TOP NEWS

Sagara: ಬೇಸೂರಿನಲ್ಲಿ ಅಣುಸ್ಥಾವರ ವಿರೋಧಿಸಿ ಪಾದಯಾತ್ರೆ, NOC ಕೊಡದಂತೆ ಸರ್ಕಾರಕ್ಕೆ ಆಗ್ರಹ

protest march against nuclear power plant in sagara besuru village

ಶಿವಮೊಗ್ಗ: ಸಾಗರ (Sagara) ತಾಲ್ಲೂಕು ಅವಿನಹಳ್ಳಿ ಹೋಬಳಿ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣುವಿದ್ಯುತ್ ಸ್ಥಾವರ ನಿರ್ಮಿಸುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಉದ್ದೇಶವನ್ನು ವಿರೋಧಿಸಿ ಇಂದು ಪಾದಯಾತ್ರೆ ನಡೆಸಲಾಗಿದೆ.

ಪಾದಯಾತ್ರೆಯಲ್ಲಿ ಸಾವಿರಾರು ಜನ ಭಾಗಿ

ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ವೇದಿಯಿಂದ ಬೇಸೂರಿನಿಂದ ಸಾಗರ ಎಸಿ ಕಚೇರಿಯ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಜನ ಬೆಳಿಗ್ಗೆ 7 ಗಂಟೆಗೆ ಬೇಸೂರು ನಿಂದ ಸಾಗರ ತಾಲೂಕು ಕಚೇರಿ ವರೆಗೆ ಸರಿಸುಮಾರು 30 ಕಿಲೋಮೀಟರ್  ವರೆಗಿನ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ಅಣುಸ್ಥಾವರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಪಾದಯಾತ್ರೆಯಲ್ಲಿ ಸ್ಥಳೀಯ ನಾಯಕರಾದ ಪ್ರಸನ್ನ ಕೆರೆಕೈ ..ಇಂದೂದರ್ ಗೌಡ ,..ಹಕ್ರೆ ಮಲ್ಲಿಕಾರ್ಜುನ  . ಮಹಾಬಲೇಶ್ವರ ಹೊನಗೋಡು   .ಗಿರೀಶ್ ಗುಳ್ಳಳಿ .. ಅರುಣ್‌ ಕರೂರು.ಬೇಸೂರು ಜಯಂತ್. ನಾಗರಾಜ್ ಬಬ್ಬಿಗೆ ಕೂಡ ಜನರಿಗೆ ಸಾಥ್‌ ನೀಡಿದ್ದು, ಅಣುಸ್ಥಾವರ ನಿರ್ಮಾಣ ಮಾಡದಂತೆ ಆಗ್ರಹ ಮಾಡಿದ್ದಾರೆ.

ಇನ್ನು ಈ ಸಮಯದಲ್ಲಿ ಮಾತನಾಡಿದ ಸ್ಥಳೀಯ ನಾಯಕ ಪ್ರಸನ್ನ ಕೆರೆಕೈ ಈ ಅಣುಸ್ಥಾವರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಜಾಗಕ್ಕೆ ಎನ್‌ಓಸಿ ಕೊಡಲೇಬಾರದು. ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದಬೇಕು. ಈಗಾಗಲೇ ಮಲೆನಾಡು ಭಾಗದ ಜನ ಅನೇಕ ಸಮಸ್ಯೆಗಳನ್ನ ಅನುಭವಿಸಿದ್ದಾರೆ. ಮಲೆನಾಡಿನ ಜೀವ ವೈವಿಧ್ಯತೆ ನಡುವೆ ಜೀವನ ನಡೆಸುವ ಮಲೆನಾಡಿಗರ ಶರಾವತಿ ನದಿದಂಡೆಯ ಜನರ ಮೇಲೆ ಕಳೆದ ಆರುದಶಕದಿಂದ ನಿರಂತರವಾಗಿ ಅನೈತಿಕ ದೌರ್ಜನ್ಯ ನೆಡೆಸಲಾಗುತ್ತಿದೆ. ಈ ಮೊದಲು 1948ರಲ್ಲಿ ಮಡೆನೂರು ಹಾಗೂ ಎರಡನೇ ಬಾರಿ 1963ರಲ್ಲಿ ಲಿಂಗಿನಮಕ್ಕಿ  ಈಗ ಬೇಸೂರು ಅಣು ಸ್ಥಾವರ ಎಂಬ ಪೆಡಂಭೂತ ಜನರನ್ನ ಕಾಡುತ್ತಿದೆ. ಈ ಯೋಜನೆಯಿಂದ ಅನೇಕ ಕಷ್ಟಗಳಾಗುತ್ತದೆ. ಹಾಗಾಗಿ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಅಣುಸ್ಥಾವರದಿಂದ ರಾಜ್ಯಕ್ಕೆ ಏನು ಲಾಭ?

ರಾಜ್ಯಕ್ಕೆ ಸಾಕಷ್ಟು ವಿದ್ಯುತ್ ಪೂರೈಕೆ ಆಗುತ್ತದೆ

ಇಲ್ಲಿ ಅಣು ಸ್ಥಾವರ ಮಾಡಲು ಶರಾವತಿ ಹಿನ್ನೀರಿನ ಅನುಕೂಲಕರ ವಾತಾವರಣ ಸಾಕಷ್ಟು ನೀರು. ತಂಪಾದ ವಾತಾವರಣ ಸಿಗಲಿದೆ

ಅಧಿಕ ವಿದ್ಯುತ್ ನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ. ಉದ್ಯೋಗ ಸೃಷ್ಟಿ ಆಗುತ್ತದೆ.

