TOP NEWS
Accidental Exposure While Urinating in Public Isnt Harassment Rules Karnataka High Court

High Court: ಸಾರ್ವಜನಿಕ ಶೌಚಾಲಯಗಳ ಕೊರತೆ ಹಾಗೂ ಆಕಸ್ಮಿಕ ಸನ್ನಿವೇಶ: ಕ್ರಿಮಿನಲ್ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶ!

ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಶೌಚಾಲಯಗಳ ಕೊರತೆಯಿಂದಾಗಿ ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಆಕಸ್ಮಿಕವಾಗಿ ದೇಹದ ಖಾಸಗಿ ಅಂಗಗಳು ಮಹಿಳೆಯ ಕಣ್ಣಿಗೆ ಬಿದ್ದರೆ, ಅದನ್ನು ‘ಲೈಂಗಿಕ ಕಿರುಕುಳ’ ಎಂದು ವರ್ಗೀಕರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ (High Court) ಮಹತ್ವದ ತೀರ್ಪು ನೀಡಿದೆ. ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಚಿಕ್ಕಮಗಳೂರು ಮೂಲದ ಯುವಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ…

Read Full News
3 Day Bank Strike Announced from Sept 28 RBI Approves Sunday Working Day for Public Sector Banks

Bank Strike: ಸೆಪ್ಟೆಂಬರ್ 28ರಿಂದ ಸತತ 3 ದಿನ ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಭಾನುವಾರ ಕೆಲಸ ಮಾಡಲು ಆರ್‌ಬಿಐ ಗ್ರೀನ್ ಸಿಗ್ನಲ್!

ನವದೆಹಲಿ: ಸೆಪ್ಟೆಂಬರ್ 28ರಿಂದ ಆರಂಭವಾಗಲಿರುವ ಸತತ ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೂ (Bank Strike) ಮುನ್ನ, ತಮ್ಮ ತುರ್ತು ಹಣಕಾಸು ವಹಿವಾಟುಗಳನ್ನು ಪೂರ್ಣಗೊಳಿಸಲು ಬ್ಯಾಂಕ್ ಗ್ರಾಹಕರಿಗೆ ಒಂದು ಹೆಚ್ಚುವರಿ ದಿನದ ಸಿಹಿ ಸುದ್ದಿ ಲಭಿಸಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ೨೬ರಂದು ನಾಲ್ಕನೇ ಶನಿವಾರ ಹಾಗೂ ಸೆಪ್ಟೆಂಬರ್ ೨೭ರಂದು ಭಾನುವಾರ ಇರುವುದರಿಂದ ಬ್ಯಾಂಕುಗಳಿಗೆ ಸಾಪ್ತಾಹಿಕ ರಜೆ ಇರುತ್ತದೆ. ಇದರ ಬೆನ್ನಲ್ಲೇ ಮೂರು ದಿನಗಳ ಮುಷ್ಕರವೂ ಸೇರಿಕೊಂಡರೆ ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡು ಸಾರ್ವಜನಿಕರಿಗೆ…

Read Full News
Delay in Pensions Sparks Protest JDS Youth President Nikhil Kumaraswamy Joins Differently-Abled Rally

Nikhil Kumaraswamy: ರಾಮನಗರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ವಿಕಲಚೇತನರ ಅನಿರ್ದಿಷ್ಟಾವಧಿ ಧರಣಿ: ಪ್ರತಿಭಟನಾ ಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ!

ರಾಮನಗರ: ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಿಕಲಚೇತನರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಇಂದು ಭಾರೀ ಬೆಂಬಲ ವ್ಯಕ್ತವಾಯಿತು. ರಾಜ್ಯ ಯುವ ಜನತಾದಳದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಇಂದು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಅಹವಾಲು ಆಲಿಸಿ ಬೆಂಬಲ ಸೂಚಿಸಿದರು. ವಿಕಲಚೇತನರ ಬೇಡಿಕೆ ಏನು? ಕಳೆದ 6-7 ತಿಂಗಳಿನಿಂದ ವೃದ್ಧರು, ವಿಧವೆಯರು ಮತ್ತು ವಿಶೇಷ ಚೇತನರಿಗೆ ಮಾಸಾಶನ (ಪಿಂಚಣಿ) ಬಂದಿಲ್ಲ. ಮಾಸಾಶನವನ್ನು 1000 ದಿಂದ 2000ಕ್ಕೆ ಏರಿಸಬೇಕು,…

Read Full News
Bengaluru Entrepreneur Bans Male Applicants from UP Bihar MP and Rajasthan Faces Social Media Backlash

Bengaluru: ಉತ್ತರ ಭಾರತದ 4 ರಾಜ್ಯಗಳ ಪುರುಷರಿಗೆ ನೋ ಎಂಟ್ರಿ: ‘ಎ1 ಸ್ಪೋರ್ಟ್ಸ್’ ಸಂಸ್ಥಾಪಕ ಕಾರ್ತಿಕ್ ಹೊಸ ವಿವಾದ!

