ಬೆಂಗಳೂರು: ಕಳವು ಮಾಡಲಾದ ಚಿನ್ನವನ್ನು ಕಾನೂನುಬಾಹಿರವಾಗಿ ಖರೀದಿ ಮಾಡಿ ಅಕ್ರಮ ಆಸ್ತಿ ಸಂಪಾದನೆ ಮಾಡುತ್ತಿದ್ದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಪ್ರಸಿದ್ಧ ‘ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ ಇ ಜಾರಿ ನಿರ್ದೇಶನಾಲಯ (ED) ಭಾರಿ ಆಘಾತ ನೀಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಅಡಿಯಲ್ಲಿ ಕ್ರಮ ಕೈಗೊಂಡಿರುವ ಇಡಿ ಅಧಿಕಾರಿಗಳು, ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ವಿಶಾಖಪಟ್ಟಣಂ ನಗರಗಳಲ್ಲಿರುವ ಅತ್ತಿಕಾ ಗೋಲ್ಡ್ ಸಂಸ್ಥೆಯ ಆಡಳಿತ ನಿರ್ದೇಶಕರು, ಪ್ರಮುಖ ಕಾರ್ಯನಿರ್ವಾಹಕರು ಮತ್ತು ಸಹಚರ ಪಿ.ಎಸ್. ಅಯೂಬ್‌ಗೆ ಸೇರಿದ ಒಟ್ಟು 16 ವಿವಿಧ ಸ್ಥಳಗಳ ಮೇಲೆ ಏಕಕಾಲಕ್ಕೆ ಸಮಗ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಏನಿದು ಅಟ್ಟಿಕಾ ಗೋಲ್ಡ್ ಪ್ರಕರಣ?
ಅಟ್ಟಿಕಾ ಗೋಲ್ಡ್ ಸಂಸ್ಥೆಯು ಸಾರ್ವಜನಿಕರಿಂದ ಹಾಗೂ ಕಳ್ಳತನದಿಂದ ಬಂದ ಚಿನ್ನಾಭರಣಗಳನ್ನು ನಿಯಮಬಾಹಿರವಾಗಿ ಪಡೆದುಕೊಂಡು, ಆ ಮೂಲಕ ಭಾರಿ ಪ್ರಮಾಣದ ‘ಪ್ರೊಸೀಡ್ಸ್ ಆಫ್ ಕ್ರೈಮ್’ (ಅಕ್ರಮ ಆದಾಯ) ಸೃಷ್ಟಿಸುತ್ತಿತ್ತು ಎಂಬ ಪ್ರಮುಖ ದೂರುಗಳ ಆಧಾರದ ಮೇಲೆ ಈ ವ್ಯಾಪಕ ದಾಳಿಗಳನ್ನು ನಡೆಸಲಾಗಿದೆ. ನಾಲ್ಕು ಪ್ರಮುಖ ನಗರಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಇಡಿ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಮತ್ತು ಸಾರ್ವಜನಿಕ ವಹಿವಾಟಿಗೆ ಸಂಬಂಧಿಸಿದ ಕಾನೂನುಬಾಹಿರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ईडी, बेंगलुरु ने पीएमएलए, 2002 के तहत मेसर्स अटिका गोल्ड प्राइवेट लिमिटेड, इसके निदेशकों एवं पी.एस. अयूब जैसे सहयोगियों को लक्षित करते हुए बेंगलुरु, चेन्नई, हैदराबाद एवं विशाखापत्तनम में 16 परिसरों में तलाशी अभियान चलाया। यह कार्रवाई चोरी किए गए सोने की आदतन खरीद एवं अपराध से… pic.twitter.com/bPbnWlhCQN
— ED (@dir_ed) September 29, 2026
ದಾಳಿಯಲ್ಲಿ ಏನೆಲ್ಲಾ ವಶಪಡಿಸಿಕೊಳ್ಳಲಾಗಿದೆ?
ಈ ದಾಳಿಯ ಸಮಯದಲ್ಲಿ ಅಧಿಕಾರಿಗಳು 7.52 ಲಕ್ಷ ರೂಪಾಯಿ ನಗದು ಹಣ, ಭಾರಿ ಮೌಲ್ಯದ ವಿದೇಶಿ ಕರೆನ್ಸಿ, ಹಾಗೂ ಬೃಹತ್ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ. ಕಾನೂನುಬಾಹಿರವಾಗಿ ಕಳವು ಚಿನ್ನವನ್ನು ವ್ಯಾಪಾರ ಮಾಡಿ ಗಳಿಸಿದ ಆಸ್ತಿ ಹಾಗೂ ಹಣಕಾಸಿನ ನೆಟ್‌ವರ್ಕ್ ಅನ್ನು ಪತ್ತೆಹಚ್ಚಲು ಇಡಿ ಅಧಿಕಾರಿಗಳು ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಹಚರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಮುಂದಿನ ತನಿಖೆ ಭರದಿಂದ ಸಾಗಿದೆ. ಈ ಬೃಹತ್ ಇಡಿ ಕಾರ್ಯಾಚರಣೆಯು ದಕ್ಷಿಣ ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಅತಿಯಾದ ಜಾಹೀರಾತು ಹಾಕಿ ಸಿನಿಮಾ ತಡವಾಗಿ ಆರಂಭ: ಮಲ್ಟಿಪ್ಲೆಕ್ಸ್‌ಗೆ 75,000 ರೂ. ದಂಡ ವಿಧಿಸಿದ ಗ್ರಾಹಕ ಆಯೋಗ!
