TOP NEWS

Haratalu Halappa: ಕೆಪಿಸಿ ಸಾಗುವಳಿದಾರರ ಸಮಸ್ಯೆ, ಹರತಾಳು ಹಾಲಪ್ಪಗೆ ಮನವಿ

Memorandum Submitted to Former Minister Haratalu Halappa to Resolve KPC Cultivators Issues

ಸಾಗರ: ಕರ್ನಾಟಕ ವಿದ್ಯುತ್ ನಿಗಮದ (KPC) ವ್ಯಾಪ್ತಿಯಲ್ಲಿ ಬರುವ ಸಾಗುವಳಿದಾರರು ಎದುರಿಸುತ್ತಿರುವ ವಿವಿಧ ಜಟಿಲ ಸಮಸ್ಯೆಗಳ ಕುರಿತು ಮಾಜಿ ಸಚಿವರು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ (Haratalu Halappa) ಅವರ ಗಮನಕ್ಕೆ ತರಲಾಗಿದೆ.

ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ

ಇಂದು ಹರತಾಳು ಹಾಲಪ್ಪ ಅವರನ್ನು ಭೇಟಿಯಾದ ನಿಯೋಗವು, ಕೆಪಿಸಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಎದುರಿಸುತ್ತಿರುವ ತೊಡಕುಗಳು ಹಾಗೂ ಕಾನೂನಾತ್ಮಕ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿತು. ರೈತರ ಸಮಸ್ಯೆಯನ್ನು ಆಲಿಸಿದ ಹರತಾಳು ಹಾಲಪ್ಪ ಅವರು, ಸಾಗುವಳಿದಾರರ ಹಿತರಕ್ಷಣೆಗೆ ಸೂಕ್ತ ಕ್ರಮ ವಹಿಸುವ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರದ ಗಮನ ಸೆಳೆದು ಸಮಸ್ಯೆ ಬಗೆಹರಿಸಲು ಶ್ರಮಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅರುಣ್ ಕರೂರು, ಗೋವರ್ಧನ ಅರಬಳ್ಳಿ, ಚಕ್ರಪಾಣಿ ಕೂಡಸರ, ಕೀರ್ತಿ ಅರಬಳ್ಳಿ, ರಾಮಚಂದ್ರ ಗೋಳಗೋಡು, ಸುರೇಂದ್ರ ಕರೂರು ಹಾಗೂ ಪ್ರಭಾಕರ ಹಾರಸಹಳ್ಳಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಹನೂರು ಎನ್‌ಕೌಂಟರ್ ಖಂಡನೀಯ, ಅವರೇನು ವೀರಪ್ಪನ್ ಮಟ್ಟದವರೇ?: ಹೆಚ್.ಡಿ. ಕುಮಾರಸ್ವಾಮಿ ಚಾಟಿ

ವರದಿ: ಪ್ರಶಾಂತ್‌ ಭಟ್

Leave a Reply

Your email address will not be published. Required fields are marked *