ನವದೆಹಲಿ: ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Raghav Chadha) ಅವರು ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಭೇಟಿಯನ್ನು ಅತ್ಯಂತ ಅರ್ಥಪೂರ್ಣ ಹಾಗೂ ಸುಂದರ ಅನುಭವ ಎಂದು ಬಣ್ಣಿಸಿರುವ ಅವರು, ಇದು ತಮ್ಮ ಜೀವನದಲ್ಲಿ ಎಂದಿಗೂ ನೆನಪಿನಲ್ಲಿ ಉಳಿಯುವಂತಹ ಬೆಳಗು ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಸಂಸದ
ಪ್ರಧಾನಿ ಅವರೊಂದಿಗಿನ ಭೇಟಿಯ ನಂತರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (ಟ್ವಿಟರ್) ಪೋಸ್ಟ್ ಹಂಚಿಕೊಂಡ ರಾಘವ್ ಚಡ್ಡಾ, ತಮ್ಮ ಅಮೂಲ್ಯವಾದ ಸಮಯವನ್ನು ನೀಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ. ಪ್ರಧಾನಿಯವರ ಸುದೀರ್ಘ ಅನುಭವ, ಮಾರ್ಗದರ್ಶನ ಮತ್ತು ಸಲಹೆಗಳಿಂದ ತಮಗೆ ಹೆಚ್ಚಿನ ಕಲಿಕೆಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ
A morning I will cherish.
— Raghav Chadha (@raghav_chadha) August 8, 2026
Had the privilege of meeting Hon’ble Prime Minister Shri @narendramodi Ji. A detailed and enriching interaction. Deeply grateful for his generous time and for the opportunity to benefit from his insights and guidance. 🇮🇳 pic.twitter.com/4A5cEwVCNg
ಎಎಪಿಯಿಂದ ಬಿಜೆಪಿಗೆ ಬಂದ ಚಡ್ಡಾ
ಕಳೆದ ಏಪ್ರಿಲ್‌ನಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಚಡ್ಡಾ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಸೇರಿದಂತೆ ಒಟ್ಟು ಏಳು ಎಎಪಿ ರಾಜ್ಯಸಭಾ ಸಂಸದರ ನಿರ್ಗಮನದ ನೇತೃತ್ವ ವಹಿಸಿದ್ದರು. ಬಿಜೆಪಿ ಸೇರಿದ ನಂತರ ರಾಜ್ಯಸಭೆಯಲ್ಲಿ ಹೊಸ ಜವಾಬ್ದಾರಿ ಪಡೆದುಕೊಂಡಿರುವ ಅವರು, ಮೇ 20 ರಿಂದ ಜಾರಿಗೆ ಬರುವಂತೆ ಪುನಾರಚನೆಗೊಂಡ ‘ಅರ್ಜಿಗಳ ಸಮಿತಿ’ಯ (ಕಮಿಟಿ ಆನ್ ಪೆಟಿಷನ್ಸ್) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಜೆನ್-ಝಿ ಯುವಕರು ದೇಶದ ದೊಡ್ಡ ಶಕ್ತಿ, ಪ್ರತಿಭಟನೆಯಲ್ಲಿ ನಿಂದಿಸುವವರಷ್ಟೇ ಇಡೀ ಪೀಳಿಗೆಯಲ್ಲ: ಉಲ್ಟಾ ಹೊಡೆದ ಕಂಗನಾ ರಣಾವತ್!
