Zombie Drugs: ಮಹಾರಾಷ್ಟ್ರದಲ್ಲೂ ಜಾಂಬಿ ಡ್ರಗ್ಸ್ ಪ್ರಭಾವ, ವೈರಲ್‌ ವಿಡಿಯೋ ಮೂಡಿಸಿದ ಆತಂಕ

Zombie Drugs viral video creates tension in Maharashtra people

ಮುಂಬೈ: ಮಹಾರಾಷ್ಟ್ರದ ಮೀರಾ-ಭಯಂದರ್ ಪ್ರದೇಶದಲ್ಲಿ ಯುವಕನೊಬ್ಬ ರಸ್ತೆಯ ಮಧ್ಯೆ ಗಂಟೆಗಟ್ಟಲೆ ಪ್ರತಿಮೆಯಂತೆ ಅಲುಗಾಡದೆ ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿವೆ. ಈತನ ವಿಚಿತ್ರ ವರ್ತನೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದು, ವಿದೇಶಗಳಲ್ಲಿ ಭೀತಿ ಹುಟ್ಟಿಸಿರುವ ‘ಜಾಂಬಿ ಡ್ರಗ್ಸ್’ (Zombie Drugs) ಈಗ ಮುಂಬೈಗೂ ಕಾಲಿಟ್ಟಿದೆಯೇ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಏನಿದೆ ಈ ವಿಡಿಯೋದಲ್ಲಿ?

ವೈರಲ್ ಆಗಿರುವ ದೃಶ್ಯಗಳಲ್ಲಿ ಈ ಯುವಕ ರಸ್ತೆಯ ಬದಿಯಲ್ಲಿ ಯಾವುದೇ ಚಲನೆಯಿಲ್ಲದೆ, ಅರೆಪ್ರಜ್ಞಾವಸ್ಥೆಯಲ್ಲಿ ನಿಂತಿರುವುದು ಕಂಡುಬಂದಿದೆ. ಹಗಲು ಮತ್ತು ರಾತ್ರಿ ವೇಳೆ ಈತ ಇದೇ ರೀತಿ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿಗಳು, ಆತ ಯಾವುದೋ ಅಪಾಯಕಾರಿ ಮಾದಕ ದ್ರವ್ಯ ಸೇವಿಸಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆಯೇ ಸಾರ್ವಜನಿಕರಲ್ಲಿ ಸುರಕ್ಷತೆಯ ಬಗ್ಗೆ ಭೀತಿ ಶುZombie Drugsರುವಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಮೀರಾ-ಭಯಂದರ್ ವಾಸೈ ವಿರಾರ್ (MBVV) ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವಿಡಿಯೋಗಳು ಅಸಲಿಯೇ ಅಥವಾ ಯಾರಾದರೂ ಕುಚೇಷ್ಟೆಗಾಗಿ ಮಾಡಿದ್ದೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆ ಯುವಕನಿಗೆ ಯಾವುದಾದರೂ ಗಂಭೀರ ಆರೋಗ್ಯ ಸಮಸ್ಯೆ ಇದೆಯೇ ಅಥವಾ ಇದು ಮಾದಕ ವ್ಯಸನದ ಅಡ್ಡಪರಿಣಾಮವೇ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಸದ್ಯಕ್ಕೆ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿರುವ ಪೊಲೀಸರು, ತನಿಖೆಯ ನಂತರವಷ್ಟೇ ಅಸಲಿ ಸತ್ಯ ತಿಳಿಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಬಾಲಿವುಡ್‌ ಸ್ಟೈಲ್‌ನಲ್ಲಿ ಅಮೆರಿಕಾಗೆ ಇರಾನ್‌ ಟಾಂಗ್

Leave a Reply

Your email address will not be published. Required fields are marked *