TOP NEWS
INDIA Bloc opposing women reservation bill

INDIA Bloc: ಮಹಿಳಾ ಮೀಸಲಾತಿ ಮಸೂದೆಗೆ ಇಂಡಿ ಒಕ್ಕೂಟ ವಿರೋಧ

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯ ಜಾರಿ ಪ್ರಕ್ರಿಯೆಯನ್ನು ವಿರೋಧಿಸಲು ಪ್ರತಿಪಕ್ಷಗಳ ‘ಇಂಡಿಯಾ’ (INDIA Bloc) ಒಕ್ಕೂಟ ನಿರ್ಧರಿಸಿದೆ. ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮಹಿಳೆಯರಿಗೆ ಮೀಸಲಾತಿ ನೀಡುವ ನೀತಿಯನ್ನು ನಾವು ಬೆಂಬಲಿಸುತ್ತೇವೆ, ಆದರೆ ಸರ್ಕಾರ ಇದನ್ನು ಜಾರಿಗೆ ತರುತ್ತಿರುವ ರೀತಿ ಸರಿಯಿಲ್ಲ ಎಂದು ಒಕ್ಕೂಟದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪ್ರೇರಿತ ಅಜೆಂಡಾ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಪ್ರತಿಪಕ್ಷಗಳ ಪ್ರಮುಖ…

Read More
iran Supertanker Crosses Hormuz Strait

Iran: ಅಮೆರಿಕ ದಿಗ್ಬಂಧನ ನಡುವೆಯೂ ಹೊರ್ಮುಜ್ ಜಲಸಂಧಿ ದಾಟಿದ ಇರಾನ್‌ ನೌಕೆ

ತೆಹ್ರಾನ್: ಅಮೆರಿಕ ವಿಧಿಸಿರುವ ಕಠಿಣ ಸೇನಾ ದಿಗ್ಬಂಧನವನ್ನು ಲೆಕ್ಕಿಸದ ಇರಾನ್‌ನ (Iran) ಬೃಹತ್ ತೈಲ ನೌಕೆಯೊಂದು ಹೊರ್ಮುಜ್ ಜಲಸಂಧಿಯ ಮೂಲಕ ಯಶಸ್ವಿಯಾಗಿ ಸಂಚರಿಸಿದೆ. ಸುಮಾರು 20 ಲಕ್ಷ ಬ್ಯಾರೆಲ್ ತೈಲ ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ನೌಕೆಯು, ತನ್ನ ಲೊಕೇಶನ್ ಸಿಗ್ನಲ್‌ಗಳನ್ನು ಆನ್ ಮಾಡಿಕೊಂಡೇ ಬಹಿರಂಗವಾಗಿ ಅಮೆರಿಕದ ಎಚ್ಚರಿಕೆಯನ್ನು ಮೀರಿ ಸಾಗಿದೆ. ಇರಾನ್‌ನ ಈ ನಡೆ ವಾಷಿಂಗ್ಟನ್ ಮತ್ತು ತೆಹ್ರಾನ್ ನಡುವಿನ ಸಂಘರ್ಷವನ್ನು ಮತ್ತಷ್ಟು ಸ್ಫೋಟಕ ಹಂತಕ್ಕೆ ತಲುಪಿಸಿದೆ. ಬೆದರಿಕೆಗೆ ಮಣಿಯದ ಇರಾನ್; 6 ನೌಕೆಗಳು ವಾಪಸ್: ವಿಶ್ವದ…

Read More
Zombie Drugs viral video creates tension in Maharashtra people

Zombie Drugs: ಮಹಾರಾಷ್ಟ್ರದಲ್ಲೂ ಜಾಂಬಿ ಡ್ರಗ್ಸ್ ಪ್ರಭಾವ, ವೈರಲ್‌ ವಿಡಿಯೋ ಮೂಡಿಸಿದ ಆತಂಕ

ಮುಂಬೈ: ಮಹಾರಾಷ್ಟ್ರದ ಮೀರಾ-ಭಯಂದರ್ ಪ್ರದೇಶದಲ್ಲಿ ಯುವಕನೊಬ್ಬ ರಸ್ತೆಯ ಮಧ್ಯೆ ಗಂಟೆಗಟ್ಟಲೆ ಪ್ರತಿಮೆಯಂತೆ ಅಲುಗಾಡದೆ ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿವೆ. ಈತನ ವಿಚಿತ್ರ ವರ್ತನೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದು, ವಿದೇಶಗಳಲ್ಲಿ ಭೀತಿ ಹುಟ್ಟಿಸಿರುವ ‘ಜಾಂಬಿ ಡ್ರಗ್ಸ್’ (Zombie Drugs) ಈಗ ಮುಂಬೈಗೂ ಕಾಲಿಟ್ಟಿದೆಯೇ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಏನಿದೆ ಈ ವಿಡಿಯೋದಲ್ಲಿ? ವೈರಲ್ ಆಗಿರುವ ದೃಶ್ಯಗಳಲ್ಲಿ ಈ ಯುವಕ ರಸ್ತೆಯ ಬದಿಯಲ್ಲಿ ಯಾವುದೇ ಚಲನೆಯಿಲ್ಲದೆ, ಅರೆಪ್ರಜ್ಞಾವಸ್ಥೆಯಲ್ಲಿ ನಿಂತಿರುವುದು ಕಂಡುಬಂದಿದೆ. ಹಗಲು ಮತ್ತು ರಾತ್ರಿ ವೇಳೆ…

