QR code mandatory for vaccine and cancer medicines

Big News: ಔಷಧ ವಲಯಕ್ಕೆ ಹೈಟೆಕ್ ಕಾವಲು: ವ್ಯಾಕ್ಸಿನ್, ಕ್ಯಾನ್ಸರ್ ಔಷಧಿಗಳಿಗೂ ಕಡ್ಡಾಯವಾಗಲಿದೆ ಕ್ಯುಆರ್ ಕೋಡ್

ನವದೆಹಲಿ: ದೇಶದ ಔಷಧ ಮಾರುಕಟ್ಟೆಯಲ್ಲಿ ನಕಲಿ ಮಾತ್ರೆ ಹಾಗೂ (Big News) ಇಂಜೆಕ್ಷನ್‌ಗಳ ಹಾವಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ (Central Government) ಅತ್ಯಂತ ದೃಢವಾದ ಹೆಜ್ಜೆಯಿಟ್ಟಿದೆ. ಭಾರತದ ಫಾರ್ಮಾಸ್ಯುಟಿಕಲ್ಸ್ ಸರಬರಾಜು ಜಾಲದ ಸುರಕ್ಷತೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ವ್ಯಾಕ್ಸಿನ್‌ಗಳು (ಲಸಿಕೆಗಳು), ಆಂಟಿಮೈಕ್ರೋಬಿಯಲ್ಸ್ (ರೋಗಾಣು ನಿರೋಧಕಗಳು), ಕ್ಯಾನ್ಸರ್ ನಿರೋಧಕ ಔಷಧಿಗಳು ಹಾಗೂ ಮಾದಕ ಮತ್ತು ಮನೋರೋಗಕ್ಕೆ ಸಂಬಂಧಿಸಿದ (NDPS) ಔಷಧಿಗಳ ಪ್ಯಾಕಿಂಗ್ ಮೇಲೆಯೂ ಕ್ಯುಆರ್ ಕೋಡ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ…

Read More
central government defends fuel price hike 5 rupees with in 8 days

Fuel Price: ಜಾಗತಿಕ ತೈಲ ಬಿಕ್ಕಟ್ಟಿನ ನಡುವೆಯೂ ದೇಶಿ ಗ್ರಾಹಕರಿಗೆ ನಿರಾಳತೆ ನೀಡಿದ ಭಾರತ: ದರ ಏರಿಕೆಗೆ ಜಾಗತಿಕ ವಿದ್ಯಮಾನಗಳೇ ಕಾರಣ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ (Fuel Price) ಗಗನಕ್ಕೇರುತ್ತಿದ್ದರೂ ಭಾರತ ಸರ್ಕಾರ ತನ್ನ ನಾಗರಿಕರನ್ನು ಜಾಗತಿಕ ಇಂಧನ ಬಿಕ್ಕಟ್ಟಿನ ನೇರ ಹೊಡೆತದಿಂದ ಯಶಸ್ವಿಯಾಗಿ ಪಾರುಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದರೂ, ದೇಶದಲ್ಲಿ ಸತತ 79 ದಿನಗಳ ಕಾಲ ಇಂಧನ ದರಗಳನ್ನು ಹೆಚ್ಚಿಸದೆ ಸ್ಥಿರವಾಗಿ ಕಾಯ್ದುಕೊಳ್ಳಲಾಗಿತ್ತು. ಪ್ರಸ್ತುತ ಮೇ ತಿಂಗಳಿನಲ್ಲಿ 15, 19 ಮತ್ತು 23 ರಂದು ಮೂರು ಹಂತಗಳಲ್ಲಿ ಬೆಲೆ ಪರಿಷ್ಕರಣೆ ಮಾಡಲಾಗಿದ್ದು, ಒಟ್ಟಾರೆಯಾಗಿ ಪೆಟ್ರೋಲ್…

Read More
Narendra Modi central cabinet approves historical decision

Narendra Modi: ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಸಿದ ಕೇಂದ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರೈತರು ಮತ್ತು ಇಂಧನ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಹಲವು ಮಹತ್ವದ ಯೋಜನೆಗಳಿಗೆ ಅಸ್ತು ಎಂದಿದೆ. ಕೃಷಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP) ಏರಿಸುವ ಮೂಲಕ ಕೇಂದ್ರ ಸರ್ಕಾರವು ರೈತ ಸಮುದಾಯಕ್ಕೆ ಬಂಪರ್ ಕೊಡುಗೆ ನೀಡಿದೆ. ರೈತರಿಗೆ ಬೆಂಬಲ ಬೆಲೆಯ ಬಲ ಸರ್ಕಾರವು ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ…

