TOP NEWS

Mercury Transit: ವೃಷಭ ರಾಶಿಯಲ್ಲಿ ಬುಧ ಸಂಚಾರ, ರಾಜಯೋಗ ಸಿಗಲಿದೆ

Mercury Transit in taurus lucky to these zodiac sign

ಬುದ್ಧಿವಂತಿಕೆ ಮತ್ತು ಜ್ಞಾನದ ಕಾರಕನಾದ ಬುಧ (Mercury Transit) ಗ್ರಹವು ಮೇ 15ರಿಂದ 29ರವರೆಗೆ ವೃಷಭ ರಾಶಿಯಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯು ಬುಧನಿಗೆ ಅತ್ಯಂತ ಪ್ರಿಯವಾದ ಮಿತ್ರ ಕ್ಷೇತ್ರವಾಗಿದೆ. ತನ್ನ ಸ್ವಕ್ಷೇತ್ರಗಳಾದ ಮಿಥುನ ಮತ್ತು ಕನ್ಯಾ ರಾಶಿಯ ನಂತರ ಬುಧನು (‌Mercury Transit) ವೃಷಭ ರಾಶಿಯಲ್ಲಿ ಹೆಚ್ಚು ಬಲಿಷ್ಠನಾಗಿರುತ್ತಾನೆ. ಈ 15 ದಿನಗಳ ಅವಧಿಯಲ್ಲಿ ಬುಧನ ಸಂಚಾರವು ಕೆಲವು ರಾಶಿಗಳ ಮೇಲೆ ಅತ್ಯಂತ ಸಕಾರಾತ್ಮಕ ಪ್ರಭಾವ ಬೀರಲಿದ್ದು, ಆರ್ಥಿಕ ಮತ್ತು ವೃತ್ತಿ ಜೀವನದಲ್ಲಿ ಅದ್ಭುತ ಬದಲಾವಣೆಗಳು ಕಂಡುಬರಲಿವೆ.

ಈ ರಾಶಿಯವರಿಗೆ ಅದೃಷ್ಟದ ಹೊಳೆ

ವೃಷಭ ರಾಶಿಯವರಿಗೆ ಈ ಅವಧಿಯಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. ಸ್ವಂತ ರಾಶಿಯಲ್ಲೇ ಬುಧನ ಸಂಚಾರವಿರುವುದರಿಂದ ಆರ್ಥಿಕವಾಗಿ ದೊಡ್ಡ ಮಟ್ಟದ ಲಾಭ ಉಂಟಾಗಲಿದೆ. ಷೇರು ಮಾರುಕಟ್ಟೆ ಮತ್ತು ಹೂಡಿಕೆಗಳಿಂದ ನಿರೀಕ್ಷಿತ ಆದಾಯ ಸಿಗಲಿದೆ. ವೃತ್ತಿ ಜೀವನದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಮನ್ನಣೆ ಸಿಗಲಿದ್ದು, ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಲಿದೆ. ವೈಯಕ್ತಿಕ ಸಮಸ್ಯೆಗಳಿಂದ ಮುಕ್ತಿ ದೊರೆಯುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭೂತಪೂರ್ವ ಯಶಸ್ಸು ನಿಮ್ಮದಾಗಲಿದೆ.

ಕರ್ಕಾಟಕ ರಾಶಿಯವರಿಗೆ ಬುಧನು ಲಾಭ ಸ್ಥಾನದಲ್ಲಿ ಸಂಚರಿಸುತ್ತಿರುವುದರಿಂದ ವಿದೇಶ ಪ್ರಯಾಣದ ಕನಸು ನನಸಾಗಲಿದೆ. ಉದ್ಯೋಗದ ನಿಮಿತ್ತ ಅನ್ಯ ದೇಶಗಳಿಗೆ ತೆರಳುವ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಉದ್ಯೋಗದಲ್ಲಿ ಪದೋನ್ನತಿ ಹೊಂದುವ ಸಾಧ್ಯತೆ ಹೆಚ್ಚಿದ್ದು, ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣಲಿದ್ದೀರಿ. ಹೂಡಿಕೆಗಳಿಂದ ಕೈತುಂಬಾ ಹಣ ಬರಲಿದ್ದು, ಆರ್ಥಿಕ ಸ್ಥಿತಿ ಭದ್ರವಾಗಲಿದೆ.

