TOP NEWS
RTO Crackdown on Errant Autos in Shivamogga Applications Open for Subsidies Under Fisheries Schemes

Shivamogga: ನಿಯಮ ಮೀರಿ ಸಂಚರಿಸುವ ಆಟೋಗಳಿಗೆ ಆರ್​ಟಿಒ ಬಿಸಿ; ಮೀನುಗಾರಿಕೆ ಯೋಜನೆಗಳಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ನಗರದಲ್ಲಿ ಫಿಟ್‌ನೆಸ್ ಸರ್ಟಿಫಿಕೇಟ್ (ಎಫ್‌ಸಿ) ನವೀಕರಿಸದೆ ಕಾನೂನು ಬಾಹಿರವಾಗಿ ರಸ್ತೆಗಿಳಿಯುತ್ತಿರುವ ಆಟೋರಿಕ್ಷಾಗಳ ವಿರುದ್ಧ ಕಟ್ಟುನಿಟ್ಟಿನ (Shivamogga) ಕಾನೂನು ಕ್ರಮ ಜರುಗಿಸುವುದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ (ಜುಲೈ 15, 2026) ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ತಮ್ಮ ಆಟೋಗಳ ಎಫ್‌ಸಿ ಅವಧಿ ಮುಗಿದಿರುವ ಮಾಲೀಕರು ಅಥವಾ ಚಾಲಕರು ತಕ್ಷಣವೇ…

Read More
1 year to sigandur bridge inauguration people celebrating today

Sigandur Bridge: ಸಿಗಂದೂರು ಸೇತುವೆ ಲೋಕಾರ್ಪಣೆಗೆ ಒಂದು ವರ್ಷ: ಇಂದು ಸಂಜೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಸಿಗಂದೂರು: ಹಲವು ವರ್ಷಗಳ ಸುದೀರ್ಘ ಹೋರಾಟ ಹಾಗೂ ನಿರಂತರ ನಿರೀಕ್ಷೆಯ ನಂತರ ಬಹುನಿರೀಕ್ಷಿತ ಸಿಗಂದೂರು ಸೇತುವೆ (Sigandur Bridge) ಲೋಕಾರ್ಪಣೆಯಾಗಿ ಸುಮಾರು ಒಂದು ವರ್ಷ ಆಗಿದೆ, ಈ ಐತಿಹಾಸಿಕ ಕ್ಷಣವನ್ನು ಹಬ್ಬದಂತೆ ಆಚರಿಸಲು ಸಾರ್ವಜನಿಕರು ಸನ್ನದ್ಧರಾಗಿದ್ದಾರೆ. ಸೇತುವೆ ನಿರ್ಮಾಣಕ್ಕಾಗಿ ನಡೆಸಿದ ಅವಿರತ ಹೋರಾಟದ ಸವಿನೆನಪಿಗಾಗಿ ಇಂದು ಸಂಜೆ ವಿಶೇಷ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಇಂದು, ಅಂದರೆ ಜುಲೈ 13ರ ಸೋಮವಾರ ಸಂಜೆ 7:30ಕ್ಕೆ ಸರಿಯಾಗಿ ಸೇತುವೆಯ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಭಾಗದ ಸಾರ್ವಜನಿಕರೆಲ್ಲರೂ…

Read More
Crime Shikaripura Missing Case Twist Teen's Body Packed in Suitcase

Crime: ಶಿಕಾರಿಪುರದಲ್ಲಿ ಬಯಲಾಯ್ತು ಒಂದು ವರ್ಷದ ಹಿಂದಿನ ಕರಾಳ ರಹಸ್ಯ

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರದಲ್ಲಿ ವರ್ಷದ ಹಿಂದೆ ನಡೆದಿದ್ದ ಅಪ್ರಾಪ್ತ ಬಾಲಕಿಯ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರಕ್ತ ಹೆಪ್ಪುಗಟ್ಟಿಸುವ ಸತ್ಯವೊಂದು ಪೊಲೀಸರ (Crime) ತನಿಖೆಯಿಂದ ಹೊರಬಿದ್ದಿದೆ. ತಂಗಿದ್ದ ಪಿಜಿಯಲ್ಲೇ (PG) ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಕಿಯ ಶವವನ್ನು, ತಮ್ಮ ಮರ್ಯಾದೆ ಉಳಿಸಿಕೊಳ್ಳುವ ಭೀತಿಯಿಂದ ದೊಡ್ಡ ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿ ಪ್ರಪಾತಕ್ಕೆ ಎಸೆದು ಬಂದಿದ್ದ ಕೃತ್ಯ ಒಂದು ವರ್ಷದ ಬಳಿಕ ಅನಾವರಣಗೊಂಡಿದೆ. ಸಾಕ್ಷಿ ನಾಶ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಇಟ್ಟಿಗೆಹಳ್ಳಿಯ ಮುದ್ದನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ…

Read More
crime women assaulted in Shivamogga and Hyderabad police arrested one

Crime: ಶಿವಮೊಗ್ಗ ಮತ್ತು ಹೈದರಾಬಾದ್‌ನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ: ಇಬ್ಬರು ಆರೋಪಿಗಳ ವಿರುದ್ಧ ಪೊಲೀಸ್ ಕ್ರಮ

