TOP NEWS
NEET UG Row Rocks Parliament Rahul Gandhi Meets Speaker Om Birla Insists on Urgent Debate

NEET-UG: ಸಂಸತ್ತಿನಲ್ಲಿ ನೀಟ್ ಬಿರುಗಾಳಿ: ಸ್ಪೀಕರ್ ಓಂ ಬಿರ್ಲಾ ಭೇಟಿ ಮಾಡಿ ಚರ್ಚೆಗೆ ಪಟ್ಟು ಹಿಡಿದ ರಾಹುಲ್ ಗಾಂಧಿ ನಿಯೋಗ!

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET-UG) ಪರೀಕ್ಷೆ ಅಕ್ರಮ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ವಿಷಯವೀಗ ಸಂಸತ್ತಿನಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ಸಂಸದರ ನಿಯೋಗವು ಮಂಗಳವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ಈ ಗಂಭೀರ ಬಿಕ್ಕಟ್ಟಿನ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಲವಾಗಿ ಆಗ್ರಹಿಸಿದೆ. ವಿದ್ಯಾರ್ಥಿಗಳ ಹಕ್ಕುಗಳನ್ನು ಹತ್ತಿಕ್ಕಲು ನಡೆಸಲಾದ…

Read More
NEET UG paper leak cbi digging tin to matter accused MBBS daughter goes missing

NEET: ನೀಟ್ ಹಗರಣಕ್ಕೆ ಸಿನಿಮೀಯ ತಿರುವು: ತಂದೆಯ ಬಂಧನದ ಬೆನ್ನಲ್ಲೇ ಎಂಬಿಬಿಎಸ್ ವಿದ್ಯಾರ್ಥಿನಿ ನಾಪತ್ತೆ

ರಾಜಸ್ಥಾನ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಈಗ ಯಾವುದೋ ಕ್ರೈಂ ಸಿನಿಮಾದ ಕಥೆಯಂತೆ ಭಾಸವಾಗುತ್ತಿದೆ. ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಈ ಜಾಲದ ತನಿಖೆ ಈಗ ದೌಸಾದ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೆಟ್ಟಿಲೇರಿದ್ದು, ಅಲ್ಲಿ ಓದುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಗತಿ ಬಿವಾಲ್ ಎಂಬಾಕೆ ದಿಢೀರ್ ನಾಪತ್ತೆಯಾಗಿರುವುದು ಹೊಸ ಸಂಚಲನ ಮೂಡಿಸಿದೆ. ಈಕೆಯ ತಂದೆ ಮಾಂಗಿಲಾಲ್ ಬಿವಾಲ್ ಮತ್ತು ಚಿಕ್ಕಪ್ಪ ದಿನೇಶ್ ಬಿವಾಲ್ ಅವರನ್ನು ಪತ್ರಿಕೆ ಸೋರಿಕೆ ಹಗರಣದಲ್ಲಿ…

Read More
NEET UG Paper Leak CBI Arrests BJP Leader Dinesh Biwal

NEET-UG: ನೀಟ್ ಹಗರಣ, ರಾಜಸ್ಥಾನದಲ್ಲಿ ಬಿಜೆಪಿ ನಾಯಕನ ಬಂಧನ

ಜೈಪುರ: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ನೀಟ್ (NEET-UG) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ರಾಜಸ್ಥಾನದ ಜಮ್ವಾ ರಾಮಗಢದ ಬಿಜೆಪಿ ಕಾರ್ಯಕರ್ತ ದಿನೇಶ್ ಬಿವಾಲ್ ಮತ್ತು ಆತನ ಸಹೋದರ ಮಾಂಗಿಲಾಲ್ ಬಿವಾಲ್ ಎಂಬುವವರನ್ನು ಸಿಬಿಐ ವಶಕ್ಕೆ ಪಡೆದಿದ್ದು, ಈ ಬೆಳವಣಿಗೆಯು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡವು (SOG) ಮೊದಲು ಇವರನ್ನು ವಶಕ್ಕೆ ಪಡೆದಿತ್ತು, ನಂತರ ಪ್ರಕರಣದ…

