Trisha Krishnan: ತ್ರಿಶಾ ಗಣೇಶ ಪೂಜೆ ಫೋಟೋದಲ್ಲಿ ಮದರ್ ಮೇರಿ ಚಿತ್ರ: ನೆಟ್ಟಿಗರ ಸೂಕ್ಷ್ಮ ಕಣ್ಣಿಗೆ ಬಿದ್ದ ಫೋಟೋ ವೈರಲ್
ಚೆನ್ನೈ: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ತಮ್ಮ ನಿವಾಸದಲ್ಲಿ ನಡೆದ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಚಿತ್ರಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ. ಪ್ರಸ್ತುತ ವಿದೇಶದಲ್ಲಿದ್ದು ಹಬ್ಬಕ್ಕೆ ಮನೆಗೆ ಬರಲಾಗದ ಕಾರಣ ತಮ್ಮ ಕುಟುಂಬಸ್ಥರು ಪ್ರತಿಷ್ಠಾಪಿಸಿದ್ದ ಗಣಪತಿಯ ಪೂಜಾ ಕ್ಷಣಗಳನ್ನು ಅವರು ಹಂಚಿಕೊಂಡು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಲಂಡನ್‌ನಲ್ಲಿ ಹಬ್ಬ ಆಚರಿಸಿದ ನಟಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹಾಗೂ…
