Salman Khan: ಧುರಂಧರ್ 2 ಸಿನಿಮಾದಲ್ಲಿ ಸಲ್ಮಾನ್‌ ಖಾನ್?‌ ಬಾಯ್‌ಜಾನ್‌ ಫೋಟೋ ವೈರಲ್

Salman Khan plays Bade Saab in Dhurandhar 2

ಮುಂಬೈ: ಬಾಲಿವುಡ್‌ ಮಾತ್ರವಲ್ಲದೇ ಭಾರತದಾದ್ಯಂತೆ ಸಖತ್‌ ಯಶಸ್ಸು ಗಳಿಸಿದ್ದ ನಟ ರಣವೀರ್‌ ಸಿಂಗ್‌ ಅಭಿನಯದ ಧುರಂಧರ್‌ ಸಿನಿಮಾದ ಮುಂದಿನ ಭಾಗ ಸಹ ಬಿಡುಗಡೆಗೆ ಸಜ್ಜಾಗಿದ್ದು, ಎಲ್ಲರ ಕಣ್ಣು ಅದರ ಮೇಲಿದೆ. ಇದೀಗ ಈ ಸಿನಿಮಾದಲ್ಲಿ ಬಾಲಿವುಡ್‌ ಬಾಯ್‌ಜಾನ್‌ ಸಲ್ಮಾನ್‌ ಖಾನ್‌ (Salman Khan) ಸಹ ಮುಖ್ಯಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಏನಿದು ವಿಚಾರ ಇಲ್ಲಿದೆ ನೋಡಿ.

ಸಲ್ಮಾನ್‌ ಖಾನ್‌ ಫೋಟೋ ವೈರಲ್‌

ನಿನ್ನೆಯಷ್ಟೇ ಧುರಂಧರ್ 2 ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಅಭಿಮಾನಿಗಳಿಗೆ ಈ ಸಿನಿಮಾದ ಮೇಲಿನ ನಿರೀಕ್ಷೆ ಹಾಗೂ ಕುತೂಹಲ ಹೆಚ್ಚಿದೆ. ಈ ನಡುವೆ ಧುರಂಧರ್ 2 ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ನಟಿಸಿರುವ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹೌದು, ಸೋಷಿಯಲ್‌ ಮೀಡಿಯಾದಲ್ಲಿ ಫೋಟೋವೊಂದು ಹರಿದಾಡುತ್ತಿದೆ. ಈ ಫೋಟೋ ಅಭಿಮಾನಿಗಳ ಉತ್ಸಾಹವನ್ನ ಹೆಚ್ಚು ಮಾಡಿದೆ.  

ಧುರಂಧರ್ 2 ಚಿತ್ರದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆಯಾದ ನಂತರ, ಚಿತ್ರಕ್ಕೆ ಸಂಬಂಧಿಸಿದ ಒಂದು ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಇದು ವೈರಲ್‌ ಆಗುತ್ತಿದ್ದಂತೆ, ಚಿತ್ರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುವ  ಬಗ್ಗೆ ಚರ್ಚೆಗಳು ಹುಟ್ಟುಕೊಂಡಿದ್ದು, ಬಹಳ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಫೋಟೋಗೆ ಅಭಿಮಾನಿಗಳಿಂದ ಕಮೆಂಟ್‌

ಸಲ್ಮಾನ್ ಖಾನ್ ಅವರ ವೈರಲ್ ಫೋಟೋಗೆ ಜನರು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಅನೇಕ ಜನರು ಎಐ ಬಳಕೆ ಮಾಡಿ ಈ ಫೋಟೋ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಧುರಂಧರ್ 2 ರಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಊಹೆ ಮಾಡುತ್ತಿದ್ದಾರೆ. ಹಾಗೆಯೇ, ಧುರಂಧರ್ 2 ರಲ್ಲಿ ಸಲ್ಮಾನ್ ಖಾನ್ “ಬಡೇ ಸಾಬ್” ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದೂ ಸಹ ಹೇಳುತ್ತಿದ್ದಾರೆ. ಆದರೆ ಈ ವಿಚಾರವಾಗಿ ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರು ಮಾತ್ರ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ಬಿಡುಗಡೆಗೆ ಸಜ್ಜಾಯ್ತು ಧುರಂಧರ್‌ 2, ಹೊಸ ಅವತಾರದಲ್ಲಿ ರಣವೀರ್ ಸಿಂಗ್

Leave a Reply

Your email address will not be published. Required fields are marked *