TOP NEWS
vijay TVK rare achievement like TDP and AAP

TVK: ತಮಿಳುನಾಡು ರಾಜಕೀಯದಲ್ಲಿ ವಿಜಯ್ ಸುನಾಮಿ, ರಾಜಕೀಯದ ಹೊಸ ‘ಯೂನಿಕಾರ್ನ್’ ಟಿವಿಕೆ!

ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ಅಧಿಪತ್ಯ ಸ್ಥಾಪಿಸಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ದೈತ್ಯ ಪಕ್ಷಗಳನ್ನು ಬದಿಗೆ ಸಳ್ಳಿ, ನಟ ವಿಜಯ್ (Vijay) ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ (TVK) ಅಧಿಕಾರದ ಹತ್ತಿರಕ್ಕೆ ಬಂದಿದೆ. ಚೊಚ್ಚಲ ಚುನಾವಣೆಯಲ್ಲೇ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಛಿದ್ರಗೊಳಿಸಿರುವ ವಿಜಯ್ ಅವರ ಈ ಸಾಧನೆಯನ್ನು ರಾಜಕೀಯ ವಿಶ್ಲೇಷಕರು ‘ಬಿಗ್ ಬ್ಯಾಂಗ್’ ಕ್ಷಣ ಎಂದು ಕರೆಯುತ್ತಿದ್ದಾರೆ. ಮೊದಲ ಯತ್ನದಲ್ಲೇ ಭರ್ಜರಿ ಮುನ್ನಡೆ: ರಾಜ್ಯದ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ…

Read More
Bjp workers celebrated win with fish meal

BJP: ಬಂಗಾಳದಲ್ಲಿ ದೀದಿ ಯುಗಾಂತ್ಯ; ಕೇಸರಿ ಸುನಾಮಿಗೆ ನಲುಗಿದ ಟಿಎಂಸಿ ಕೋಟೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಖಂಡ ಬಹುಮತದತ್ತ ಮುನ್ನುಗ್ಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಮಮತಾ ಬ್ಯಾನರ್ಜಿ ಅವರ ಸುದೀರ್ಘ 15 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿ ಅಧಿಕಾರದ ಗದ್ದುಗೆಯತ್ತ ಹೆಜ್ಜೆ ಹಾಕಿರುವ ಬಿಜೆಪಿ (BJP) ಕಾರ್ಯಕರ್ತರು, ಬಂಗಾಳದ ಸಂಪ್ರದಾಯದಂತೆ ಮೀನೂಟ ಸವಿಯುವ ಮೂಲಕ ವಿಶಿಷ್ಟವಾಗಿ ವಿಜಯೋತ್ಸವ ಆಚರಿಸಿದ್ದಾರೆ. ಮೀನೂಟದ ಮೂಲಕವೇ ತಿರುಗೇಟು: ಚುನಾವಣಾ ಪ್ರಚಾರದ ವೇಳೆ “ಬಿಜೆಪಿ ಬಂದರೆ ರಾಜ್ಯದಲ್ಲಿ ಮೀನು, ಮಾಂಸ ನಿಷೇಧಿಸುತ್ತದೆ” ಎಂದು ಟಿಎಂಸಿ ಹರಡಿದ್ದ ವದಂತಿಗೆ ಬಿಜೆಪಿ ಕಾರ್ಯಕರ್ತರು…

Read More
winning west Bengal election win bjp releases new india map

West Bengal: ಬಂಗಾಳ ಗೆದ್ದ ಸಂಭ್ರಮ: ದೇಶದ ಹೊಸ ರಾಜಕೀಯ ಭೂಪಟ ಬಿಡುಗಡೆ ಮಾಡಿದ ಬಿಜೆಪಿ!