ಸಿಂಹ ರಾಶಿಯವರಿಗೆ ಹತ್ತನೇ ಮನೆಯಲ್ಲಿ ಬುಧನ ಸಂಚಾರವಿರುವುದರಿಂದ ವೃತ್ತಿ ಕ್ಷೇತ್ರದಲ್ಲಿ ಅಧಿಕಾರಿಗಳ ಬೆಂಬಲ ದೊರೆಯಲಿದೆ. ಕೌಟುಂಬಿಕ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ನೆಮ್ಮದಿ ಸಿಗಲಿದ್ದು, ಆದಾಯ ಹೆಚ್ಚಿಸುವ ನಿಮ್ಮ ಪ್ರಯತ್ನಗಳು ಫಲ ನೀಡಲಿವೆ. ನಿರುದ್ಯೋಗಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಕರೆ ಬರಲಿದ್ದು, ಸಂದರ್ಶನಗಳಲ್ಲಿ ಯಶಸ್ಸು ಕಾಣುವಿರಿ.

ಕನ್ಯಾ ರಾಶಿಯವರ ಅದೃಷ್ಟ ಡಬಲ್

ಕನ್ಯಾ ರಾಶಿಯ ಅಧಿಪತಿಯಾದ ಬುಧನು ಭಾಗ್ಯ ಸ್ಥಾನದಲ್ಲಿ ಸಂಚರಿಸುತ್ತಿರುವುದು ನಿಮ್ಮ ಅದೃಷ್ಟವನ್ನು ಹೆಚ್ಚಿಸಲಿದೆ. ಹಿರಿಯರಿಂದ ಆಸ್ತಿ ಲಭಿಸುವ ಸಾಧ್ಯತೆ ಇದೆ. ಅನಾರೋಗ್ಯದ ಸಮಸ್ಯೆಗಳಿಂದ ಗುಣಮುಖರಾಗುವಿರಿ ಹಾಗೂ ಸಮಾಜದಲ್ಲಿ ಗೌರವ ಮರ್ಯಾದೆಗಳು ವೃದ್ಧಿಸಲಿವೆ. ವಿವಿಧ ಮೂಲಗಳಿಂದ ಧನಾಗಮನವಾಗಲಿದ್ದು, ಆರ್ಥಿಕ ಸಂಕಷ್ಟಗಳು ದೂರವಾಗಲಿವೆ.

ಮಕರ ಮತ್ತು ಕುಂಭ ರಾಶಿಯವರಿಗೂ ಈ ಬುಧ ಸಂಚಾರವು ಶುಭ ಫಲಗಳನ್ನು ನೀಡಲಿದೆ. ಮಕರ ರಾಶಿಯವರಿಗೆ ವಿವಾಹ ಯೋಗ ಕೂಡಿ ಬರಲಿದ್ದು, ಆಸ್ತಿ ಸಂಬಂಧಿತ ಒಪ್ಪಂದಗಳಿಂದ ಲಾಭವಾಗಲಿದೆ. ಇನ್ನು ಕುಂಭ ರಾಶಿಯವರಿಗೆ ಕೆಲಸದಲ್ಲಿ ಅಧಿಕಾರ ಪ್ರಾಪ್ತಿಯಾಗುವ ಯೋಗವಿದೆ. ಆರೋಗ್ಯ ಸುಧಾರಣೆಯ ಜೊತೆಗೆ ಸಂತಾನದ ನಿರೀಕ್ಷೆಯಲ್ಲಿದ್ದವರಿಗೆ ಶುಭ ವಾರ್ತೆ ಕೇಳಿಬರಲಿದೆ. ಒಟ್ಟಾರೆಯಾಗಿ ಈ 15 ದಿನಗಳ ಕಾಲ ಬುಧನ ಕೃಪೆಯಿಂದ ಈ ಆರು ರಾಶಿಗಳ ಜೀವನದಲ್ಲಿ ಸುಖ-ಸಮೃದ್ಧಿ ನೆಲೆಸಲಿದೆ.

ಇದನ್ನೂ ಓದಿ: ತಟ್ಟೆಯಲ್ಲಿ ಕೈ ತೊಳೆಯುವ ಅಭ್ಯಾಸ ಇದೆಯಾ? ಹಾಗಾದ್ರೆ ಈ ಸಮಸ್ಯೆ ಗ್ಯಾರಂಟಿ

Leave a Reply

Your email address will not be published. Required fields are marked *