TOP NEWS

Shocking News: ಶಾಪಿಂಗ್ ಪ್ರಿಯರಿಗೆ ಶಾಕ್: ಇನ್ಮುಂದೆ ಸಿಗಲ್ಲ ಭರ್ಜರಿ ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಆಫರ್‌ಗಳು!

Shocking News for Shoppers No More Big Discounts and Cashback Offers Ahead

ಬೆಂಗಳೂರು: ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಡಿಸ್ಕೌಂಟ್‌ಗಳು ಮತ್ತು ಕ್ಯಾಶ್‌ಬ್ಯಾಕ್‌ ಆಫರ್‌ಗಳನ್ನು ನೋಡಿ ಶಾಪಿಂಗ್ ಮಾಡುವ ಅಭ್ಯಾಸ ಉಳ್ಳವರಾಗಿದ್ದರೆ ನಿಮಗೊಂದು (Shocking News) ನಿರಾಸೆಯ ಸುದ್ದಿಯಿದೆ. ಮುಂದಿನ ದಿನಗಳಲ್ಲಿ ವಿವಿಧ ಉತ್ಪನ್ನಗಳ ಮೇಲಿನ ರಿಯಾಯಿತಿಗಳು, ಬ್ಯಾಂಕ್ ಕಾರ್ಡ್ ಆಫರ್‌ಗಳು ಹಾಗೂ ಪ್ರಚಾರದ ಕೊಡುಗೆಗಳು ಗಣನೀಯವಾಗಿ ಕಡಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಜಾಗತಿಕ ಮಟ್ಟದ ಯುದ್ಧಗಳು ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಕಂಪನಿಗಳು ಹಂತಹಂತವಾಗಿ ರಿಯಾಯಿತಿಗಳನ್ನು ಕಡಿತಗೊಳಿಸಲು ಮುಂದಾಗಿವೆ.

ಡಿಸ್ಕೌಂಟ್‌ಗಳ ಜಮಾನ ಮುಗಿಯುತ್ತಿದೆಯೇ?

ಹಬ್ಬದ ದಿನಗಳಲ್ಲಿ ಹಾಗೂ ವಿಶೇಷ ಮಾರಾಟದ ಸಂದರ್ಭಗಳಲ್ಲಿ ಗ್ರಾಹಕರು ಹೆಚ್ಚಾಗಿ ರಿಯಾಯಿತಿ ನೀಡುವ ಮಳಿಗೆಗಳನ್ನೇ ಹುಡುಕುತ್ತಾರೆ. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಕಂಪನಿಗಳು ಕೊಡುಗೆಗಳನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡಿಸ್ಕೌಂಟ್‌ಗಳ ಪ್ರಮಾಣದಲ್ಲಿ ಸುಮಾರು 5 ರಿಂದ 7 ಪ್ರತಿಶತ ಇಳಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಬದಲಾವಣೆ ಹಾಗೂ ಚಿಪ್‌ಗಳ ಕೊರತೆಯಿಂದಾಗಿ ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಶೇ. 30 ರಿಂದ 40 ರಷ್ಟು ಏರಿಕೆಯಾಗಿದೆ. ಇದೇ ವೇಳೆ ಫ್ರಿಜ್, ಎಸಿ ಹಾಗೂ ಸ್ಮಾರ್ಟ್ ಟಿವಿಗಳ ಬೆಲೆಯೂ ಶೇ. 15 ರಿಂದ 20 ರಷ್ಟು ಹೆಚ್ಚಾಗಿದ್ದು, ಬ್ರ್ಯಾಂಡ್‌ಗಳು ಆಫರ್‌ಗಳನ್ನು ಕಡಿತಗೊಳಿಸಲು ಇದು ಪ್ರಮುಖ ಕಾರಣವಾಗಿದೆ.

ಬೆಲೆ ಏರಿಕೆಗೆ ಅಸಲಿ ಕಾರಣವೇನು?

  • ಕಚ್ಚಾ ವಸ್ತುಗಳ ಬೆಲೆ ಏರಿಕೆ: ಜಾಗತಿಕವಾಗಿ ತಾಮ್ರ, ಅಲ್ಯೂಮಿನಿಯಂ, ಉಕ್ಕು ಹಾಗೂ ಮೆಮೊರಿ ಚಿಪ್‌ಗಳ ಬೆಲೆ ಗಗನಕ್ಕೇರಿದೆ. ಇದರಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕಾ ವೆಚ್ಚ ದುಬಾರಿಯಾಗಿದೆ.
  • ಸಾಗಾಟ ವೆಚ್ಚದಲ್ಲಿ ಹೆಚ್ಚಳ: ವಿವಿಧ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ಸನ್ನಿವೇಶಗಳಿಂದಾಗಿ ಸರಕು ಸಾಗಣೆಯ ವೆಚ್ಚವೂ ಹೆಚ್ಚಾಗಿದೆ.

ಉತ್ಪಾದನಾ ವೆಚ್ಚ ಹೆಚ್ಚಾದ ಕಾರಣ ಕಂಪನಿಗಳ ಲಾಭಾಂಶ ಕುಸಿಯುತ್ತಿದ್ದು, ಅನಿವಾರ್ಯವಾಗಿ ಅವು ಗ್ರಾಹಕರಿಗೆ ನೀಡುತ್ತಿದ್ದ ಕ್ಯಾಶ್‌ಬ್ಯಾಕ್ ಮತ್ತು ಕಾರ್ಡ್ ಆಫರ್‌ಗಳನ್ನು ಕಡಿಮೆ ಮಾಡುತ್ತಿವೆ. ಒಂದು ವೇಳೆ ಜಾಗತಿಕ ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ವಸ್ತುಗಳ ಬೆಲೆ ಇನ್ನಷ್ಟು ಏರಿಕೆಯಾಗುವ ಜೊತೆಗೆ ಡಿಸ್ಕೌಂಟ್‌ಗಳು ಸಂಪೂರ್ಣವಾಗಿ ಮಾಯವಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಇ20 ಪೆಟ್ರೋಲ್‌ನಿಂದ ಮೈಲೇಜ್‌ ಉಲ್ಟಾ ಆಯ್ತಾ?: ಯೂಟ್ಯೂಬರ್ ಸೌರವ್ ಜೋಶಿ ಆರೋಪಕ್ಕೆ ಮರ್ಸಿಡಿಸ್ ಬೆಂಜ್ ಕಂಪನಿ ತಿರುಗೇಟು

Leave a Reply

Your email address will not be published. Required fields are marked *