ನವದೆಹಲಿ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ದಾಖಲಿಸಿರುವ ಬಿಜೆಪಿ, ಇಡೀ ದೇಶದ ಗಮನ ಸೆಳೆದಿದೆ. ದಶಕಗಳ ಕಾಲದ ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ಅಂತ್ಯ ಹಾಡಿರುವ ಸಂಭ್ರಮದಲ್ಲಿರುವ ಕೇಸರಿ ಪಡೆ, ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಹೊಸ ರಾಜಕೀಯ ನಕ್ಷೆಯನ್ನು ಹಂಚಿಕೊಳ್ಳುವ ಮೂಲಕ ವಿರೋಧ ಪಕ್ಷಗಳಿಗೆ ಬಲವಾದ ಸಂದೇಶ ರವಾನಿಸಿದೆ. ನಕ್ಷೆಯಲ್ಲಿ ಕೇಸರಿಮಯ ಬಂಗಾಳ: ಬಿಜೆಪಿ ಬಿಡುಗಡೆ ಮಾಡಿರುವ ಈ ವಿಶೇಷ ಭೂಪಟದಲ್ಲಿ ಪಶ್ಚಿಮ ಬಂಗಾಳವನ್ನು ಸಂಪೂರ್ಣವಾಗಿ ಕೇಸರಿ ಬಣ್ಣದಲ್ಲಿ…

Read More
Maharashtra by election ncp Sunetra pawar wins

Sunetra Pawar: ಬಾರಾಮತಿ ಉಪಸಮರದಲ್ಲಿ ಸುನೇತ್ರಾ ಪವಾರ್‌ಗೆ ಭರ್ಜರಿ ಜಯ: ಅಜಿತ್ ದಾದಾ ಭದ್ರಕೋಟೆ ಉಳಿಸಿಕೊಂಡ ಎನ್‌ಸಿಪಿ!

ಮುಂಬೈ: ಮಹಾರಾಷ್ಟ್ರ ರಾಜಕಾರಣದ ಪ್ರತಿಷ್ಠಿತ ಕಣ ಬಾರಾಮತಿ ವಿಧಾನಸಭಾ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್ (Sunetra Pawar) ಅವರು ಐತಿಹಾಸಿಕ ವಿಜಯ ದಾಖಲಿಸಿದ್ದಾರೆ. ತಮ್ಮ ಪತಿ, ದಿವಂಗತ ಅಜಿತ್ ಪವಾರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಸುನೇತ್ರಾ ಅವರು ಆರಂಭದಿಂದಲೇ ವಿರೋಧಿಗಳಿಲ್ಲದ ಅಬ್ಬರದ ಮುನ್ನಡೆ ಸಾಧಿಸುವ ಮೂಲಕ ಪವಾರ್ ಕುಟುಂಬದ ರಾಜಕೀಯ ಪ್ರಾಬಲ್ಯವನ್ನು ಸಾಬೀತುಪಡಿಸಿದ್ದಾರೆ. ಅಜಿತ್ ಪವಾರ್ ಸ್ಮರಣೆ; ಭಾವುಕರಾದ ಸುನೇತ್ರಾ ಮತ ಎಣಿಕೆಯ 15ನೇ ಸುತ್ತು ಮುಕ್ತಾಯವಾಗುವಷ್ಟರಲ್ಲೇ 1.32 ಲಕ್ಷ ಮತಗಳ ಬೃಹತ್ ಅಂತರ…

Read More
keralam bjp got opportunity to make place in state at this election

Keralam: ಕೇರಳದ ಮಣ್ಣಿನಲ್ಲಿ ಗಟ್ಟಿಯಾದ ಕಮಲ: ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಹೊಸ ಇತಿಹಾಸ!