ಅಣುವಿದ್ಯುತ್ ಸ್ಥಾವರದಿಂದ ಆಗುವ ಪರಿಣಾಮಗಳು
1 ರಿಂದ 5 ವರ್ಷದ ಅಂದಾಜು
ಕೈಗ ಮತ್ತು ಕಾಸರಗೋಡು, ಹಂಡಿಗೋಡು ಅಧ್ಯಯನದ ವರದಿ ಪ್ರಕಾರ

  • ರೈತರ ಬದುಕೇ ಸರ್ವನಾಶ
    ರೈತರ ಭೂಮಿ ಫಲವತ್ತತೆ ವಾತಾವರಣದ ಉಷ್ಣತೆಯಿಂದ ಕಡಿಮೆಯಾಗಿ ಅಡಿಕೆ ಹಾಗೂ ಇತರೆ ಬೆಳೆಗಳ ಇಳುವರಿಲ್ಲಿ ಕುಂಠಿತ ಪ್ರಾಣಿ ಸಂಕುಲಗಳು ಮತ್ತು ಮನುಷ್ಯರು ದೀರ್ಘ ಕಾಲದ ಅನಾರೋಗ್ಯ ತುತ್ತಾಗಿ ಸರ್ವಾಂಗ ವೈಫಲ್ಯ, ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಸುಮಾರು 10 ರಿಂದ 9 ಜನರಲ್ಲಿ ಕಾಣಿಸಿಕೊಳ್ಳುತ್ತದೆ.
  • ಶೈಕ್ಷಣಿಕ ಸಂಸ್ಥೆಗಳ ಮೇಲೆ ಆಗುವ ಪರಿಣಾಮಗಳು
    ಉದಾಹರಣೆಗೆ ವಿಕಿರಣದಿಂದಾಗಿ ವಿದ್ಯಾರ್ಥಿಗಳ ಬೌದ್ಧಿಕ ಗುಣಮಟ್ಟ ಕಡಿಮೆಯಾಗಿ ಹಾಜರಾತಿ ಕಡಿಮೆಯಾಗುವುದು. ವಿದ್ಯಾರ್ಥಿಗಳ ಜೀವನ ನಾಶವಾಗುವುದು.
  • ನೀರಾವರಿ ಮೂಲ
    ಬಹುಗ್ರಾಮ ನೀರಾವರಿ ಮೂಲ ಶರಾವತಿಯಾಗಿದ್ದು ಸಾಗರ & ಹೊಸನಗರಕ್ಕೆ ಲಿಂಗನಮಕ್ಕಿ ಜಲಾಶಯದ ನೀರನ್ನು ಬಳಸುತ್ತಿರುವುದರಿಂದ ವಿಕಿರಣದಿಂದ ನೀರು ಮಲಿನವಾಗಿ ರೋಗ ಬಾಧೆಗಳು ದಿನೇ ದಿನೇ ಆವರಿಸುತ್ತವೆ.
  • ಪ್ರವಾಸೋದ್ಯಮ ಕೂಡ ಕುಂಠಿತಗೊಳ್ಳುತ್ತದೆ.
    ಉದಾಹರಣೆಗೆ ಜೋಗ, ಇಕ್ಕೇರಿ, ಕೆಳದಿ, ವರದಹಳ್ಳಿ, ಸಿಗಂದೂರು ಕ್ಷೇತ್ರಕ್ಕೆ ಬರುವ ಯಾತ್ರಿಗಳು ಕ್ರಮೇಣ ಕಡಿಮೆಯಾಗುತ್ತಾರೆ.
  • ಎಲ್ಲಾ ವ್ಯಾಪಾರಸ್ಥರಿಗೂ ಮೀನುಗಾರಿಕೆ ಕೃಷಿ ಆಧಾರಿತ ಸಂಸ್ಥೆಗಳು, ಕುಟುಂಬಗಳು ಇದರ ಅವಲಂಬಿತ ಕೂಲಿ ಕಾರ್ಮಿಕರ ಕುಟುಂಬಗಳು, ಕೃಷಿ ಕಾರ್ಮಿಕ ಕುಟುಂಬಗಳು ಕಡಿಮೆಯಾಗುತ್ತವೆ.
  • ಮಠಮಂದಿರಗಳು, ಸಂಸ್ಕೃತ ಅಧ್ಯಯನ ಕೇಂದ್ರಗಳು ಇದರ ವ್ಯಾಪ್ತಿಯ ಕ್ಷೀಣಿಸುತ್ತಾ ಬರುತ್ತವೆ. ಜೊತೆಗೆ ಶುಭ ಕಾರ್ಯಗಳು ನಿಲ್ಲುತ್ತವೆ. ವಧು ವರರು ಅವಿವಾಹಿತರಾಗಿ ಉಳಿದುಕೊಳ್ಳುವ ಸಂಭವ ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಗರ್ಭಪಾತ ಸಮಸ್ಯೆ ಹೆಚ್ಚಾಗುತ್ತದೆ.

ವರದಿ: ಪ್ರಶಾಂತ್‌ ಭಟ್

ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಎಸ್​​ಎಸ್​​ಎಲ್​​ಸಿ 2ನೇ ಪರೀಕ್ಷೆ ಆರಂಭ: ಹಿಜಾಬ್ ನಿಯಮದ ಸುತ್ತ ಗೊಂದಲ

Leave a Reply

Your email address will not be published. Required fields are marked *