Disha Patani: ಕೊನೆಗೂ ಮೌನ ಮುರಿದ ತಲ್ವೀಂದರ್, ದಿಶಾ ಜೊತೆಗಿನ ಡೇಟಿಂಗ್‌ ಸತ್ಯಾನಾ?

singer Talwiinder Breaks Silence On Disha Patani Dating Rumours

ಮುಂಬೈ: ಸಖತ್‌ ಬೋಲ್ಡ್‌ ಲುಕ್‌ಗೆ ಫೇಮಸ್‌ ಆಗಿರುವ ಬಾಲಿವುಡ್‌ ನಟಿ ದಿಶಾ ಪಟಾನಿ (Disha Patani) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ತಮ್ಮ ಲವ್‌ ಲೈಫ್‌ ವಿಚಾರವಾಗಿ ಎಲ್ಲರ ಹುಬ್ಬೇರಿಸಿದ್ದಾರೆ.

ತಲ್ವೀಂದರ್ ಜೊತೆ ದಿಶಾ ಡೇಟಿಂಗ್‌

ಕಳೆದ ಕೆಲ ಸಮಯದ ಹಿಂದೆ ಉದಯಪುರದಲ್ಲಿ ನಡೆದ ಬಾಲಿವುಡ್‌ ನಟಿ ಕೃತಿ ಸನೋನ್ ಅವರ ಸಹೋದರಿ ನೂಪುರ್ ಸನೋನ್ ಅವರ ವಿವಾಹ ಸಮಾರಂಭದಲ್ಲಿ ದಿಶಾ ಪಟಾನಿ ಮತ್ತು ಪಂಜಾಬಿ ಗಾಯಕ ತಲ್ವೀಂದರ್ ಕೈ ಹಿಡಿದುಕೊಂಡು ಓಡಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಈ ಕಾರ್ಯಕ್ರಮದಲ್ಲಿ ನಟಿ ದಿಶಾ ಹಾಗೂ ಅವರ ಸ್ನೇಹಿತೆ ಮೌನಿ ರಾಯ್‌ ಮತ್ತು ಮೌನಿ ಪತಿ ಸೂರಜ್‌ ಸಹ ಭಾಗವಹಿಸಿದ್ದರು. ಈ ಸಮಯದಲ್ಲಿ ತಲ್ವೀಂದರ್ ಕೂಡ ಇದ್ದರು. ಈ 4 ಜನರ ಕೆಲ ವಿಡಿಯೋಗಳು ಸಖತ್‌ ವೈರಲ್‌ ಆಗಿದ್ದು, ದಿಶಾ ಹಾಗೂ ತಲ್ವೀಂದರ್ ಡೇಟ್‌ ಮಾಡುತ್ತಿದ್ದಾರೆ ಎನ್ನುವ ಗುಮಾನಿ ಎಲ್ಲರಿಗೂ ಶುರುವಾಗಿದೆ. ಇದೀಗ ಈ ವಿಚಾರವಾಗಿ ತಲ್ವೀಂದರ್ ಮೌನ ಮುರಿದಿದ್ದು, ತಮ್ಮ ಹಾಗೂ ದಿಶಾ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ತಲ್ವೀಂದರ್ ಹೇಳಿದ್ದೇನು?

ನಾವಿಬ್ಬರು ಕೆಲ ಸಮಯ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೇವೆ. ಈ ಕಾರಣದಿಂದ ಎಲ್ಲರ ಗಮನ ನಮ್ಮ ಕಡೆ ಸೆಳೆಯುವಂತೆ ಆಗಿದೆ. ಆದರೆ ನಾವು ಒತ್ತಡ ಅಥವಾ ವದಂತಿಗಳಿಗೆ ಮಣಿಯಲು ಇಷ್ಟಪಡುವುದಿಲ್ಲ. ನಾವಿಬ್ಬರೂ ಇನ್ನೂ ಅನೇಕ ವಿಚಾರಗಳಲ್ಲಿ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ. ನಾವು ಈ ವದಂತಿಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಎಂದು ತಲ್ವೀಂದರ್ ಹೇಳಿದ್ದಾರೆ.

ಇದನ್ನೂ ಓದಿ: ಧುರಂಧರ್ 2 ಸಿನಿಮಾದಲ್ಲಿ ಸಲ್ಮಾನ್‌ ಖಾನ್?‌ ಬಾಯ್‌ಜಾನ್‌ ಫೋಟೋ ವೈರಲ್

Leave a Reply

Your email address will not be published. Required fields are marked *