TOP NEWS
Show Me the FIR First CT Ravi Refuses Police Notice Cops Paste It on Wall Amid Huge Protests

CT Ravi: “ಮೊದಲು ಎಫ್‌ಐಆರ್ ಕೊಡಿ, ಆಮೇಲೆ ನೋಟಿಸ್!” – ಪೊಲೀಸರ ವಿರುದ್ಧ ಗುಡುಗಿದ ಬಿಜೆಪಿ ನಾಯಕ ಸಿ.ಟಿ.ರವಿ!

ಚಿಕ್ಕಮಗಳೂರು: ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ (CT Ravi) ಅವರ ನಿವಾಸದ ಬಳಿ ಹೈಡ್ರಾಮಾ ನಡೆದಿದ್ದು, ಪೊಲೀಸರು ನೀಡಲು ಬಂದಿದ್ದ ನೋಟಿಸ್ ಸ್ವೀಕರಿಸಲು ಅವರು ನಿರಾಕರಿಸಿದ್ದಾರೆ. ಕೊನೆಗೆ ಪೊಲೀಸರು ನೋಟಿಸ್ ಪ್ರತಿಯನ್ನು ಅವರ ಮನೆಯ ಗೋಡೆಗೆ ಅಂಟಿಸಿ ಜಾಗ ಖಾಲಿ ಮಾಡಿದ್ದು, ಸಿ.ಟಿ.ರವಿ ಬೆಂಬಲಿಗರು ಅದನ್ನು ತಕ್ಷಣವೇ ಕಿತ್ತೆಸೆದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಲು ಪೊಲೀಸರು ಚಿಕ್ಕಮಗಳೂರಿನಲ್ಲಿರುವ ಸಿ.ಟಿ.ರವಿ ಅವರ…

Read More
Say No to PoP and Imported Idols PM Narendra Modi Urges Citizens

Narendra Modi: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಕರೆ: ಮನೆ ಮನೆಗಳಲ್ಲೂ ಮಣ್ಣಿನ ಗಣಪನನ್ನೇ ಕೂರಿಸಿ, ಪಿಒಪಿ ಮೂರ್ತಿಗಳಿಗೆ ಹೇಳಿ ಬೈ-ಬೈ!

ನವದೆಹಲಿ: ಮುಂಬರುವ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, (Narendra Modi) ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಸ್ಥಳೀಯ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ (Eco-Friendly Ganesha) ಪ್ರತಿಷ್ಠಾಪಿಸಿ ಪೂಜಿಸುವಂತೆ ಮನವಿ ಮಾಡಿದ್ದಾರೆ. ಪಿಒಪಿ ಹಾಗೂ ವಿದೇಶಿ ಮೂರ್ತಿಗಳಿಗೆ ಬ್ರೇಕ್ ಹಾಕಿ ಭಾನುವಾರ ಪ್ರಸಾರವಾದ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ (Mann Ki Baat) 136ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ, ಪ್ಲಾಸ್ಟರ್ ಆಫ್…

Read More
Know more about new education minister pralhad joshi

Pralhad Joshi: ಹೊಸ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರ ವಿದ್ಯಾಭ್ಯಾಸ ಹಾಗೂ ಶೈಕ್ಷಣಿಕ ಪಯಣ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆಗಾರಿಕೆ ವಹಿಸಿಕೊಳ್ಳುವ ಮುನ್ನ, ಪ್ರಹ್ಲಾದ್ ಜೋಶಿ (Pralhad Joshi) ಅವರು ದೇಶದ ನವೀಕರಿಸಬಹುದಾದ ಇಂಧನ ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಸದೀಯ ವ್ಯವಹಾರಗಳಂತಹ ಪ್ರಮುಖ ಇಲಾಖೆಗಳನ್ನು ನಿಭಾಯಿಸಿ ಸಫಲ ಆಡಳಿತಗಾರ ಎನಿಸಿಕೊಂಡಿರುವ ಹುಬ್ಬಳ್ಳಿಯ ಈ ಬಿ.ಎ. ಪದವೀಧರ, ಈಗ ಕೋಟಿಗಟ್ಟಲೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ದೇಶದ ಶಿಕ್ಷಣ ಸಚಿವಾಲಯದ ಚುಕ್ಕಾಣಿ ಹಿಡಿದಿದ್ದಾರೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ, ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಸವಾಲುಗಳಿರುವ ಸಮಯದಲ್ಲೇ ಜೋಶಿ…

