TOP NEWS

Sigandur Bridge: ಸಿಗಂದೂರು ಸೇತುವೆ ಲೋಕಾರ್ಪಣೆಗೆ ಒಂದು ವರ್ಷ: ಇಂದು ಸಂಜೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ

1 year to sigandur bridge inauguration people celebrating today

ಸಿಗಂದೂರು: ಹಲವು ವರ್ಷಗಳ ಸುದೀರ್ಘ ಹೋರಾಟ ಹಾಗೂ ನಿರಂತರ ನಿರೀಕ್ಷೆಯ ನಂತರ ಬಹುನಿರೀಕ್ಷಿತ ಸಿಗಂದೂರು ಸೇತುವೆ (Sigandur Bridge) ಲೋಕಾರ್ಪಣೆಯಾಗಿ ಸುಮಾರು ಒಂದು ವರ್ಷ ಆಗಿದೆ, ಈ ಐತಿಹಾಸಿಕ ಕ್ಷಣವನ್ನು ಹಬ್ಬದಂತೆ ಆಚರಿಸಲು ಸಾರ್ವಜನಿಕರು ಸನ್ನದ್ಧರಾಗಿದ್ದಾರೆ. ಸೇತುವೆ ನಿರ್ಮಾಣಕ್ಕಾಗಿ ನಡೆಸಿದ ಅವಿರತ ಹೋರಾಟದ ಸವಿನೆನಪಿಗಾಗಿ ಇಂದು ಸಂಜೆ ವಿಶೇಷ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಇಂದು, ಅಂದರೆ ಜುಲೈ 13ರ ಸೋಮವಾರ ಸಂಜೆ 7:30ಕ್ಕೆ ಸರಿಯಾಗಿ ಸೇತುವೆಯ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಭಾಗದ ಸಾರ್ವಜನಿಕರೆಲ್ಲರೂ ಒಂದೆಡೆ ಜಮಾಯಿಸಲಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲನ್ನು ಸ್ಮರಿಸುವ ಸಲುವಾಗಿ ಪಟಾಕಿಗಳನ್ನು ಸಿಡಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಸ್ಥಳೀಯರ ಬಹುಕಾಲದ ಕನಸಾಗಿದ್ದ ಈ ಸೇತುವೆಯು ಈ ಭಾಗದ ಸಾರಿಗೆ ಸಂಪರ್ಕಕ್ಕೆ ಹೊಸ ಕ್ರಾಂತಿಯನ್ನೇ ತಂದಿದ್ದು, ಈ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೂ ಜೊತೆಯಾಗಿ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಬೇಕು ಎಂದು ಸಂಘಟಕರು ಹಾಗೂ ಹೋರಾಟಗಾರರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಕರ್ನಾಟಕದ ಹೆಮ್ಮೆಯ ಸಿಗಂದೂರು ಕೇಬಲ್ ಸೇತುವೆಯ ವಿಶೇಷತೆಗಳು ಹಾಗೂ ತಾಂತ್ರಿಕ ವಿವರಗಳು:

ರಾಜ್ಯದ ಅತಿ ದೊಡ್ಡ ಒಳನಾಡು ಸೇತುವೆ ಎಂಬ ಅಪರೂಪದ ಕೀರ್ತಿಗೆ ಪಾತ್ರವಾಗಿರುವ ಸಿಗಂದೂರು ಕೇಬಲ್ ಬ್ರಿಡ್ಜ್ ಅನ್ನು ಒಟ್ಟು 470 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬರೋಬ್ಬರಿ 2.25 ಕಿಲೋಮೀಟರ್ ಉದ್ದವಿರುವ ಈ ಬೃಹತ್ ಸೇತುವೆಯು 16 ಮೀಟರ್ ಅಗಲವನ್ನು ಹೊಂದಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಇದರ ಎರಡು ಬದಿಗಳಲ್ಲೂ ಅತ್ಯಾಧುನಿಕ ಫುಟ್‌ಪಾತ್‌ಗಳನ್ನು (ಪಾದಚಾರಿ ಮಾರ್ಗ) ನಿರ್ಮಿಸಲಾಗಿದೆ.

