ವರ್ಲ್ಡ್ ಬ್ಯಾನರ್ ಅಡಿಯಲ್ಲಿ, ಜಿಯೋ ಸ್ಟುಡಿಯೋಸ್ ಸಹಯೋಗದೊಂದಿಗೆ ನಿರ್ಮಾಣ ಮಾಡುತ್ತಿದ್ದಾರೆ. ಬ್ಲಡಿ ಡ್ಯಾಡಿ ನಂತರ ಖೇಟರ್ಪಾಲ್ ಅವರು ಶಾಹಿದ್ ಕಪೂರ್ ಅವರ ಜೊತೆ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ.
ಇದನ್ನೂ ಓದಿ: ಕೊನೆಗೂ ಮೌನ ಮುರಿದ ತಲ್ವೀಂದರ್, ದಿಶಾ ಜೊತೆಗಿನ ಡೇಟಿಂಗ್ ಸತ್ಯಾನಾ?