Read More
Bollywood director rakesh roshan fitness secrets revealed

Fitness: 76ರ ಹರೆಯದಲ್ಲೂ ಶಿಸ್ತಿನ ಫಿಟ್‌ನೆಸ್: ರಾಕೇಶ್ ರೋಷನ್ ಆರೋಗ್ಯದ ಸೀಕ್ರೆಟ್ ಇಲ್ಲಿದೆ!

ಮುಂಬೈ: ಬಾಲಿವುಡ್‌ನ ಹಿರಿಯ ನಿರ್ದೇಶಕ ಮತ್ತು ನಟ ರಾಕೇಶ್ ರೋಷನ್ ಅವರಿಗೆ ಈಗ 76 ವರ್ಷ ವಯಸ್ಸು. ಆದರೂ ಅವರ ಫಿಟ್‌ನೆಸ್ ಹಾಗೂ ದೇಹದಾರ್ಢ್ಯ(Fitness) ಯುವಕರಿಗೂ ಸವಾಲು ಹಾಕುವಂತಿದೆ. ಈ ಇಳಿವಯಸ್ಸಿನಲ್ಲೂ ತಾವು ಇಷ್ಟೊಂದು ಸಕ್ರಿಯವಾಗಿ ಮತ್ತು ಆರೋಗ್ಯವಾಗಿರಲು ಕಾರಣವೇನು ಎಂಬುದನ್ನು ಅವರು ಇತ್ತೀಚೆಗೆ ಮನಬಿಚ್ಚಿ ಹಂಚಿಕೊಂಡಿದ್ದಾರೆ. ದಶಕಗಳಿಂದ ತಾವು ಪಾಲಿಸಿಕೊಂಡು ಬಂದಿರುವ ಕಟ್ಟುನಿಟ್ಟಿನ ಜೀವನಶೈಲಿಯೇ ತಮ್ಮ ಈ ಆಕ್ಟೀವ್ ಜೀವನಕ್ಕೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ. ಶಿಸ್ತು ಕಾಯ್ದುಕೊಳ್ಳುವುದು ಅತ್ಯಗತ್ಯತಮ್ಮ ಮಗಳು ಸುನೈನಾ ರೋಷನ್…

Read More
Crime Jail Smuggling Bid Foiled Accused Trapped by Alert Cops in Mangaluru

Crime: ಜೈಲು ಹಕ್ಕಿಗೆ ಸಿಮ್ ಸಪ್ಲೈ ಮಾಡಲು ಸ್ಕೆಚ್: ಪೊಲೀಸರ ಅಲರ್ಟ್‌ ಕಾರ್ಯಾಚರಣೆಗೆ ಪ್ಲಾನ್ ಫ್ಲಾಪ್!

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಬಳಿ ವಿಚಾರಣಾಧೀನ ಕೈದಿಯೊಬ್ಬನಿಗೆ ರಹಸ್ಯವಾಗಿ ಸಿಮ್ ಕಾರ್ಡ್‌ಗಳನ್ನು ತಲುಪಿಸಲು ಹೋದ ಮತ್ತೊಬ್ಬ (Crime) ಆರೋಪಿಯ ಜಾಲವನ್ನು ಪೊಲೀಸರು ಸಮಯಪ್ರಜ್ಞೆಯಿಂದ ಭೇದಿಸಿದ್ದಾರೆ. ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ಘಟನೆಯ ಹಿನ್ನೆಲೆ ಜುಲೈ 23ರಂದು ಕೊಣಾಜೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಯತೀಶ್ ಎ. ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಕೊಣಾಜೆಯ ವಿವಿಧ ಗಂಭೀರ ಅಪರಾಧ ಪ್ರಕರಣಗಳ ವಿಚಾರಣೆ ಮುಗಿಸಿ, ಆರೋಪಿಗಳನ್ನು ಮರಳಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು…

