ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮುಂಬರುವ T20I ಸರಣಿಗಾಗಿ ಪಾಕಿಸ್ತಾನ (Pakistan) ಹೊಸ ಜಾಹೀರಾತನ್ನ ಹರಿಬಿಟ್ಟಿದ್ದು, ಇದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಭಾರತವನ್ನ ಗುರಿಯಾಗಿಸಿಕೊಂಡು ಜಾಹೀರಾತು
ಪಾಕಿಸ್ತಾನ ಸದ್ಯ ಹರಿಬಿಟ್ಟಿರುವ ಜಾಹೀರಾತಿನಲ್ಲಿ ಭಾರತವನ್ನ ಗುರಿಯಾಗಿಸಿಕೊಂಡಿದ್ದು, ‘ಹ್ಯಾಂಡ್‌ಶೇಕ್’ ವಿವಾದವನ್ನು ಟೀಕೆ ಮಾಡಿದೆ. ಹೌದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತೀಯ ಕ್ರಿಕೆಟಿಗರು ವಿವಿಧ ಜಾಗತಿಕ ಸ್ಪರ್ಧೆಗಳಲ್ಲಿ ತಮ್ಮ ಪಾಕಿಸ್ತಾನಿ ಸಹ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಇದೆಲ್ಲವೂ 2025 ರ ಏಷ್ಯಾ ಕಪ್ ಸಮಯದಲ್ಲಿ ಪ್ರಾರಂಭವಾಗಿತ್ತು. ಈ ಸಮಯದಲ್ಲಿ ಪಾಕಿಸ್ತಾನ ಹಾಗೂ ಭಾರತ 3 ಬಾರಿ ಭೇಟಿ ಆಗಿದ್ದವು. ಈ ಸಮಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಏನಿದೆ ಪಾಕಿಸ್ತಾನದ ವಿಡಿಯೋದಲ್ಲಿ?
ಪಾಕಿಸ್ತಾನದ ಜಾಹೀರಾತಿನಲ್ಲಿ, ಪ್ರವಾಸಿಯೊಬ್ಬರು ಚಾಲಕನ ಕೈ ಕುಲುಕದೆ ಕಾರಿನಿಂದ ಹೊರಬರುತ್ತಾರೆ. ಆಗ ಚಾಲಕ ಆಸ್ಟ್ರೇಲಿಯಾದ ಪ್ರವಾಸಿಗನಿಗೆ “ಹ್ಯಾಂಡ್‌ಶೇಕ್ ಭೂಲ್ ಗಯೇ ಆಪ್, ಲಗ್ತಾ ಹೈ ಪಡೋಸಿಯೋಂ ಕೆ ಪಾಸ್ ಭಿ ರುಕೆ ಥಾಯ್” (ನೀವು ಹ್ಯಾಂಡ್‌ಶೇಕ್ ಅನ್ನು ಮರೆತಿದ್ದೀರಿ, ನೆರೆಯ ದೇಶಕ್ಕೆ ಹೋಗಿದ್ರಾ?) ಎಂದು ಕೇಳುತ್ತಾನೆ. ಇದು ಈಗ ವಿವಾದವನ್ನ ಸೃಷ್ಟಿ ಮಾಡಿದೆ.
ಇನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾ ಲಾಹೋರ್‌ನಲ್ಲಿ ಮೂರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್‌ನಿಂದ ಬಾಂಗ್ಲಾ ಔಟ್? ಐಸಿಸಿ ನಿರ್ಧಾರವೇನು?