ಭದ್ರಾವತಿ: ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ (Crime) ಎರಡು ಪ್ರತ್ಯೇಕ ಘಟನೆಗಳು ಶಿವಮೊಗ್ಗ ಜಿಲ್ಲೆ ಮತ್ತು ಹೈದರಾಬಾದ್‌ನಲ್ಲಿ ವರದಿಯಾಗಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ವಕೀಲ ಭರತ್ ವಿರುದ್ಧ ದೂರು; ಪತ್ತೆಗೆ ಜಾಲ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ವಕೀಲ ಹಾಗೂ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡಿರುವ ಭರತ್ ಎಂಬಾತನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾರೆ. ಸಂತ್ರಸ್ತೆಯ ಪತಿಯ ಸ್ನೇಹಿತನೆಂದು ಹೇಳಿಕೊಂಡು ಪರಿಚಯ ಬೆಳೆಸಿದ್ದ ಈತ, ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ…

Read More
Wild life banned entry on hirebhaskara dam to tourist

Hirebhaskara: ಪ್ರವಾಸಿಗರಿಗೆ ಶಾಕಿಂಗ್‌ ಸುದ್ದಿ, ಹೀರೇಭಾಸ್ಕರ ಡ್ಯಾಮ್‌ಗೆ ನೋ ಎಂಟ್ರಿ

ಶಿವಮೊಗ್ಗ: ಮಲೆನಾಡು ಪ್ರವಾಸಿ ಪ್ರಿಯರ ನೆಚ್ಚಿನ ಸ್ಥಳ. ಇಲ್ಲಿ ನೋಡಲು ಪ್ರಕೃತಿ ಸೌಂದರ್ಯ ಸವಿಯಲು ಸಮಯವೇ ಸಾಕಾಗುವುದಿಲ್ಲ, ಈಗಂತೂ ಬೇಸಿಗೆ ರಜೆ ಇರುವುದರಿಂದ ಪ್ರವಾಸಿಗರ ದಂಡೇ ಸೇರಿರುತ್ತದೆ. ಆದರೆ ಶಿವಮೊಗ್ಗ ಜಿಲ್ಲೆಗೆ ಪ್ರವಾಸಕ್ಕೆ ಹೋಗುವವರಿಗೆ ನಿರಾಸೆಯ ಸುದ್ದಿ ಒಂದಿದೆ. ಇತ್ತೀಚೆಗೆ ಬಹಳ ಫೇಮಸ್‌ ಆಗಿದ್ದ ಹೀರೇಭಾಸ್ಕರ (Hirebhaskara) ಡ್ಯಾಮ್‌ ಪ್ರವೇಶಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ನಿಷೇಧ ಹೇರಿದೆ. ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದ್ದು ಡ್ಯಾಂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಅನೇಕ ಪ್ರಸಿದ್ದ ಸ್ಥಳಗಳಿದೆ. ಅದರಲ್ಲೂ…

Read More
protest march against nuclear power plant in sagara besuru village

Sagara: ಬೇಸೂರಿನಲ್ಲಿ ಅಣುಸ್ಥಾವರ ವಿರೋಧಿಸಿ ಪಾದಯಾತ್ರೆ, NOC ಕೊಡದಂತೆ ಸರ್ಕಾರಕ್ಕೆ ಆಗ್ರಹ

ಶಿವಮೊಗ್ಗ: ಸಾಗರ (Sagara) ತಾಲ್ಲೂಕು ಅವಿನಹಳ್ಳಿ ಹೋಬಳಿ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣುವಿದ್ಯುತ್ ಸ್ಥಾವರ ನಿರ್ಮಿಸುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಉದ್ದೇಶವನ್ನು ವಿರೋಧಿಸಿ ಇಂದು ಪಾದಯಾತ್ರೆ ನಡೆಸಲಾಗಿದೆ. ಪಾದಯಾತ್ರೆಯಲ್ಲಿ ಸಾವಿರಾರು ಜನ ಭಾಗಿ ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ವೇದಿಯಿಂದ ಬೇಸೂರಿನಿಂದ ಸಾಗರ ಎಸಿ ಕಚೇರಿಯ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಜನ ಬೆಳಿಗ್ಗೆ 7 ಗಂಟೆಗೆ ಬೇಸೂರು ನಿಂದ ಸಾಗರ ತಾಲೂಕು ಕಚೇರಿ ವರೆಗೆ ಸರಿಸುಮಾರು 30 ಕಿಲೋಮೀಟರ್…

Read More
Crime deadly road mishap near kolluru temple 2 people lost life 8 injured

Crime: ಕೊಲ್ಲೂರು ಬಳಿ ಭೀಕರ ಅಪಘಾತ: ಕೇರಳದ ಇಬ್ಬರು ಪ್ರವಾಸಿಗರು ಸಾವು, ಎಂಟು ಜನರಿಗೆ ಗಂಭೀರ ಗಾಯ

ಕುಂದಾಪುರ: ಪ್ರಸಿದ್ಧ ಪ್ರವಾಸಿ ತಾಣ ಕೊಡಚಾದ್ರಿಗೆ ಬಂದು ಮರಳಿ ಹೋಗುತ್ತಿದ್ದ ಕೇರಳ ಮೂಲದ ಪ್ರವಾಸಿಗರ ಜೀಪ್ ಹಾಗೂ ಇನ್ಸುಲೇಟರ್ ವಾಹನದ ನಡುವೆ ಭಾನುವಾರ (Crime) ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ನಡೆದ ಈ ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಮಣಿಪಾಲ್‌ ಆಸ್ಪತ್ರೆಗೆ ದಾಖಲು ಕೇರಳ ಮೂಲದ ಜ್ಯೋತಿ (35) ಹಾಗೂ ಆರ್ಯ ಅನೂಪ್ (28) ಅಪಘಾತದಲ್ಲಿ ಜೀವ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ. ಇನ್ನುಳಿದಂತೆ ಪ್ರವಾಸಿಗರಾದ ಅಯನ್…

Read More