Read More
America-Iran taunts trump in Bollywood style

America-Iran: ಬಾಲಿವುಡ್‌ ಸ್ಟೈಲ್‌ನಲ್ಲಿ ಅಮೆರಿಕಾಗೆ ಇರಾನ್‌ ಟಾಂಗ್

ಮುಂಬೈ: ಅಮೆರಿಕ ಮತ್ತು ಇರಾನ್ ನಡುವಿನ ಜಟಾಪಟಿ ಈಗ ಬಾಲಿವುಡ್ ಡೈಲಾಗ್‌ಗಳ ಮಟ್ಟಕ್ಕೆ ಬಂದು ನಿಂತಿದೆ. ಇರಾನ್‌ನ 158 ಹಡಗುಗಳನ್ನು ಅಮೆರಿಕ ಸೇನೆ ಧ್ವಂಸಗೊಳಿಸಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ, ಮುಂಬೈನಲ್ಲಿರುವ ಇರಾನ್ ರಾಯಭಾರ ಕಚೇರಿಯು ಶಾರುಖ್ ಖಾನ್ ಅವರ ಸಿನಿಮಾ (America-Iran) ಶೈಲಿಯಲ್ಲೇ ಖಡಕ್ ತಿರುಗೇಟು ನೀಡಿದೆ. ಸೋಮವಾರ ‘ಎಕ್ಸ್’ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ರಾಯಭಾರ ಕಚೇರಿ, ಅಮೆರಿಕಕ್ಕೆ ಎಚ್ಚರಿಕೆ ನೀಡಲು “ಓಂ ಶಾಂತಿ ಓಂ” ಸಿನಿಮಾದ ಜನಪ್ರಿಯ ಸಂಭಾಷಣೆಯನ್ನು ಬಳಸಿಕೊಂಡಿದೆ. ಸಿನಿಮಾ…

Read More
331 children infected HIV in pakistan

Pakistan: ಮಕ್ಕಳ ಜೀವನದ ಜೊತೆ ಆಸ್ಪತ್ರೆ ಸಿಬ್ಬಂದಿ ಚೆಲ್ಲಾಟ, 331 ಮಕ್ಕಳಿಗೆ HIV ಸೋಂಕು

ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ಸಿಬ್ಬಂದಿಯ ಭೀಕರ ನಿರ್ಲಕ್ಷ್ಯ ಮುಂದುವರಿದಿದ್ದು, ನೂರಾರು ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆಘಾತಕಾರಿ ಅಂಶ ಬಿಬಿಸಿ ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ. ಅಲ್ಲಿನ ಟೌನ್ಸಾ ಪಟ್ಟಣದ ಟಿಎಚ್‌ಕ್ಯೂ (THQ) ಆಸ್ಪತ್ರೆಯಲ್ಲಿ ಇಂಜೆಕ್ಷನ್ ನೀಡುವಾಗ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ, ಬಳಸಿದ ಸಿರಿಂಜ್‌ಗಳನ್ನೇ ಮತ್ತೆ ಬಳಸುತ್ತಿರುವುದು ರಹಸ್ಯ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಮಕ್ಕಳಲ್ಲಿ ಹೆಚ್‌ಐವಿ (HIV) ಪ್ರಕರಣಗಳು ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ,…

Read More

Supreme Court: ಜಾತಿ ಗಣತಿ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ: ಅರ್ಜಿದಾರರ ಭಾಷೆಗೆ ಸಿಜೆಐ ಗರಂ

ನವದೆಹಲಿ: ದೇಶದಲ್ಲಿ ಮುಂಬರುವ ಜಾತಿ ಗಣತಿಯನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು, ಅರ್ಜಿಯಲ್ಲಿ ಬಳಸಿರುವ ಭಾಷೆಯ ಬಗ್ಗೆ ಅರ್ಜಿದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.‌ ಅರ್ಜಿದಾರರನ್ನ ತರಾಟೆಗೆ ತೆಗೆದುಕೊಂಡ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠದ ಮುಂದೆ ಈ ವಿಚಾರದ ಸುದೀರ್ಘ…

Read More
Elon Musk says he cant trust whatsapp

Elon Musk: ವಾಟ್ಸಾಪ್‌ ನಂಬಲು ಅರ್ಹವಲ್ಲ ಎಂದ ಎಲಾನ್‌ ಮಸ್ಕ್

ನವದೆಹಲಿ: ಖಾಸಗಿ ಸಂದೇಶಗಳ ರಕ್ಷಣೆ ವಿಚಾರದಲ್ಲಿ ವಾಟ್ಸಾಪ್ ತನ್ನ ಬಳಕೆದಾರರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂಬ ಆರೋಪದ ಮೇಲೆ ಮೆಟಾ ಕಂಪನಿಯು ಅಮೆರಿಕದಲ್ಲಿ ಕಾನೂನು ಸಂಘರ್ಷ ಎದುರಿಸುತ್ತಿದೆ. ಈ ವಿವಾದ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದ್ದು, ಎಕ್ಸ್ ಮಾಲೀಕ ಎಲಾನ್ ಮಸ್ಕ್ (Elon Musk) ಅವರು ವಾಟ್ಸಾಪ್ ಅನ್ನು ನಂಬಬೇಡಿ ಎಂದು ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ವಾಟ್ಸಾಪ್ ಸುರಕ್ಷಿತವಲ್ಲ ಎಂದು ಹೇಳಿರುವ ಮಸ್ಕ್, ಸುರಕ್ಷಿತ ಕರೆಗಳಿಗಾಗಿ ತಮ್ಮದೇ ಆದ ‘ಎಕ್ಸ್’ ವೇದಿಕೆಯನ್ನು ಬಳಸುವಂತೆ…

Read More