6 lakh organizations register for Yoga Sangam ahead IDY 2026 Narendra Modi

IDY 2026: ಯೋಗ ಸಂಗಮ ಪೋರ್ಟಲ್‌ನಲ್ಲಿ 6 ಲಕ್ಷಕ್ಕೂ ಅಧಿಕ ನೋಂದಣಿ

ನವದೆಹಲಿ: ದೇಶಾದ್ಯಂತ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (IDY 2026) ಸಂಭ್ರಮ ಮನೆಮಾಡಿದ್ದು, ಆಯುಷ್ ಸಚಿವಾಲಯದ ‘ಯೋಗ ಸಂಗಮ’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಸಂಸ್ಥೆಗಳ ಸಂಖ್ಯೆ ಬರೋಬ್ಬರಿ 6 ಲಕ್ಷದ ಗಡಿ ದಾಟಿದೆ. ಇದು ಭಾರತದಾದ್ಯಂತ ಯೋಗ ದಿನಾಚರಣೆಗೆ ವ್ಯಕ್ತವಾಗುತ್ತಿರುವ ಅಭೂತಪೂರ್ವ ಜನಬೆಂಬಲವನ್ನು ತೋರಿಸುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಯೋಗ ಫಾರ್ ಹೆಲ್ತಿ ಏಜಿಂಗ್ ‘ಯೋಗ ಫಾರ್ ಹೆಲ್ತಿ ಏಜಿಂಗ್’ (ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ) ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು,…

Read More
Rahul Gandhi slams NTA and central government regarding neet exam centre allotment

Rahul Gandhi: ನೀಟ್ ಮರುಪರೀಕ್ಷೆ ಯಡವಟ್ಟು: ನಾಗ್ಪುರದ ವಿದ್ಯಾರ್ಥಿಗೆ ಅಬುಧಾಬಿಯಲ್ಲಿ ಸೆಂಟರ್! ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ತರಾಟೆ

ನವದೆಹಲಿ: ನೀಟ್ ಪರೀಕ್ಷೆಯ ಮರುಪರೀಕ್ಷೆ ಹಂಚಿಕೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಾಡಿರುವ ಎಡವಟ್ಟು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಹಾರಾಷ್ಟ್ರದ ನಾಗ್ಪುರದ ನೀಟ್ ಅಭ್ಯರ್ಥಿಯೊಬ್ಬನಿಗೆ ಜೂನ್ 21ರಂದು ನಡೆಯಲಿರುವ ಮರುಪರೀಕ್ಷೆಗೆ ಯುಎಇಯ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಲಾಗಿದೆ. ಈ ಗಂಭೀರ ಲೋಪವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, (Rahul Gandhi) ದೇಶದ ಮಕ್ಕಳ ಭವಿಷ್ಯದ ಜೊತೆ ಜೂಜಾಡುವುದನ್ನು ಕೇಂದ್ರ ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳವಳ ವ್ಯಕ್ತಪಡಿಸಿದ…

Read More
PM kisan yojana 23 installment release on June 20 2026

PM Kisan: ರೈತರ ಖಾತೆಗೆ ನಾಳೆ ಬೀಳಲಿದೆ ಪಿಎಂ ಕಿಸಾನ್ ಹಣ

ಬೆಂಗಳೂರು: ದೇಶದ ಕೋಟ್ಯಂತರ ಅನ್ನದಾತರು ಕಾತರದಿಂದ ಕಾಯುತ್ತಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ ಬಹುನಿರೀಕ್ಷಿತ 23ನೇ ಕಂತಿನ ಹಣ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 20ರ ಶನಿವಾರದಂದು ಪ್ರಧಾನಮಂತ್ರಿಯವರು ದೇಶದ ಅರ್ಹ ರೈತ ಕುಟುಂಬಗಳ ಖಾತೆಗೆ ಅಧಿಕೃತವಾಗಿ ಈ ಹಣವನ್ನು ಜಮೆ ಮಾಡಲಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಪ್ರಧಾನಿಯವರು ಈ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದು, ಕೃಷಿ ಕ್ಷೇತ್ರಕ್ಕೆ…

Read More
Viral news 20rs note in temple donation box shocks everyone

Viral News: ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಅತ್ತೆಯ ಮರಣ ಶಾಸನ ಬರೆದ ಸೊಸೆ!: ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದ 20 ರೂಪಾಯಿ ನೋಟು!

