TOP NEWS
Big news Australian Cricket Legend Glenn Maxwell Announces Retirement

Big News: ಆಸೀಸ್- ಆರ್‌ಸಿಬಿ ಸ್ಟಾರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ!

ಮುಂಬೈ: ಆಸ್ಟ್ರೇಲಿಯಾದ ದಂತಕಥೆ, ರಾಯಲ್ ಚಾಲೆಂಜರ್ಸ್ (Big News) ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳ ನೆಚ್ಚಿನ ‘ಮ್ಯಾಕ್ಸಿ’ ಎಂದೇ ಪ್ರಸಿದ್ಧರಾಗಿರುವ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡದ ಪರ ಅವರು ನಡೆಸಿದ 14 ವರ್ಷಗಳ ಭವ್ಯ ಹಾಗೂ ಅಬ್ಬರದ ಅಂತರರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ಅಧಿಕೃತ ತೆರೆ ಬಿದ್ದಿದೆ. ತಮ್ಮ ತಲೆಮಾರಿನ ಅತ್ಯಂತ ವಿನಾಶಕಾರಿ ಹಾಗೂ ಅಪರೂಪದ ಆಲ್ ರೌಂಡರ್ ಬ್ಯಾಟ್ಸ್‌ಮನ್ ಆಗಿದ್ದ ಮ್ಯಾಕ್ಸ್‌ವೆಲ್, ಮೈದಾನದ ನಾಲ್ಕೂ ಮೂಲೆಗಳಿಗೆ…

Read Full News
Run Tsunami in Wellington Team India Breaks 3 World Records in Single Innings

Team India: ವೆಲ್ಲಿಂಗ್ಟನ್‌ನಲ್ಲಿ ರನ್ ಸುನಾಮಿ: ಒಂದೇ ಇನ್ನಿಂಗ್ಸ್‌ನಲ್ಲಿ 3 ಬೃಹತ್ ವಿಶ್ವದಾಖಲೆ ಬ್ರೇಕ್ ಮಾಡಿದ ಭಾರತ!

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟಿ20 ಅಂತರರಾಷ್ಟ್ರೀಯ (T20I) ಪಂದ್ಯದಲ್ಲಿ ಭಾರತ ತಂಡದ (Team India) ಆರಂಭಿಕ ಬ್ಯಾಟರ್‌ಗಳು ಕಿವೀಸ್ ಬೌಲರ್‌ಗಳನ್ನು ಅಕ್ಷರಶಃ ಧೂಳೀಪಟ ಮಾಡಿದ್ದಾರೆ. ವೆಲ್ಲಿಂಗ್ಟನ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ಈ ಐತಿಹಾಸಿಕ ಕಾದಾಟದಲ್ಲಿ, ನ್ಯೂಜಿಲ್ಯಾಂಡ್ ನೀಡಿದ್ದ 199 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದುವರೆಗೆ ಯಾರೂ ಮಾಡಲಾಗದ ಮೂರು ಜಾಗತಿಕ ವಿಶ್ವದಾಖಲೆಗಳನ್ನು ಒಂದೇ ಇನ್ನಿಂಗ್ಸ್‌ನಲ್ಲಿ ಮುರಿದು ಇತಿಹಾಸ ಬರೆದಿದೆ. ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (19…

Read Full News
India vs Sri Lanka Test Series Gautam Gambhir Squad Faces Spin Challenge At Galle

Team India: ಭಾರತ-ಶ್ರೀಲಂಕಾ ಟೆಸ್ಟ್ ಸರಣಿ: ಗೌತಮ್ ಗಂಭೀರ್ ಪಡೆಗೆ ಗಾಲ್‌ನಲ್ಲಿ ಸಪಿನ್ ಸವಾಲು

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಶನಿವಾರದಿಂದ ಗಾಲ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಹೆಡ್ ಕೋಚ್ (Team India) ಗೌತಮ್ ಗಂಭೀರ್ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯಕ್ಕೆ ಈ ಸರಣಿ ಅತ್ಯಂತ ನಿರ್ಣಾಯಕ ಎನಿಸಿದೆ. ಗಂಭೀರ್ ತರಬೇತಿಯಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಗೆದ್ದು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅಸಾಧಾರಣ ಯಶಸ್ಸು ಕಂಡಿದೆಯಾದರೂ, ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಡಬಡಾಯಿಸಿ ಸರಣಿ ಸೋಲನುಭವಿಸಿತ್ತು….

Read Full News
Injury Concerns for Team India Major Fitness Update on Jasprit Bumrah and Hardik Pandya cricket

Cricket: ಟೀಮ್ ಇಂಡಿಯಾಗೆ ಗಾಯದ ಸಮಸ್ಯೆ: ಬುಮ್ರಾ, ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಬಗ್ಗೆ ಹೊಸ ಅಪ್‌ಡೇಟ್!

ಬೆಂಗಳೂರು: ಶ್ರೀಲಂಕಾ ಪ್ರವಾಸದ ಹೊಸ್ತಿಲಲ್ಲಿರುವ ಭಾರತ ಕ್ರಿಕೆಟ್ (Cricket) ತಂಡಕ್ಕೆ ಪ್ರಮುಖ ಆಟಗಾರರ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ರಾಷ್ಟ್ರೀಯ ತಂಡದಲ್ಲಿರುವ ಹಾಗೂ ಭವಿಷ್ಯದ ಆಯ್ಕೆಗೆ ಪರಿಗಣನೆಯಲ್ಲಿರುವ ಬರೋಬ್ಬರಿ 13 ಪ್ರಮುಖ ಆಟಗಾರರು ಗಾಯಗೊಂಡು, ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ (CoE) ಚಿಕಿತ್ಸೆ ಮತ್ತು ರಿಹ್ಯಾಬಿಲಿಟೇಶನ್‌ನಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಹೊರಗೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ…

