TOP NEWS

Sunil: ಖಾಸಗಿ ಬಸ್ ಸೇವೆ ವಿರುದ್ಧ ಸ ರಿ ಗ ಮ ಪ ಸುನೀಲ್ ಗರಂ: 6 ಗಂಟೆ ವಿಳಂಬಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ!

Viral Video Outrage Sa Re Ga Ma Pa Fame singer Sunil Calls Out VRL Travels for Poor Service

ಬೆಂಗಳೂರು: ‘ಸ ರಿ ಗ ಮ ಪ’ ಖ್ಯಾತಿಯ ಜನಪ್ರಿಯ ಗಾಯಕ ಸುನೀಲ್ (Sunil) ಅವರು ಖಾಸಗಿ ಸಾರಿಗೆ ಸಂಸ್ಥೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದು, ಸಂಸ್ಥೆಯ ಸೇವಾ ವೈಫಲ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ಪ್ರಯಾಣದ ವೇಳೆಯಲ್ಲಿ ಬಸ್ಸು ಬರೋಬ್ಬರಿ 6 ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿ ಬಂದಿದ್ದರಿಂದ ಬೇಸತ್ತ ಗಾಯಕ ಸುನಿಲ್, ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಆಗಿದ್ದೇನು?

ಈ ಹಿಂದೆ ಖಾಸಗಿ ಸಂಸ್ಥೆಯ ಸೇವೆಯ ಬಗ್ಗೆ ತಮಗೆ ಉತ್ತಮ ಅಭಿಪ್ರಾಯವಿತ್ತು ಎಂದು ಹೇಳಿರುವ ಗಾಯಕ, ಆದರೆ ಈ ಬಾರಿಯ ಅನಗತ್ಯ ವಿಳಂಬ ಮತ್ತು ಬೇಜವಾಬ್ದಾರಿತನದ ವರ್ತನೆಯಿಂದ ತಮಗೆ ತೀವ್ರ ನಿರಾಶೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಪ್ರಯಾಣಿಕರನ್ನು ತಲುಪಿಸಬೇಕಾದ ಖಾಸಗಿ ಬಸ್ ಸಂಸ್ಥೆಯು ಪ್ರಯಾಣಿಕರ ಸಮಯಕ್ಕೆ ಬೆಲೆ ನೀಡದಿರುವುದು ಹಾಗೂ ಗಂಟೆಗಟ್ಟಲೆ ಕಾಯಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಗಮ್ಯಸ್ಥಾನ ತಲುಪಲಾಗದೆ ತಾವು ಅನುಭವಿಸಿದ ತೊಂದರೆಯನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.

ಅಲ್ಲದೇ, ಟಿಕೆಟ್‌ ದರವನ್ನ ಸಹ ಕಂಪನಿ ಬಹಳ ಹೆಚ್ಚು ಮಾಡಿದೆ. ಹಬ್ಬದ ಸಮಯದಲ್ಲಿ ಒಬ್ಬರಿಂದ 2 ಸಾವಿರದ ಮೇಲೆ ತೆಗೆದುಕೊಳ್ಳಲಾಗಿದೆ. ಆದರೆ ಸರಿಯಾದ ಸಮಯಕ್ಕೆ ಬಸ್‌ ಬರದ ಅನೇಕ ವೃದ್ಧರು ಸಹ ಪರದಾಡಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಸುನೀಲ್ ಅವರು ಹಂಚಿಕೊಂಡಿರುವ ಈ ವಿಡಿಯೋಗಳು ಸದ್ಯ ಸಕತ್ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ವೀಡಿಯೋ ನೋಡಿದ ಅನೇಕ ಸಾರ್ವಜನಿಕರು ಹಾಗೂ ನಿಯಮಿತವಾಗಿ ಪ್ರಯಾಣಿಸುವ ಪ್ರಯಾಣಿಕರು ಕಾಮೆಂಟ್‌ಗಳ ಮೂಲಕ ತಮ್ಮ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಖಾಸಗಿ ಬಸ್ ಸಂಸ್ಥೆಗಳು ಭಾರಿ ಪ್ರಮಾಣದಲ್ಲಿ ಟಿಕೆಟ್ ದರ ವಸೂಲಿ ಮಾಡಿದರೂ, ಸರಿಯಾದ ಸಮಯಕ್ಕೆ ಸೇವೆ ನೀಡದೆ ಪ್ರಯಾಣಿಕರನ್ನು ರಸ್ತೆಯಲ್ಲಿ ಕಾಯಿಸುವ ಇಂತಹ ವಿಳಂಬ ನೀತಿಯ ವಿರುದ್ಧ ಜನರು ಧ್ವನಿ ಎತ್ತುತ್ತಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್

ಗಾಯಕ ಸುನೀಲ್ ಅವರ ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಖಾಸಗಿ ಬಸ್ ಕಂಪನಿಗಳ ಸೇವಾ ಲೋಪಗಳ ವಿರುದ್ಧ ಪ್ರಯಾಣಿಕರಲ್ಲಿ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಪ್ರಯಾಣಿಕರ ಸಮಯಕ್ಕೆ ಸರಿಯಾದ ಮೌಲ್ಯ ನೀಡಿ, ಜವಾಬ್ದಾರಿಯುತ ಸೇವೆ ಒದಗಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಇದನ್ನೂ ಓದಿ: ಪತಿ ದರ್ಶನ್ ಒಳಿತಿಗಾಗಿ ಅಸ್ಸಾಂನ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮಿ: ಸ್ನೇಹಿತೆಯರೊಂದಿಗೆ ತೆರಳಿ ಶಕ್ತಿ ದೇವತೆಗೆ ವಿಶೇಷ ಪೂಜೆ

Leave a Reply

Your email address will not be published. Required fields are marked *