ತಿರುವನಂತಪುರಂ: ದಶಕಗಳ ಕಾಲ ಕೇರಳ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಲು ಶ್ರಮಿಸುತ್ತಿದ್ದ ಕೇಸರಿ ಪಡೆಗೆ (Keralam) ಈ ಬಾರಿಯ ವಿಧಾನಸಭಾ ಚುನಾವಣೆ ಭರ್ಜರಿ ಯಶಸ್ಸು ತಂದುಕೊಟ್ಟಿದೆ. ಸಾಂಪ್ರದಾಯಿಕ ಎಲ್‌ಡಿಎಫ್‌ ಮತ್ತು ಯುಡಿಎಫ್‌ ಮೈತ್ರಿಕೂಟಗಳ ಪಾರುಪತ್ಯವಿದ್ದ ರಾಜ್ಯದಲ್ಲಿ, ಇದೇ ಮೊದಲ ಬಾರಿಗೆ ಮೂರು ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಗೆಲುವಿನ ನಗೆ ಬೀರಿದ ಪ್ರಮುಖ ನಾಯಕರು: ಈ ಚುನಾವಣೆಯಲ್ಲಿ ಬಿಜೆಪಿಯ ಮೂವರು ಪ್ರಭಾವಿ ನಾಯಕರು ವಿಧಾನಸಭೆಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ: ಬಿಜೆಪಿಯ ಈ ಯಶಸ್ಸಿನ ಹಾದಿ:…

Read More
bjp president annamalai praises vijay win in election

Annamalai: ವಿಜಯ್ ಗೆಲುವನ್ನು ಕೊಂಡಾಡಿದ ಅಣ್ಣಾಮಲೈ: ಕುಟುಂಬ ರಾಜಕಾರಣಕ್ಕೆ ಅಂತ್ಯ ಎಂದ ಬಿಜೆಪಿ ನಾಯಕ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಸಾರಥ್ಯದ ಟಿವಿಕೆ ಪಕ್ಷವು ದಾಖಲಿಸಿರುವ ಅಭೂತಪೂರ್ವ ಮುನ್ನಡೆಯನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (Annamalai) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೊಂದು ಹೊಸ ಯುಗದ ಆರಂಭ” ಎಂದು ಬಣ್ಣಿಸಿರುವ ಅವರು, ದಳಪತಿ ವಿಜಯ್ ಅವರ ಯಶಸ್ವಿ ರಾಜಕೀಯ ಪ್ರವೇಶಕ್ಕೆ ಶುಭ ಹಾರೈಸಿದ್ದಾರೆ. ವಂಶಪಾರಂಪರ್ಯ ಆಡಳಿತಕ್ಕೆ ಜನರೇ ನೀಡಿದ ಉತ್ತರ ಫಲಿತಾಂಶದ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅಣ್ಣಾಮಲೈ, ಆಡಳಿತಾರೂಢ ಡಿಎಂಕೆ ವಿರುದ್ಧ…

Read More
reason for tvk vijay win in tamil nadu assembly election

TVK: ವಿಜಯ್ ಪಟ್ಟಾಭಿಷೇಕಕ್ಕೆ ಮುನ್ನುಡಿ ಬರೆದ ಟಿವಿಕೆ ಪ್ರಣಾಳಿಕೆಯ ಆಕರ್ಷಕ ಆಫರ್‌ಗಳು

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಅಚ್ಚರಿಯ ಮುನ್ನಡೆ ಸಾಧಿಸಲು ಕೇವಲ ಅವರ ಸ್ಟಾರ್ ಇಮೇಜ್ ಮಾತ್ರವಲ್ಲ, ಅವರು ನೀಡಿದ ‘ಜನಪ್ರಿಯ ಪ್ರಣಾಳಿಕೆ’ ಕೂಡ ಪ್ರಮುಖ ಕಾರಣವಾಗಿದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಭರಪೂರ ಕೊಡುಗೆಗಳನ್ನು ಘೋಷಿಸುವ ಮೂಲಕ ವಿಜಯ್ ಮತದಾರರ ಮನ ಗೆದ್ದಿದ್ದಾರೆ. ಅಂತಹ ಪ್ರಮುಖ ಭರವಸೆಗಳ ವಿವರ ಇಲ್ಲಿದೆ: ಮಹಿಳೆಯರಿಗೆ ‘ಮಹಾಲಕ್ಷ್ಮಿ’ ಭಾಗ್ಯ ಮಹಿಳಾ ಮತದಾರರನ್ನು ಸೆಳೆಯಲು ವಿಜಯ್ ಹಲವು ಆಕರ್ಷಕ ಸ್ಕೀಮ್‌ಗಳನ್ನು ಘೋಷಿಸಿದ್ದಾರೆ. ಮನೆಯ…

Read More