ಹೈದರಾಬಾದ್: ರೆಬೆಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳು ‘ಸ್ಪಿರಿಟ್’ (Spirit) ಚಿತ್ರದ ಹೊಸ ಅಪ್ಡೇಟ್ಗಾಗಿ ಕಾತರದಿಂದ ಕಾಯುತ್ತಿರುವ ಬೆನ್ನಲ್ಲೇ, ಚಿತ್ರದ ಸೆಟ್ನಿಂದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. 2026ರ ಹೊಸ ವರ್ಷದ ಆರಂಭದಲ್ಲಿ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಇದೀಗ ಹೈದರಾಬಾದ್ನ ಕೊಂಪಲ್ಲಿಯಲ್ಲಿ ನಡೆಯುತ್ತಿರುವ ಚಿತ್ರೀಕರಣದ ವೇಳೆ ಪ್ರಭಾಸ್ ಅವರ ಫೋಟೋವೊಂದು ಲೀಕ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಈ ಫೋಟೋದಲ್ಲಿ ಪ್ರಭಾಸ್ ಸಂಪೂರ್ಣ ಬಿಳಿ ಬಣ್ಣದ ಉಡುಪಿನಲ್ಲಿ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ, ಉದ್ದನೆಯ ಅಲೆಅಲೆಯಾದ ಕೂದಲಿನೊಂದಿಗೆ ಸ್ಟೈಲಿಶ್ ಆಗಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
AI ಫೋಟೋ ಎಂದ ಫ್ಯಾನ್ಸ್
ಕೆಲ ಕಾಲ ಅಭಿಮಾನಿಗಳ ನಿರೀಕ್ಷೆ ಹೆಚ್ಚು ಮಾಡಿದ್ದ ಈ ಫೋಟೋದ ಅಸಲಿ ಕಥೆ ಕೊನೆಗೂ ಬಯಲಾಗಿದೆ. ಈ ಫೋಟೋ ನಿಜವಾಗಿದ್ದಲ್ಲ, AI ಬಳಕೆ ಮಾಡಿ ತಯಾರಿಸಲಾಗಿದೆ ಎಂದು ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ
ಸಾಕಷ್ಟು ಚರ್ಚೆ ಹುಟ್ಟುಹಾಕಿರುವ ಸಿನಿಮಾ
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಈಗಾಗಲೇ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ನಟಿ ದೀಪಿಕಾ ಪಡುಕೋಣೆ ಡೇಟ್ಸ್ ಸಮಸ್ಯೆಯಿಂದಾಗಿ ಈ ಚಿತ್ರದಿಂದ ಹೊರಬಂದಿದ್ದರು ಎಂಬ ಸುದ್ದಿಯ ನಡುವೆಯೂ ಸಿನಿಮಾ ಮೇಲಿನ ನಿರೀಕ್ಷೆ ಕಡಿಮೆಯಾಗಿಲ್ಲ. 2025ರ ನವೆಂಬರ್ನಲ್ಲಿ ಚಿತ್ರೀಕರಣ ಆರಂಭಿಸಿದ್ದ ತಂಡವು ಇಲ್ಲಿಯವರೆಗೆ ಹೆಚ್ಚಿನ ವಿವರಗಳನ್ನು ಗೌಪ್ಯವಾಗಿಟ್ಟಿತ್ತು. ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.
ಚಿತ್ರದ ಕಥೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳದಿದ್ದರೂ, ಪ್ರಭಾಸ್ ಇದರಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ತೀವ್ರವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಪ್ರಭಾಸ್ ಅವರ ಜನ್ಮದಿನದಂದು ಬಿಡುಗಡೆಯಾದ ಆಡಿಯೋ ಟೀಸರ್ನಲ್ಲಿ ಪ್ರಕಾಶ್ ರಾಜ್ ಮತ್ತು ವಿವೇಕ್ ಓಬೆರಾಯ್ ಪ್ರಮುಖ ಪಾತ್ರಗಳಲ್ಲಿದ್ದಾರೆ ಎಂಬುದು ಖಚಿತವಾಗಿತ್ತು. ಟೀಸರ್ನ ಕೊನೆಯಲ್ಲಿ “ಬಾಲ್ಯದಿಂದಲೂ ನನಗೊಂದು ಕೆಟ್ಟ ಅಭ್ಯಾಸವಿದೆ” ಎಂಬ ಪ್ರಭಾಸ್ ಅವರ ಸಂಭಾಷಣೆ ಸಖತ್ ವೈರಲ್ ಆಗಿತ್ತು. ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಪ್ರಭಾಸ್ ಅವರು ಜೈಲಿನಲ್ಲಿರುವ ಐಪಿಎಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
SUPERSTAR #PRABHAS Look Leaked from Spirit Shooting 🔥🔥#Spirit #Sandeepreddyvanga pic.twitter.com/qfgLms8sDM
— Girish ✨ (@Girish__28) May 14, 2026
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಈ ಹಿಂದೆ ‘ಅನಿಮಲ್’ ಚಿತ್ರದಲ್ಲಿ ನಟಿ ತೃಪ್ತಿ ದಿಮ್ರಿ ಅವರೊಂದಿಗೆ ಕೆಲಸ ಮಾಡಿದ್ದರು. ಈಗ ಅದೇ ಜೋಡಿ ‘ಸ್ಪಿರಿಟ್’ ಚಿತ್ರದ ಮೂಲಕ ಮತ್ತೆ ಒಂದಾಗಿದೆ. ಪ್ರಭಾಸ್ ಮತ್ತು ತೃಪ್ತಿ ದಿಮ್ರಿ ಮುಖ್ಯ ಭೂಮಿಕೆಯಲ್ಲಿರುವ ಈ ಆಕ್ಷನ್ ಎಂಟರ್ಟೈನರ್ ಸಿನಿಮಾ 2027ರ ಮಾರ್ಚ್ 5ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ವಿವೇಕ್ ಓಬೆರಾಯ್ ಅವರ ಪ್ರಮುಖ ಪಾತ್ರವು ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: 25 ವರ್ಷಗಳ ಸುಂದರ ಪಯಣಕ್ಕೆ ವಿರಾಮ: ಪತಿಯ ಸಾಧನೆಗಳನ್ನೇ ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ಶ್ರೀವಿದ್ಯಾ