ಆಂಧ್ರಪ್ರದೇಶ: ಸಾಮಾನ್ಯವಾಗಿ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತಾದಿಗಳು ತಮಗೆ ಒಳ್ಳೆಯದಾಗಲಿ, ಮನೆ ಮಂದಿಗೆಲ್ಲಾ ಸುಖ-ಶಾಂತಿ ಸಿಗಲಿ ಎಂದು ದೇವರಲ್ಲಿ ಮೊರೆ ಇಡುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಇಡೀ ಸಮಾಜವೇ ಮೂಗಿನ ಮೇಲೆ ಬೆರಳಿಡುವಂತಹ ವಿಲಕ್ಷಣ ಪ್ರಸಂಗವೊಂದು ಮುನ್ನೆಲೆಗೆ (Viral News) ಬಂದಿದೆ. ಅತ್ತೆಯ ಕಿರುಕುಳದಿಂದ ಸಂಪೂರ್ಣವಾಗಿ ಜಿಗುಪ್ಸೆಗೊಂಡ ಸೊಸೆಯೊಬ್ಬಳು, ತನ್ನ ಅತ್ತೆ ಇಷ್ಟರಲ್ಲೇ ಸಾಯುವಂತೆ ಅನುಗ್ರಹಿಸು ಎಂದು ನೇರವಾಗಿ ದೇವರಿಗೇ ಪತ್ರ ಬರೆದು ಹುಂಡಿಗೆ ಎಸೆದು ಬಂದಿದ್ದಾಳೆ! ಎಲ್ಲಿ ನಡೆದಿದ್ದು ಈ ಘಟನೆ? ಈ ಕುತೂಹಲಕಾರಿ…

Read More
Iran appointed psychologists to analyze Donald Trump behavior

Donald Trump: ಮನೋವಿಜ್ಞಾನಿಗಳ ಜಾಲಕ್ಕೆ ಕರಗಿದ ಅಮೆರಿಕ ಅಧ್ಯಕ್ಷ: ಇರಾನ್ ಕಳುಹಿಸಿದ ಸಂದೇಶಗಳಿಗೆ ಟ್ರಂಪ್ ಸಕಾರಾತ್ಮಕ ಕೌಂಟರ್!

ಟೆಹರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ವಿಶಿಷ್ಟ ರಾಜತಾಂತ್ರಿಕ ಶೈಲಿ ಮತ್ತು ಮನಸ್ಥಿತಿಯನ್ನು ಎದುರಿಸಲು ಇರಾನ್ ಸರ್ಕಾರ ಅತ್ಯಂತ ರೋಚಕ ಕಾರ್ಯತಂತ್ರವೊಂದನ್ನು ಹೆಣೆದಿದೆ. ವಾಷಿಂಗ್ಟನ್ ಹಾಗೂ ಟೆಹರಾನ್ ನಡುವೆ ನಡೆಯುತ್ತಿರುವ ಪರೋಕ್ಷ ಸಂಧಾನ ಮಾತುಕತೆಗಳಲ್ಲಿ ಮೇಲುಗೈ ಸಾಧಿಸಲು ಇರಾನ್ ತನ್ನ ಉನ್ನತ ಮಟ್ಟದ ರಾಜತಾಂತ್ರಿಕ ಸಲಹಾ ಸಮಿತಿಗೆ ಇಬ್ಬರು ಹಿರಿಯ ಮನಶ್ಶಾಸ್ತ್ರಜ್ಞರನ್ನು (Psychologists) ನೇಮಿಸಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ‘ಡ್ರಾಪ್ ಸೈಟ್’ ಪ್ರಕಟಿಸಿರುವ ವರದಿಯ ಪ್ರಕಾರ, ಕಳೆದ ಏಪ್ರಿಲ್ ತಿಂಗಳಿನಲ್ಲಿ…

