Gold Smuggling: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭರ್ಜರಿ ಕಾರ್ಯಾಚರಣೆ: ಲಗೇಜ್ ಟ್ರ್ಯಾಲಿ ಬಳಸಿ ₹1.80 ಕೋಟಿ ಚಿನ್ನ ಸಾಗಿಸುತ್ತಿದ್ದ ಜಾಲ ಬಯಲು!
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಅತ್ಯಂತ ಚಾಣಾಕ್ಷತನದ ಕಾರ್ಯಾಚರಣೆ ನಡೆಸಿ, ಭಾರಿ ಪ್ರಮಾಣದ ಚಿನ್ನದ ಸ್ಮಗ್ಲಿಂಗ್ ಜಾಲವನ್ನು ತಡೆಹಿಡಿಯುವಲ್ಲಿ (Gold Smuggling) ಯಶಸ್ವಿಯಾಗಿದ್ದಾರೆ. ವಿದೇಶದಿಂದ ತಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ವಿಮಾನ ನಿಲ್ದಾಣದ ಲಗೇಜ್ ಟ್ರ್ಯಾಲಿಗಳಿಗೆ ರಹಸ್ಯವಾಗಿ ಅಂಟಿಸಿ, ಅಮಾಯಕ ಪ್ರಯಾಣಿಕರನ್ನೇ ದಾಳವಾಗಿ ಬಳಸಿಕೊಂಡು ಕಸ್ಟಮ್ಸ್ ಕಣ್ಣು ತಪ್ಪಿಸಲು ಯತ್ನಿಸುತ್ತಿದ್ದ ಆತಂಕಕಾರಿ ಅಕ್ರಮ ಸಾಗಾಟ ಪ್ರಕರಣವನ್ನು ಅಧಿಕಾರಿಗಳು ಇದೀಗ ಬಹಿರಂಗಪಡಿಸಿದ್ದಾರೆ. 1.80 ಕೋಟಿ ರೂಪಾಯಿ ಮೌಲ್ಯದ…
