Ranveer Singh: ‘ಕಾಂತಾರ’ ವಿವಾದ: ಅಫಿಡವಿಟ್ ತಿದ್ದುಪಡಿ ಮಾಡಲು ನಟ ರಣವೀರ್ ಸಿಂಗ್ ಸಮ್ಮತಿ
ಬೆಂಗಳೂರು: ‘ಕಾಂತಾರ’ ಚಲನಚಿತ್ರದ ದೃಶ್ಯವೊಂದನ್ನು ಅನುಕರಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh), ತಮ್ಮ ಕ್ಷಮೆಯಾಚನೆ ಪತ್ರವನ್ನು (ಅಫಿಡವಿಟ್) ದೂರುದಾರರ ಸಮಾಧಾನಕ್ಕೆ ತಕ್ಕಂತೆ ತಿದ್ದುಪಡಿ ಮಾಡಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಶುಕ್ರವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ರಣವೀರ್ ಪರ ವಕೀಲರು ನ್ಯಾಯಾಲಯಕ್ಕೆ ಈ ಭರವಸೆ ನೀಡಿದ್ದಾರೆ. ಕಳೆದ ವರ್ಷ ಮಿಮಿಕ್ರಿ ಮಾಡಿದ್ದ ನಟ ಕಳೆದ ವರ್ಷ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ…
