AIR INDIA: ಭಿನ್ನ ಸ್ಥಳಗಳಲ್ಲಿ ವಿಮಾನ ತಾಂತ್ರಿಕ ದೋಷ: ಪ್ರಯಾಣಿಕರು ಸೇಫ್
ನವದೆಹಲಿ/ಬೆಂಗಳೂರು: ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತಾಂತ್ರಿಕ ದೋಷದ (Air India) ಕಾರಣದಿಂದಾಗಿ ಎರಡು ಪ್ರತ್ಯೇಕ ಆತಂಕಕಾರಿ ಘಟನೆಗಳು ಸಂಭವಿಸಿದ್ದು, ಪೈಲಟ್‌ಗಳು ಮತ್ತು ಸಿಬ್ಬಂದಿಯ ಸಮಯಪ್ರಜ್ಞೆಯಿಂದ ನೂರಾರು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಎಂಟು ಗಂಟೆಗಳ ಕಾಲ ಗಗನದಲ್ಲೇ ಹಾರಾಡಿ ದೆಹಲಿಗೆ ಮರಳಿದ ಅಂತರರಾಷ್ಟ್ರೀಯ ವಿಮಾನ! ರಾಜಧಾನಿ ದೆಹಲಿಯಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ಸಂಸ್ಥೆಯ ‘AI173’ ವಿಮಾನದಲ್ಲಿ ಮಾರ್ಗಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮೇ 27 ರಂದು ಟೇಕ್‌ಆಫ್ ಆಗಿದ್ದ…
