Sunil: ಖಾಸಗಿ ಬಸ್ ಸೇವೆ ವಿರುದ್ಧ ಸ ರಿ ಗ ಮ ಪ ಸುನೀಲ್ ಗರಂ: 6 ಗಂಟೆ ವಿಳಂಬಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ!
ಬೆಂಗಳೂರು: ‘ಸ ರಿ ಗ ಮ ಪ’ ಖ್ಯಾತಿಯ ಜನಪ್ರಿಯ ಗಾಯಕ ಸುನೀಲ್ (Sunil) ಅವರು ಖಾಸಗಿ ಸಾರಿಗೆ ಸಂಸ್ಥೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದು, ಸಂಸ್ಥೆಯ ಸೇವಾ ವೈಫಲ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ಪ್ರಯಾಣದ ವೇಳೆಯಲ್ಲಿ ಬಸ್ಸು ಬರೋಬ್ಬರಿ 6 ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿ ಬಂದಿದ್ದರಿಂದ ಬೇಸತ್ತ ಗಾಯಕ ಸುನಿಲ್, ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆಗಿದ್ದೇನು? ಈ ಹಿಂದೆ ಖಾಸಗಿ ಸಂಸ್ಥೆಯ ಸೇವೆಯ ಬಗ್ಗೆ ತಮಗೆ ಉತ್ತಮ…