Read More
tamil nadu cm vijay announces farmers crop loan waiver up to 75000

Tamil Nadu: ಅನ್ನದಾತನ ಮನವಿಗೆ ಸ್ಪಂದಿಸಿದ ವಿಜಯ್ ಸರ್ಕಾರ: 75 ಸಾವಿರಕ್ಕೂ ಮೀರಿದ ಸಾಲಕ್ಕೆ ₹35,000 ವಿನಾಯಿತಿ!

ಚೆನ್ನೈ: ತಮಿಳುನಾಡಿನ (Tamil Nadu) ಮುಖ್ಯಮಂತ್ರಿ ದಳಪತಿ ವಿಜಯ್ ಅವರು ರೈತರಿಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದು, ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಬೆಳೆ ಸಾಲ ಮನ್ನಾ ಯೋಜನೆಯನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ. ಮಂಗಳವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ವಿಜಯ್ ಸರ್ಕಾರ, ಭೂಮಿಯ ವಿಸ್ತೀರ್ಣದ ಮಿತಿ ಇಲ್ಲದೆ ಎಲ್ಲಾ ವರ್ಗದ ರೈತರು 2025ರ ಮೇ 1 ರಿಂದ 2026ರ ಫೆಬ್ರವರಿ 28ರ ಅವಧಿಯಲ್ಲಿ ಸಹಕಾರಿ ಬ್ಯಾಂಕ್‌ಗಳಿಂದ ಪಡೆದಿರುವ 75,000 ರೂಪಾಯಿ ವರೆಗಿನ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ತಿಳಿಸಿದೆ….

Read More
RBI new rules to stop digital fraud and selling insurance

RBI: ಗ್ರಾಹಕರ ಒಪ್ಪಿಗೆಯಿಲ್ಲದೆ ಇನ್ಮುಂದೆ ಯಾವುದೇ ಪಾಲಿಸಿ ಮಾರುವಂತಿಲ್ಲ: ಬ್ಯಾಂಕಿಂಗ್ ಆ್ಯಪ್‌ಗಳ ಡಿಜಿಟಲ್ ಮೋಸ ತಡೆಯಲು ಆರ್‌ಬಿಐ ಹೊಸ ಅಸ್ತ್ರ

ನವದೆಹಲಿ: ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರ ಹಿತರಕ್ಷಣೆ ಕಾಯಲು ಮತ್ತು ವಿವಿಧ ಹಣಕಾಸು ಉತ್ಪನ್ನಗಳ ಮಾರಾಟದಲ್ಲಿ ನಡೆಯುತ್ತಿರುವ ವಂಚನೆಗಳಿಗೆ ಮುಕ್ತಿ ಹಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ನಿಯಮಾವಳಿಗಳಿಗೆ ಮಹತ್ವದ ತಿದ್ದುಪಡಿ ತಂದಿದೆ. ಬ್ಯಾಂಕುಗಳು, ಡೈರೆಕ್ಟ್ ಸೆಲ್ಲಿಂಗ್ ಏಜೆಂಟರು (DSA), ಮಾರ್ಕೆಟಿಂಗ್ ಏಜೆಂಟರು ಮತ್ತು ಥರ್ಡ್ ಪಾರ್ಟಿ ಸಂಸ್ಥೆಗಳು ಇನ್ಮುಂದೆ ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುವುದನ್ನು ತಡೆಯಲು ಈ ಕಠಿಣ ನಿಯಮಗಳನ್ನು ರೂಪಿಸಲಾಗಿದ್ದು, ಇವು 2027ರ ಜನವರಿ 1ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿವೆ. ಆರ್‌ಬಿಐ ನಿಯಮಗಳ ಪ್ರಕಾರ,…

Read More