ಬೆಂಗಳೂರು: ಇಲ್ಲಿನ ಉದ್ಯಮಿಯೊಬ್ಬರು ತಮಗಿರುವ ‘ನನ್ನ ಕಂಪನಿ, ನನ್ನದೇ ನಿಯಮ’ ಎಂಬ (Bengaluru) ನಿಲುವಿನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಎ1 ಸ್ಪೋರ್ಟ್ಸ್ ವರ್ಲ್ಡ್ ಸಂಸ್ಥೆಯ ಸಂಸ್ಥಾಪಕರಾದ ಕಾರ್ತಿಕ್ ಎಸ್.ಜಿ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳ ಪುರುಷ ಅಭ್ಯರ್ಥಿಗಳನ್ನು ತಮ್ಮ ಸಂಸ್ಥೆಗೆ ಉದ್ಯೋಗಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪ್ರಕಟಿಸುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದ ಪೋಸ್ಟ್ ದೀರ್ಘ ಚರ್ಚೆ ಮತ್ತು ಜಗಳದ ನಂತರ…

Read Full News

Anant Nag: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವೈಭವ: ಹಿರಿಯ ನಟ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ!

ಏಕತಾ ನಗರ (ಗುಜರಾತ್): ಭಾರತೀಯ ಸಿನಿಮಾ ರಂಗದ ಮಹೋನ್ನತ ಗೌರವ ಎಂದೇ ಪರಿಗಣಿಸಲಾಗುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿತರಣಾ ಸಮಾರಂಭವು ಈ ಬಾರಿ ಗುಜರಾತ್‌ನ ಏಕತಾ ನಗರದಲ್ಲಿ (ಹಳೆಯ ಕೇವಡಿಯಾ) ವೈಭವೋಪೇತವಾಗಿ ನೆರವೇರುತ್ತಿದೆ. ಕಲೆ ಮತ್ತು ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೆ ಪಾತ್ರರಾದ ದಿಗ್ಗಜರನ್ನು ಈ ವೇದಿಕೆಯಲ್ಲಿ ಗೌರವಿಸಲಾಗುತ್ತಿದೆ. ಕನ್ನಡಿಗರ ಹೆಮ್ಮೆಯ ಹಿರಿಯ ನಟ ಅನಂತ್ ನಾಗ್ (Anant Nag) ಅವರಿಗೆ ಚಲನಚಿತ್ರ ರಂಗದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ’ ಗೌರವ ಸಮರ್ಪಣೆಯಾಗುತ್ತಿದ್ದರೆ, ನಟನೆಯ ವಿಭಾಗದಲ್ಲಿ…

Read Full News
Raj Bhavan Steps In Governor Issues Strong Warning to Karnataka Govt Over Vande Mataram Order

Vande Mataram: ‘ವಂದೇ ಮಾತರಂ’ ಆದೇಶಕ್ಕೆ ರಾಜ್ಯಪಾಲರ ಕಠಿಣ ಆಕ್ಷೇಪ: ನಿರ್ಧಾರ ಮರುಪರಿಶೀಲಿಸುವಂತೆ ಸರ್ಕಾರಕ್ಕೆ 4 ಪುಟಗಳ ಪತ್ರ!

ಬೆಂಗಳೂರು: ರಾಜ್ಯ ಸರ್ಕಾರದ ಅಧಿಕೃತ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ನ (Vande Mataram) ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು, ತಕ್ಷಣವೇ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯಪಾಲರ ಪತ್ರದಲ್ಲಿ ಏನಿದೆ? ರಾಜ್ಯಪಾಲರು ತಮ್ಮ ಪತ್ರದಲ್ಲಿ ಸರ್ಕಾರದ…

Read Full News
Empty Treasury Freebie Promises BJP Chief BY Vijayendra Slams CM dk shivakumar

BY Vijayendra: ಖಜಾನೆ ಖಾಲಿ, ಸಿಎಂ ಮಾಡ್ತಿರೋದು ಬರೀ ಪುಗಸಟ್ಟೆ ಘೋಷಣೆ: ಕಾಂಗ್ರೆಸ್ ಸರ್ಕಾರ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿಗಳು ಕೇವಲ ಸಾಲು ಸಾಲು ಯೋಜನೆಗಳನ್ನು ಪುಗಸಟ್ಟೆ ಘೋಷಣೆ ಮಾಡುತ್ತಿದ್ದಾರೆ ಹೊರತು ಅವುಗಳಿಗೆ ಹಣ ಮೀಸಲಿಡಲು ಸರ್ಕಾರದ ಖಜಾನೆಯಲ್ಲಿ ಹಣವೇ ಇಲ್ಲ ಎಂದು ಕಟುವಾಗಿ ವೀಮರ್ಶಿಸಿದ್ದಾರೆ. ಯೋಜನೆಗಳಿಗೆ ಹಣವನ್ನ ಎಲ್ಲಿಂದ ತರುತ್ತಾರೆ? ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗದ ಪ್ರವಾಸದ ವೇಳೆ ಸಿಎಂ ಬರೋಬ್ಬರಿ 32 ರಿಂದ 35 ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಿಸಿದ್ದಾರೆ….

Read Full News