Karuppu: ತ್ರಿಷಾ-ಸೂರ್ಯ ಅಭಿನಯದ ಕುರುಪ್ಪು ಬೆಳಗಿನ ಶೋಗೆ ಸಿಎಂ ವಿಜಯ್‌ ಒಪ್ಪಿಗೆ

cm vijay gives approval for suriya and trisha karuppu morning show

ನಟಿ ತ್ರಿಶಾ ಕೃಷ್ಣನ್ ಹಾಗೂ ಸೂರ್ಯ ನಟನೆಯ ಬಹುನಿರೀಕ್ಷಿತ ‘ಕರುಪ್ಪು’ (Karuppu) ಚಿತ್ರದ ಬಿಡುಗಡೆಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿಶೇಷ ಬೆಂಬಲ ನೀಡಿದ್ದಾರೆ. ಮೇ 14ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಈ ಸಿನಿಮಾಕ್ಕೆ ಬೆಳಿಗ್ಗೆ 9 ಗಂಟೆಯ ವಿಶೇಷ ಪ್ರದರ್ಶನಗಳನ್ನು (Special Shows) ನಡೆಸಲು ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡವು ಮುಖ್ಯಮಂತ್ರಿ ವಿಜಯ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದೆ.

ನನ್ನ ಗೆಳೆಯನ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ ಎಂದ ಸೂರ್ಯ

ಸಾಮಾನ್ಯವಾಗಿ ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಕಾನೂನು ಸುವ್ಯವಸ್ಥೆಯ ಕಾರಣಕ್ಕೆ ಮುಂಜಾನೆಯ ಪ್ರದರ್ಶನಗಳಿಗೆ ನಿರ್ಬಂಧವಿರುತ್ತದೆ. ಆದರೆ, ಈ ಚಿತ್ರಕ್ಕೆ ಬೆಳಿಗ್ಗೆ 9 ಗಂಟೆಯಿಂದಲೇ ಪ್ರದರ್ಶನ ಆರಂಭಿಸಲು ಸಿಎಂ ವಿಜಯ್ ಅವಕಾಶ ಕಲ್ಪಿಸಿಕೊಟ್ಟಿರುವುದು ಅಭಿಮಾನಿಗಳಲ್ಲಿ ಸಂಸಲನ ಮೂಡಿಸಿದೆ. ಇನ್ನು ನಟ ಸೂರ್ಯ ಅವರು ಕೂಡ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದು, ತಮಿಳುನಾಡಿನ ಜನರು ನನ್ನ ಗೆಳೆಯ ವಿಜಯ್ ಮೇಲೆ ದೊಡ್ಡ ನಂಬಿಕೆ ಇಟ್ಟಿದ್ದಾರೆ ಎಂದು ಹಾರೈಸಿದ್ದಾರೆ.

ಇತ್ತೀಚೆಗೆ ನಡೆದ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಟಿ ತ್ರಿಶಾ ಕೃಷ್ಣನ್ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಸಮಾರಂಭದಲ್ಲಿ ವಿಜಯ್ ಅವರ ಭಾಷಣ ಕೇಳಿ ತ್ರಿಶಾ ಭಾವುಕರಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ, ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಅವರನ್ನು ತ್ರಿಶಾ ಪ್ರೀತಿಯಿಂದ ಅಪ್ಪಿಕೊಂಡ ವಿಡಿಯೋ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಕಾರ್ಯಕ್ರಮದ ನಂತರ “ಪ್ರೀತಿ ಯಾವಾಗಲೂ ಗಟ್ಟಿಯಾಗಿ ಧ್ವನಿಸುತ್ತದೆ” ಎಂದು ತ್ರಿಶಾ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದರು.

ಆರ್.ಜೆ. ಬಾಲಾಜಿ ನಿರ್ದೇಶನದ ಈ ‘ಕರುಪ್ಪು’ ಸಿನಿಮಾವು ಆ್ಯಕ್ಷನ್ ಕಥಾಹಂದರವನ್ನು ಹೊಂದಿದ್ದು, ಸೂರ್ಯ ಮತ್ತು ತ್ರಿಶಾ ಅವರೊಂದಿಗೆ ಇಂದ್ರನ್ಸ್, ನಟ್ಟಿ, ಸ್ವಾಸಿಕಾ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಸಾಯಿ ಅಭ್ಯಂಕರ್ ಸಂಗೀತ ನೀಡಿರುವ ಈ ಚಿತ್ರವು ಮೇ 14ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಜಯ್ ಮುಖ್ಯಮಂತ್ರಿಯಾದ ನಂತರ ಸಿನಿಮಾ ಕ್ಷೇತ್ರಕ್ಕೆ ನೀಡುತ್ತಿರುವ ಮೊದಲ ದೊಡ್ಡ ಬೆಂಬಲ ಇದಾಗಿದ್ದು, ಚಿತ್ರರಂಗದಲ್ಲಿ ಈ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ

ಇದನ್ನೂ ಓದಿ: ಅಮೃತಸರದ ಸುವರ್ಣ ಮಂದಿರದಲ್ಲಿ ದರ್ಶನ್ ಪತ್ನಿ ಪ್ರಾರ್ಥನೆ: “ನಗುವಿನ ಹಿಂದೆ ದೈವದತ್ತ ಶಕ್ತಿಯಿದೆ” ಎಂದ ವಿಜಯಲಕ್ಷ್ಮಿ!

Leave a Reply

Your email address will not be published. Required fields are marked *