Read More
Karnataka honoured for top performance in DigiLocker integration

Digi Locker: ಡಿಜಿಲಾಕರ್ ಯಶಸ್ವಿ ಅನುಷ್ಠಾನ, ಕರ್ನಾಟಕ್ಕೆ ಕೇಂದ್ರ ಗೌರವ

ನವದೆಹಲಿ: ಡಿಜಿಟಲ್ ಆಡಳಿತಕ್ಕೆ ವೇಗ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ‘ಡಿಜಿಲಾಕರ್’ (Digi Locker) ವ್ಯವಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕರ್ನಾಟಕ ಸೇರಿದಂತೆ ದೇಶದ ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರವು ವಿಶೇಷ ಗೌರವ ನೀಡಿದೆ. ನವದೆಹಲಿಯಲ್ಲಿ ಮೇ 11ರಂದು ನಡೆದ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ಈ ಸಾಧಕ ರಾಜ್ಯಗಳನ್ನು ಸನ್ಮಾನಿಸಲಾಯಿತು. ಡಿಜಿಟಲ್ ಇಂಡಿಯಾ ಅಭಿಯಾನದಡಿ ಜನಸಾಮಾನ್ಯರ ಕೆಲಸಗಳನ್ನು ಸುಲಭಗೊಳಿಸಲು ಶ್ರಮಿಸಿದ ಕರ್ನಾಟಕ, ಗುಜರಾತ್, ಕೇರಳ, ನಾಗಾಲ್ಯಾಂಡ್ ಮತ್ತು ರಾಜಸ್ಥಾನ ರಾಜ್ಯಗಳ ಅಧಿಕಾರಿಗಳಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ…

Read More
central government to end narega and starting new one

Narega: ನರೇಗಾ ಇನ್ನು ಇತಿಹಾಸ: ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ‘ವಿಬಿ ಜಿರಾಮ್‌ಜಿ’ ಕಾಯ್ದೆ!

ನವದೆಹಲಿ: ಗ್ರಾಮೀಣ ಭಾರತದ ಬದುಕಿಗೆ ಆಧಾರವಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) (Narega) ಯೋಜನೆಗೆ ಕೇಂದ್ರ ಸರ್ಕಾರ ಮಂಗಳ ಹಾಡಿದೆ. ಇದರ ಬದಲಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ‘ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್’ (VB Jiram-G) ಎಂಬ ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದ್ದು, ಜುಲೈ 1ರಿಂದ ಇದು ಜಾರಿಗೆ ಬರಲಿದೆ. ಜೂನ್ 30ಕ್ಕೆ ಹಳೆಯ ಯೋಜನೆಗೆ ತೆರೆ ದಶಕಗಳಿಂದ ಜಾರಿಯಲ್ಲಿದ್ದ ನರೇಗಾ (MGNREGA-2005) ಕಾಯ್ದೆಯು ಜೂನ್ 30ರಂದು ಅಧಿಕೃತವಾಗಿ…

Read More
good news DA hike for central government employs

Good News: ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳದ ಬೋನಸ್: ಜುಲೈನಲ್ಲಿ ಶೇ. 63ಕ್ಕೆ ಏರುವ ನಿರೀಕ್ಷೆ!

ನವದೆಹಲಿ: ಬೆಲೆ ಏರಿಕೆಯ ನಡುವೆ ಜೀವನ ನಡೆಸುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ (Good News) ಮತ್ತೊಂದು ಆರ್ಥಿಕ ನೆರವು ಸಿಗುವ ಕಾಲ (DA) ಹತ್ತಿರವಾಗುತ್ತಿದೆ. 2026ರ ಜುಲೈ ತಿಂಗಳ ತುಟ್ಟಿಭತ್ಯೆ (DA) ಪರಿಷ್ಕರಣೆಯಲ್ಲಿ ಶೇ. 2 ರಿಂದ 3 ರಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಇದರಿಂದ ಒಟ್ಟು ಡಿಎ ಪ್ರಮಾಣ ಶೇ. 63ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ವೇತನದ ಮೇಲೆ ಆಗುವ ಪರಿಣಾಮ: ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ (AICPI) ಅಂಕಿಅಂಶಗಳ ಆಧಾರದ ಮೇಲೆ ಈ ಲೆಕ್ಕಾಚಾರ…

Read More
good news central government lowered 42 tablets price

Good News: ಬಡವರ ಜೇಬಿಗೆ ಹೊರೆಯಿಲ್ಲ: ಬಿಪಿ, ಸಕ್ಕರೆ ಕಾಯಿಲೆ ಸೇರಿ 42 ಔಷಧಗಳ ದರ ಇಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಆರೋಗ್ಯ ವೆಚ್ಚದ ಭೀತಿಯಲ್ಲಿದ್ದ ರೋಗಿಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಮಾಧಾನ ನೀಡಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (NPPA) ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಬಳಸುವ ಒಟ್ಟು 42 ಅಗತ್ಯ ಔಷಧಗಳ (Good News) ಬೆಲೆಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಔಷಧ ಬೆಲೆ ನಿಯಂತ್ರಣ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ. ಯಾವೆಲ್ಲಾ ಮಾತ್ರೆಗಳ ಬೆಲೆ ಕಡಿಮೆ? ದಿನನಿತ್ಯ ಬಳಸುವ ಪ್ರಮುಖ ಕಾಂಬಿನೇಷನ್ ಔಷಧಗಳ ಬೆಲೆಯಲ್ಲಿ…

Read More