T20 World Cup: ದಕ್ಷಿಣ ಆಫ್ರಿಕಾ ವಿರುದ್ದ ಸೋತ ಭಾರತ, ಸೆಮಿ ಫೈನಲ್‌ ತಲುಪೋದು ಕಷ್ಟನಾ?

Why India T20 World Cup Is On The Line

ಶ್ರೀಲಂಕಾ: 2026 ರ ಟಿ20 ವಿಶ್ವಕಪ್‌ (T20 World Cup) ಪಂದ್ಯಗಳಲ್ಲಿ ಒಂದೂ ಪಂದ್ಯವನ್ನ  ಸೋಲದೆ ಅಜೇಯವಾಗಿ ಉಳಿದಿದ್ದ ಭಾರತ ತಂಡ ಮೊದಲ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದು, ಇದು ತಂಡಕ್ಕೆ ದೊಡ್ಡ ಹೊಡೆತವನ್ನ ನೀಡಿದೆ ಎನ್ನಲಾಗುತ್ತಿದೆ.

76 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ

ಸತತ ಗೆಲವು ಸಾಧಿಸಿದ್ದ ಸೂರ್ಯ ಕುಮಾರ್‌ ಯಾದವ್‌ ತಂಡ ಈ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಯಾವುದೇ ಮ್ಯಾಜಿಕ್‌ ಮಾಡಿಲ್ಲ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 76 ರನ್‌ಗಳ ಭರ್ಜರಿ ಗೆಲುವು ಸಾಧಿಸಿದರು. ದಕ್ಷಿಣ ಆಫ್ರಿಕಾ ಆಡಲು ಇನ್ನೂ ಎರಡು ಪಂದ್ಯಗಳಿವೆ, ಆದರೆ ಈ ಫಲಿತಾಂಶವು ಸೆಮಿಫೈನಲ್ ಅರ್ಹತೆ ಪಡೆಯಲು ಅವರಿಗೆ ಬಹಳ ಸಹಾಯವಾಗುತ್ತದೆ. ಆದರೆ ಇದು ಭಾರತಕ್ಕೆ ಸ್ವಲ್ಪ ಅಡೆತಡೆ ನಿರ್ಮಾಣ ಆಗಲಿದ್ದು,  ಉಳಿದ ಎರಡು ಸೂಪರ್ 8 ಪಂದ್ಯಗಳನ್ನು ಗೆದ್ದರೂ ಸಹ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವ ಭರವಸೆ ಇಲ್ಲ ಎನ್ನಲಾಗುತ್ತಿದೆ.

ಈ ಸೋಲಿನಿಂದಾಗಿ, ಭಾರತ ತಂಡವು ಸೂಪರ್ 8 ಗ್ರೂಪ್ ಎ ನಲ್ಲಿ 4 ತಂಡಗಳ ಪಾಯಿಂಟ್ಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿ ಇದೆ. ಸೋಲಿನ ನಂತರ ಭಾರತದ ನ ರನ್ ರೇಟ್ -3.800 ಕ್ಕೆ ಇಳಿದು ಆತಂಕ ಸೃಷ್ಟಿ ಮಾಡಿದೆ.

ಭಾರತ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆಯನ್ನು ಸೋಲಿಸಿದರೆ, 4 ಅಂಕಗಳೊಂದಿಗೆ ಮುಗಿಸಬಹುದು. ದಕ್ಷಿಣ ಆಫ್ರಿಕಾ ತಮ್ಮ ಉಳಿದ ಪಂದ್ಯಗಳಲ್ಲಿ ಒಂದನ್ನು ಸೋತರೂ ಸಹ 4 ಅಂಕಗಳೊಂದಿಗೆ ಮುಗಿಸಬಹುದು. ವೆಸ್ಟ್ ಇಂಡೀಸ್ ಅಥವಾ ಜಿಂಬಾಬ್ವೆ ಕೂಡ ಫಲಿತಾಂಶಗಳನ್ನು ಅವಲಂಬಿಸಿ 4 ಅಂಕಗಳನ್ನು ತಲುಪಬಹುದು, ಇದು ಭಾರತಕ್ಕೆ ಸಮಸ್ಯೆ ಮಾಡಲಿದೆ.

ಇದನ್ನೂ ಓದಿ: ನೆದರ್‌ಲ್ಯಾಂಡ್‌ ಮಣಿಸಿದ ಭಾರತ, ಅಬ್ಬರಿಸಿದ ಶಿವಂ ದುಬೆ

Leave a Reply

Your email address will not be published. Required fields are marked *