Read Full News
Even Leftover Food Tastes Like Wedding Meal Ex India Star ramesh On Shreyas Iyers First Win

Shreyas Iyer: ‘ಹಸಿದಾಗ ಹಳಸಿದ ಅನ್ನವೂ ಮದುವೆ ಊಟದಂತೆ’: ಶ್ರೇಯಸ್ ಅಯ್ಯರ್ ಗೆಲುವಿಗೆ ಮಾಜಿ ಕ್ರಿಕೆಟಿಗ ರಮೇಶ್ ಹಾಸ್ಯಮಯ ಪ್ರತಿಕ್ರಿಯೆ

ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಭಾರತ ತಂಡಕ್ಕೆ ಕೊನೆಗೂ ಜಿಂಬಾಬ್ವೆ ವಿರುದ್ಧ ಜಯ ಸಿಕ್ಕಿದೆ. ಸೂರ್ಯಕುಮಾರ್ ಯಾದವ್ ಅವರಿಂದ ನಾಯಕತ್ವ ವಹಿಸಿಕೊಂಡ ನಂತರ ಸತತ ಆರು ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದ್ದ ಶ್ರೇಯಸ್ ಅಯ್ಯರ್, (Shreyas Iyer) ಟಿ20 ನಾಯಕನಾಗಿ ತಮ್ಮ ಮೊದಲ ಗೆಲುವಿನ ಸಿಹಿ ಉಂಡಿದ್ದಾರೆ. ಹರಾರೆಯಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20ಯಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೋಲಿನ ಸರಣಿಗೆ ತೆರೆ ಎಳೆದಿದೆ. ಹಸಿದ…

Read Full News
Viral news anshul kamboj finally meets his lookalike

Viral News: ತಮ್ಮಂತೆಯೇ ಇರುವ ಪೊಲೀಸ್ ಅಧಿಕಾರಿಯನ್ನು ಭೇಟಿಯಾದ ಸಿಎಸ್‌ಕೆ ಸ್ಟಾರ್ ಅನ್ಶುಲ್ ಕಾಂಬೋಜ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದ ಅನ್ಶುಲ್ ಕಾಂಬೋಜ್ ಅವರಂತೆಯೇ ಕಾಣುವ (Viral News) ಪೊಲೀಸ್ ಅಧಿಕಾರಿಯನ್ನು ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ವೇಗಿ ಭೇಟಿ ಮಾಡಿದ್ದಾರೆ. ಇಬ್ಬರು ಒಂದೇ ರೀತಿ ಕಾಣುವ ವ್ಯಕ್ತಿಗಳು ಮುಖಾಮುಖಿಯಾಗುವುದು ಅಪರೂಪದ ಸಂಗತಿಯಾಗಿದ್ದು, ಸಿಎಸ್‌ಕೆ ತಂಡವು ಈ ವಿಶೇಷ ಭೇಟಿಗೆ ವೇದಿಕೆ ಕಲ್ಪಿಸಿಕೊಟ್ಟಿತ್ತು. ನೆಟ್ಟಿಗರಲ್ಲಿ ಆಶ್ಚರ್ಯ ಹುಟ್ಟುಹಾಕಿದ್ದ ಹೋಲಿಕೆ ಸಿಎಂ ವಿಜಯ್ ಅವರ ಪದಗ್ರಹಣದ ವೇಳೆ ವೇದಿಕೆಯ ಬಳಿ ಭದ್ರತಾ ಕಾರ್ಯದಲ್ಲಿದ್ದ…

Read Full News
Mohammad Yousuf Tears Into Pakistan cricket board politics

Pakistan: ಪಾಕ್‌ ಕ್ರಿಕೆಟ್‌ ಮಂಡಳಿ ವಿರುದ್ಧ ಗರಂ ಆದ ಮೊಹಮ್ಮದ್ ಯೂಸುಫ್

ಶ್ರೀಲಂಕಾ: ಭಾನುವಾರ ನಡೆದ ಟಿ20 ವಿಶ್ವಕಪ್ 2026 ರ ಪಂದ್ಯದಲ್ಲಿ ಭಾರತ ವಿರುದ್ಧ 61 ರನ್‌ಗಳ ಹೀನಾಯ ಸೋಲು ಅನುಭವಿಸಿದ ನಂತರ ಪಾಕಿಸ್ತಾನ (Pakistan) ಕ್ರಿಕೆಟ್‌ ತಂಡದ ಬಲ ಸಂಪೂರ್ಣ ಕುಸಿತ ಕಂಡಿದೆ. ಟಾಪ್‌ 8ಗೆ ಪಾಕ್‌ ಬರೋದು ಡೌಟ್‌ ಭಾರತ ವಿರುದ್ಧದ ಸೋಲಿನ ನಂತರ ಪಾಕಿಸ್ತಾನದ ಸೂಪರ್ 8 ಅರ್ಹತೆ ಪಡೆದುಕೊಳ್ಳುವುದು ತುಂಬಾ ಕಷ್ಟಕರ ಅನಿಸಿಕೊಂಡಿದೆ. ಇದಲ್ಲದೇ, ನಮೀಬಿಯಾ ವಿರುದ್ಧದ ಮುಂದಿನ ಪಂದ್ಯವು ಕಳಪೆ ರನ್ ರೇಟ್ ಕಾರಣದಿಂದಾಗಿ ನಾಕೌಟ್ ಮ್ಯಾಚ್‌ ಅನಿಸಿಕೊಂಡಿದೆ.  ಫೆಬ್ರವರಿ 15…

Read Full News