Read More
Rocking Star Yashs Uber Cool Yet Lethal Look From toxic Goes Viral Movie Release Countdown Begins

Toxic: ‘ಟಾಕ್ಸಿಕ್’ ಬಿಡುಗಡೆಗೆ ಕೌಂಟ್‌ಡೌನ್ ಶುರು: ಹೊಸ ಪೋಸ್ಟರ್ ರಿಲೀಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಬೆಳ್ಳಿಪರದೆಗೆ ಬರಲು ಇನ್ನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಜುಲೈ 26 ರಿಂದ ಆಗಸ್ಟ್ 26ರವರೆಗಿನ ದಿನಗಣನೆ ಅಧಿಕೃತವಾಗಿ ಶುರುವಾಗಿದ್ದು, ಚಿತ್ರತಂಡ ‘ಬಿಗಿನ್ಸ್ ವಿತ್ ಎ ಬ್ಯಾಂಗ್’ (Begins with a Bang) ಎಂಬ ಶೀರ್ಷಿಕೆಯಡಿ ಹೊಸ ಪೋಸ್ಟರ್ ಒಂದನ್ನು ಜುಲೈ 26 ರಂದು ಹಂಚಿಕೊಂಡಿದೆ. ಮಾಸ್ ಲುಕ್‌ನಲ್ಲಿ ಅಬ್ಬರಿಸಿದ ಯಶ್ ಈಗಾಗಲೇ ಸಿನಿಮಾದ ಹಲವು ಪೋಸ್ಟರ್‌ಗಳು ಸದ್ದು ಮಾಡಿದ್ದರೂ, ಇತ್ತೀಚಿನ…

Read More
Know more about business lady Kanika Tekriwal is the founder of JetSetGo

Business: ಕೇವಲ ₹5,600 ಹೂಡಿಕೆಯಿಂದ ₹420 ಕೋಟಿ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಕನಿಕಾ ಟೇಕ್ರಿವಾಲ್

ಮುಂಬೈ: ಕೇವಲ ₹5,600 ರಷ್ಟು ಸಣ್ಣ ಮೊತ್ತದಿಂದ ₹420 ಕೋಟಿ ಮೌಲ್ಯದ ಉದ್ಯಮ (Business) ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಜಿಇಟಿ-ಸೆಟ್-ಗೋ (JetSetGo) ಸಂಸ್ಥೆಯ ಸಂಸ್ಥಾಪಕಿ ಹಾಗೂ ಸಿಇಒ ಕನಿಕಾ ಟೇಕ್ರಿವಾಲ್ ಅವರ ಜೀವನ ಪಯಣ ಎಲ್ಲರಿಗೂ ದೊಡ್ಡ ಪ್ರೇರಣೆಯಾಗಿದೆ. 2021 ರಲ್ಲಿ ಭಾರತದ ಅತ್ಯಂತ ಶ್ರೀಮಂತ ಸ್ವಯಂ-ನಿರ್ಮಿತ ಉದ್ಯಮಿ ಮಹಿಳೆಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಕನಿಕಾ, ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 5 ರಲ್ಲೂ ಕಾಣಿಸಿಕೊಂಡು ಗಮನ ಸೆಳೆದಿದ್ದರು.ಇಷ್ಟೇ ಅಲ್ಲದೆ, ತಮ್ಮ ಅಪಾರ ಸಾಧನೆಯಿಂದಾಗಿ ಕನಿಕಾ ಅವರು 2016…

Read More