ರಾಷ್ಟ್ರ ಮಟ್ಟದ ಸುದರ್ಶನ ಸೇತುವೆಗೆ ಹೋಲಿಕೆ: ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಗುಜರಾತ್‌ನ ‘ಸುದರ್ಶನ ಸೇತು’ ಒಟ್ಟು 980 ಕೋಟಿ ರೂಪಾಯಿ ವೆಚ್ಚದಲ್ಲಿ 2024ರಲ್ಲಿ ಲೋಕಾರ್ಪಣೆಗೊಂಡಿತ್ತು. 2.32 ಕಿಲೋಮೀಟರ್ ಉದ್ದದ ಈ ಚತುಷ್ಪಥ (ಫೋರ್ ಲೇನ್) ಸೇತುವೆಗೆ ಹೋಲಿಸಿದರೆ, ಸಿಗಂದೂರು ಸೇತುವೆಯು ತನ್ನದೇ ಆದ ವಿಶಿಷ್ಟ ತಾಂತ್ರಿಕ ನೈಪುಣ್ಯತೆಯನ್ನು ಹೊಂದಿದೆ.

ತಾಂತ್ರಿಕ ವಿನ್ಯಾಸ ಮತ್ತು ಪಿಲ್ಲರ್‌ಗಳ ವಿಶೇಷತೆ: ಈ ವಿಶಿಷ್ಟ ದ್ವಿಪಥ (ಟು ಲೇನ್) ಸೇತುವೆಯ ಒಟ್ಟಾರೆ ಸಿವಿಲ್ ಕಾಮಗಾರಿಗೆ 423.15 ಕೋಟಿ ರೂಪಾಯಿಗಳು ವೆಚ್ಚವಾಗಿದ್ದು, ಇದರ ಒಟ್ಟು ವ್ಯಾಪ್ತಿ 2.44 ಕಿಲೋಮೀಟರ್ ಆಗಿದೆ (ಇದರಲ್ಲಿ 740 ಮೀಟರ್ ಭಾಗವನ್ನು ಮಾತ್ರ ಕೇಬಲ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ). ಪಾದಚಾರಿಗಳ ಸುರಕ್ಷತೆಗಾಗಿ ಮೂರು ಕಡೆಗಳಲ್ಲಿ 1.5 ಮೀಟರ್ ಅಗಲದ ಫುಟ್‌ಪಾತ್ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯಲ್ಲಿ ಎಂಜಿನಿಯರಿಂಗ್ ಚಮತ್ಕಾರವೊಂದು ನಡೆದಿದ್ದು, ಸಾಮಾನ್ಯವಾಗಿ ಪ್ರತಿ 30 ಮೀಟರ್‌ಗೆ ಒಂದರಂತೆ ಒಟ್ಟು 80 ಪಿಲ್ಲರ್ ಫೌಂಡೇಶನ್‌ಗಳನ್ನು ನಿರ್ಮಿಸಬೇಕಾದ ಜಾಗದಲ್ಲಿ, ಕೇವಲ 19 ಬಲಿಷ್ಠ ಪಿಲ್ಲರ್ ಫೌಂಡೇಶನ್‌ಗಳನ್ನು ಮಾತ್ರ ಬಳಸಿ ಇಡೀ ಕಾಮಗಾರಿಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದರಲ್ಲಿ ಪ್ರತಿ ಪಿಲ್ಲರ್ ಫೌಂಡೇಶನ್ ನಡುವೆ 177 ಮೀಟರ್ ಅಂತರವಿದ್ದು, ಇನ್ನುಳಿದ 140 ಮೀಟರ್‌ ವ್ಯಾಪ್ತಿಯನ್ನು ಕೇವಲ 4 ಮುಖ್ಯ ಫೌಂಡೇಶನ್‌ಗಳ ಆಧಾರದ ಮೇಲೆ ಕವರ್ ಮಾಡಿರುವುದು ಈ ಸೇತುವೆಯ ಹೆಜ್ಜೆಯಾಗಿದೆ.

ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಮುಗಿಯದ ಅಸಮಾಧಾನ: “ನವೆಂಬರ್ ಕ್ರಾಂತಿ ಆಗದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಉಳಿಯಲ್ಲ” ಎಂದು ಯತ್ನಾಳ್ ಗಂಭೀರ ಎಚ್ಚರಿಕೆ!

Leave a Reply

Your email address will not be published. Required fields are marked *