Read More
NEET UG paper leak is 100 crore business

NEET-UG: ನೀಟ್‌ ಪೇಪರ್‌ ಲಿಂಕ್‌ ಕರಾಳ ಮುಖ ಬಯಲು, 100 ಕೋಟಿ ವ್ಯವಹಾರವಂತೆ

ನವದೆಹಲಿ: ನೀಟ್ (NEET-UG 2026) ಪರೀಕ್ಷಾ ಅಕ್ರಮದ ಹಿಂದೆ ಕೆಲಸ ಮಾಡುತ್ತಿರುವ “ಪ್ರಶ್ನೆ ಪತ್ರಿಕೆ ಸೋರಿಕೆ ಆರ್ಥಿಕತೆ” (Leak Economy) ಎಷ್ಟು ಬಲಿಷ್ಠವಾಗಿದೆ ಎಂಬುದು ಈಗ ಬಯಲಾಗಿದೆ. ಸಿಬಿಐ ತನಿಖೆ ನಡೆಸುತ್ತಿರುವ ಈ ಕರಾಳ ದಂಧೆಯು ಕೇವಲ ಒಂದು ದಿನದ ಪರೀಕ್ಷೆಯ ಹೆಸರಿನಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ವ್ಯವಸ್ಥಿತ ಜಾಲದ ಕಾರ್ಯವೈಖರಿ ಈ ದಂಧೆಯು ಒಂದು ಪಿರಮಿಡ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಇದರ ತುತ್ತತುದಿಯಲ್ಲಿರುವ ಮುಖ್ಯ…

Read More
NEET UG Exam will be rescheduled with in 10 days

NEET-UG: ಏಳು ದಿನಗಳಲ್ಲಿ ನೀಟ್‌ ಮರುಪರೀಕ್ಷೆ ದಿನಾಂಕ ನಿಗದಿ

ನವದೆಹಲಿ: ದೇಶಾದ್ಯಂತ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳಲ್ಲಿ ತಲ್ಲಣ ಮೂಡಿಸಿದ್ದ ನೀಟ್ (NEET-UG 2026) ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತವಾಗಿ ರದ್ದುಗೊಳಿಸಿದ್ದು, ಮರು ಪರೀಕ್ಷೆಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ಏಳರಿಂದ ಹತ್ತು ದಿನಗಳ ಒಳಗಾಗಿ ಮರು ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಅನಾಮಧೇಯ ಕೊಟ್ಟಿದ್ದ ಆ ಸುಳಿವು ಈ…

Read More
how guess paper revealed the NEET UG scam

NEET-UG: ಗೆಸ್‌ ಪೇಪರ್‌ನಿಂದ ಬಯಲಾಯ್ತು ನೀಟ್‌ ಹಗರಣ, ಆತಂಕದಲ್ಲಿ ವಿದ್ಯಾರ್ಥಿಗಳ ಭವಿಷ್ಯ

ವೈದ್ಯಕೀಯ ಆಕಾಂಕ್ಷಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ನೀಟ್ (NEET-UG) ಪರೀಕ್ಷಾ ಅಕ್ರಮದ ತನಿಖೆ ಈಗ ಸಿಬಿಐ ಕೈಗೆ ಸೇರಿದೆ. ಮೇ 3ರಂದು ನಡೆದಿದ್ದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆ ಉಳಿಸಿಕೊಳ್ಳಲು ಮತ್ತು 22.7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಾದಿ ತನಿಖಾ ಸಂಸ್ಥೆಗಳ…

Read More
NEET UG paper leak mastermind arrested

NEET-UG: ನೀಟ್‌ ಪೇಪರ್‌ ಲೀಕ್‌ ಮಾಸ್ಟರ್‌ ಮೈಂಡ್‌‌ ಅರೆಸ್ಟ್

ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸಿರುವ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಮೊದಲ ಮಹತ್ವದ ಯಶಸ್ಸು ಕಂಡಿವೆ. ಈ ಬೃಹತ್ ಜಾಲದ ಹಿಂದಿದ್ದ ಪ್ರಮುಖ ಆರೋಪಿಯೊಬ್ಬನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು, ಹಗರಣದ ಆಳವನ್ನು ಜಾಲಾಡಲು ಇದು ದಾರಿಯಾಗಲಿದೆ. ನಾಸಿಕ್‌ನಿಂದ ಶುರುವಾಗಿ ಆರು ರಾಜ್ಯಗಳಿಗೆ ಹಬ್ಬಿದ ಜಾಲ ಪ್ರಾಥಮಿಕ ತನಿಖೆಯ ಪ್ರಕಾರ, ಈ ಪೇಪರ್ ಲೀಕ್ ಸಂಚು ಮೊದಲು ರೂಪಿತವಾಗಿದ್ದು ಮಹಾರಾಷ್ಟ್ರದ ನಾಸಿಕ್‌ನಲ್ಲಿ. ಅಲ್ಲಿಂದ ಪತ್ರಿಕೆಯ ಭೌತಿಕ ಪ್ರತಿಯನ್ನು ಹರಿಯಾಣಕ್ಕೆ…

Read More