Ketan Agarwal: ನನ್ನ ಇಡೀ ಜಗತ್ತೇ ಮುಳುಗಿತು, ಕೇತನ್ ತಾಯಿಯಿಂದ ಪ್ರಧಾನಿ ಮೋದಿಗೆ ಪತ್ರ!
ಮಹಾರಾಷ್ಟ್ರ: ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಾಯಿ ರಾಖಿ ಅಗರ್ವಾಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ತಮ್ಮ ಮಗನ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಪ್ರಕರಣದಲ್ಲಿ ಶೀಘ್ರ ನ್ಯಾಯ ಸಿಗುವಂತಾಗಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ. ತಮಗೆ ಯಾವುದೇ ಸಹಾನುಭೂತಿ ಅಥವಾ ವಿಶೇಷ ಸವಲತ್ತು ಬೇಡ, ಕೇವಲ ನ್ಯಾಯ ಮಾತ್ರ ಬೇಕು ಎಂದಿರುವ ಅವರು, ಸ್ವಂತ ಮಗನ ನ್ಯಾಯಕ್ಕಾಗಿ ದೇಶದ…
