TOP NEWS

Shivamogga: ನಿಯಮ ಮೀರಿ ಸಂಚರಿಸುವ ಆಟೋಗಳಿಗೆ ಆರ್​ಟಿಒ ಬಿಸಿ; ಮೀನುಗಾರಿಕೆ ಯೋಜನೆಗಳಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

RTO Crackdown on Errant Autos in Shivamogga Applications Open for Subsidies Under Fisheries Schemes

ಶಿವಮೊಗ್ಗ: ನಗರದಲ್ಲಿ ಫಿಟ್‌ನೆಸ್ ಸರ್ಟಿಫಿಕೇಟ್ (ಎಫ್‌ಸಿ) ನವೀಕರಿಸದೆ ಕಾನೂನು ಬಾಹಿರವಾಗಿ ರಸ್ತೆಗಿಳಿಯುತ್ತಿರುವ ಆಟೋರಿಕ್ಷಾಗಳ ವಿರುದ್ಧ ಕಟ್ಟುನಿಟ್ಟಿನ (Shivamogga) ಕಾನೂನು ಕ್ರಮ ಜರುಗಿಸುವುದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ (ಜುಲೈ 15, 2026) ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ, ತಮ್ಮ ಆಟೋಗಳ ಎಫ್‌ಸಿ ಅವಧಿ ಮುಗಿದಿರುವ ಮಾಲೀಕರು ಅಥವಾ ಚಾಲಕರು ತಕ್ಷಣವೇ ಸಾರಿಗೆ ಕಚೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಬೇಕಿದೆ. ಶುಲ್ಕ ಪಾವತಿಸಿದ ನಂತರ ಮಲವಗೊಪ್ಪದ ಡ್ರೈವಿಂಗ್ ಟ್ರ್ಯಾಕ್‌ಗೆ ವಾಹನಗಳನ್ನು ತಂದು ಪರಿಶೀಲನೆ ನಡೆಸಿ, ಅರ್ಹತಾ ಪತ್ರವನ್ನು ನವೀಕರಿಸಿಕೊಳ್ಳಬೇಕು. ಈ ನಿಯಮ ಪಾಲಿಸದ ಆಟೋಗಳ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀನುಗಾರಿಕೆ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಅವಕಾಶ

ಶಿವಮೊಗ್ಗ ಜಿಲ್ಲೆಯ 2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಸೌಲಭ್ಯಗಳನ್ನು ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಯಡಿ 10,000 ರೂಪಾಯಿ ಮೌಲ್ಯದ ಮೀನುಗಾರಿಕೆ ಸಲಕರಣೆ ಕಿಟ್ ಅಥವಾ ಫೈಬರ್ ಗ್ಲಾಸ್ ಹರಿಗೋಲು ಖರೀದಿಸಲು ನೆರವು ನೀಡಲಾಗುತ್ತದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಯ ಲಾಭ ಪಡೆದವರಿಗೆ ಮತ್ತೊಮ್ಮೆ ಅವಕಾಶ ಇರುವುದಿಲ್ಲ. ಇದರೊಂದಿಗೆ, ಮೀನು ಮಾರಾಟ ಮತ್ತು ಸಾಗಣೆಯನ್ನು ಸುಲಭಗೊಳಿಸಲು ದ್ವಿಚಕ್ರ ವಾಹನ ಹಾಗೂ ಐಸ್ ಬಾಕ್ಸ್ ಖರೀದಿಗೆ ಸಹಾಯಧನ ನೀಡುವ ಯೋಜನೆಯೂ ಲಭ್ಯವಿದ್ದು, ಈ ಹಿಂದೆ ಈ ಸೌಲಭ್ಯ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಅರ್ಜಿ ಸಲ್ಲಿಕೆ ಮತ್ತು ಸಂಪರ್ಕದ ವಿವರಗಳು: ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಪಂಚಾಯತ್‌ನ ಅಧಿಕೃತ ವೆಬ್‌ಸೈಟ್ https://shimoga.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

  • ಅರ್ಜಿ ಸಲ್ಲಿಕೆ ಆರಂಭ: ಜುಲೈ 16, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 14, 2026

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು:

  • ಶಿವಮೊಗ್ಗ: 9986040981
  • ಭದ್ರಾವತಿ: 9743370815
  • ಶಿಕಾರಿಪುರ: 9686939028
  • ಸಾಗರ: 9538044365
  • ಸೊರಬ: 9535386449
  • ತೀರ್ಥಹಳ್ಳಿ: 8655132438

ಇದನ್ನೂ ಓದಿ: ದಾಖಲೆ ಬರೆದ ಬೆಂಗಳೂರಿನ ಪುಟಾಣಿ: 2 ವರ್ಷ ತುಂಬುವ ಮುನ್ನವೇ 4 ವಿಶ್ವ ದಾಖಲೆ ಬರೆದ ಕಿಕ್ ಸ್ಕೂಟರ್ ಸುಂದರಿ ಅಕೀರಾ!

Leave a Reply

Your email address will not be published. Required fields are marked *