Sandalwood: ಬಣ್ಣದ ಲೋಕದಲ್ಲಿ ಮತ್ತೆ ಅಣ್ಣಾವ್ರ ಕ್ರೇಜ್: ಚಿತ್ರಮಂದಿರಗಳಿಗೆ ಬರಲಿದೆ ‘ಜಗಮೆಚ್ಚಿದ ಮಗ’!
ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ವರನಟ ಡಾ. ರಾಜ್‌ಕುಮಾರ್ ಅವರ ಅಭಿನಯದ ಸಾರ್ವಕಾಲಿಕ ಯಶಸ್ವಿ ಚಲನಚಿತ್ರ ‘ಜಗಮೆಚ್ಚಿದ ಮಗ’ ಇದೀಗ ನೂತನ ರಂಗಿನಲ್ಲಿ ಚಿತ್ರಪ್ರೇಮಿಗಳನ್ನು ರಂಜಿಸಲು ಸಜ್ಜಾಗಿದೆ. ದಶಕಗಳ (Sandalwood) ಹಿಂದೆ ಕಪ್ಪು-ಬಿಳುಪಿನಲ್ಲಿ ಮೂಡಿಬಂದು ಇಡೀ ಕರುನಾಡನ್ನು ಮಂತ್ರಮುಗ್ಧಗೊಳಿಸಿದ್ದ ಈ ಕ್ಲಾಸಿಕ್ ಸಿನಿಮಾ, ಆಧುನಿಕ ಬಣ್ಣದ ಸ್ಪರ್ಶದೊಂದಿಗೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಬೆಂಬಲದೊಡನೆ ಶೀಘ್ರದಲ್ಲೇ ಮರು ಬಿಡುಗಡೆಯಾಗಲಿದೆ. ಚಿತ್ರದ ಕಲರ್ ವರ್ಷನ್ ಬಿಡುಗಡೆ ಬರುವ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ಸೂಪರ್ ಹಿಟ್ ಚಿತ್ರದ ಕಲರ್…
