Big News: ವಿದ್ಯಾವಿಕಾಸ ಯೋಜನೆಯಡಿ ಕಳಪೆ ಪಾದರಕ್ಷೆಗಳ ಪೂರೈಕೆ: ಉಪ ಲೋಕಾಯುಕ್ತರಿಂದ ಸ್ವಯಂಪ್ರೇರಿತ ತನಿಖೆ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ವಿತರಿಸಲಾಗುತ್ತಿರುವ ಶೂ ಹಾಗೂ ಸಾಕ್ಸ್‌ಗಳ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ (Big News) ಆಕ್ರೋಶ ವ್ಯಕ್ತವಾಗಿತ್ತು. ಮಕ್ಕಳ ಕಾಲ್ನಡಿಗೆ ಹಾಗೂ ಅನುಕೂಲಕ್ಕಾಗಿ ಅತ್ಯಂತ ಮುತುವರ್ಜಿಯಿಂದ ಜಾರಿಗೆ ತಂದ ಈ ಯೋಜನೆಯಡಿ ಕಳಪೆ ಮಟ್ಟದ ಪಾದರಕ್ಷೆಗಳನ್ನು ಪೂರೈಕೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ವಿದ್ಯಮಾನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಇದರ ಹಿಂದೆ ನಡೆದಿರಬಹುದಾದ ಅಕ್ರಮಗಳು ಹಾಗೂ…
