DK Shivakumar: ದಶಕಗಳ ಠಿಕಾಣಿಗೆ ಬ್ರೇಕ್: ಗಣಿ ಇಲಾಖೆಯ ಶೇ. 80ರಷ್ಟು ಸಿಬ್ಬಂದಿಗೆ ಎತ್ತಂಗಡಿ ಭಾಗ್ಯ, ಅಧಿಕಾರಿಗಳು ಶಾಕ್!
ಬೆಂಗಳೂರು: ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ದೀರ್ಘಕಾಲದಿಂದ ಮನೆಮಾಡಿದ್ದ ಏಕಸ್ವಾಮ್ಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಭಾರಿ ಆಡಳಿತಾತ್ಮಕ ಚಾಟಿ ಬೀಸಿದ್ದಾರೆ. ಒಂದೇ ಸ್ಥಳದಲ್ಲಿ ವರ್ಷಗಟ್ಟಲೆ ಠಿಕಾಣಿ ಹೂಡಿದ್ದ ಇಲಾಖೆಯ ಶೇಕಡಾ 80 ರಷ್ಟು ಸಿಬ್ಬಂದಿಯನ್ನು ಎತ್ತಂಗಡಿ ಮಾಡುವ ಮೂಲಕ ಸರ್ಕಾರ ಬೃಹತ್ ಸರ್ಜರಿ ನಡೆಸಿದೆ. ಇಲಾಖೆಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಾದರಿಯಲ್ಲಿ ಒಟ್ಟು 160 ಅಧಿಕಾರಿಗಳನ್ನು ಏಕಕಾಲಕ್ಕೆ ವರ್ಗಾವಣೆ ಮಾಡಲಾಗಿದ್ದು, ಇದರಲ್ಲಿ 131 ಭೂವಿಜ್ಞಾನಿಗಳು, 23 ಹಿರಿಯ ಭೂವಿಜ್ಞಾನಿಗಳು ಹಾಗೂ 6 ಉಪನಿರ್ದೇಶಕರು…
